Featured

ಮಂಗಳೂರು: ಉಳ್ಳಾಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಯು.ಟಿ ಖಾದರ್‌ ಆಸ್ತಿ ವಿವರ – Vishwanews24

ಮಂಗಳೂರು: ಉಳ್ಳಾಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಯು.ಟಿ ಖಾದರ್‌ ಆಸ್ತಿ ವಿವರ

ಮಂಗಳೂರು: ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ.ಖಾದರ್‌ ₹3.41 ಕೋಟಿ ಆಸ್ತಿಯ ಒಡೆಯ. ಬಿಎಎಲ್‌ಎಲ್‌ಬಿ ಪದವೀಧರರಾಗಿರುವ ಖಾದರ್‌ ವಕೀಲರಾಗಿದ್ದು, ಕೃಷಿ ಹಾಗೂ ಕಟ್ಟಡಗಳ ಬಾಡಿಗೆ ರೂಪದಲ್ಲಿ ವಾರ್ಷಿಕ ₹10.58 ಲಕ್ಷ ವರಮಾನ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಅವರ ಬಳಿ ₹60.24 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ₹2.81 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ ಲಮೀಸಾ ಬಳಿ ₹1.48 ಕೋಟಿ ಚರಾಸ್ತಿ ಹಾಗೂ ₹1.41 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಮಗಳು ಹವ್ವಾ ನಸೀಮಾ ಅವರ ಬಳಿ ₹67.32 ಲಕ್ಷ ಆಸ್ತಿ ಇದೆ. ಖಾದರ್‌ ಕುಟುಂಬದ ಒಟ್ಟು ಆಸ್ತಿಯ ಪ್ರಮಾಣ ₹6.98 ಕೋಟಿ.

ಅವರ ಪತ್ನಿ ಉದ್ಯಮಿಯಾಗಿದ್ದು ಬೆಂಗಳೂರಿನ ಹೈಪರ್ ಮಾರ್ಟ್‌ ಮಾಲ್‌ನ ಪಾಲುದಾರರು. ಟೆಕ್ನೋ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಹವ್ವಾ ಪೆಟ್ರೋಲ್‌ ಪಂಪ್‌ ಮಾಲಕಿ ಯಾಗಿದ್ದು, ವಾರ್ಷಿಕ ₹11.86 ಲಕ್ಷ ವರಮಾನ ಹೊಂದಿದ್ದಾರೆ.

ಖಾದರ್‌ ವಿರುದ್ಧ ಕೋವಿಡ್‌ ನಿರ್ಬಂಧ ಜಾರಿಯಲ್ಲಿದ್ದಾಗ ಮಾಸ್ಕ್‌ ಧರಿಸದಿರುವುದು, ಅಂತರ ಕಾಪಾಡದಿರುವುದು, ಪೊಲೀಸ್‌ ಆದೇಶಉಲ್ಲಂಘನೆಗೆ ಸಂಬಂಧಿಸಿ ಸಾತನೂರು, ರಾಮನಗರ ಹಾಗೂ ಬೆಂಗಳೂರಿನಲ್ಲಿ ಪ್ರಕರಣಗಳು ದಾಖಲಾಗಿವೆ.

ಖಾದರ್‌ ಬಳಿ ₹60ಸಾವಿರ ಹಾಗೂ ಪತ್ನಿ ಬಳಿ ₹94 ಸಾವಿರ ನಗದು ಇದೆ. ಠೇವಣಿ ಹಾಗೂ ಬಾಂಡ್‌ ರೂಪದಲ್ಲಿ ಖಾದರ್‌ ₹12.52 ಲಕ್ಷ ಹಾಗೂ ಅವರ ಪತ್ನಿ ₹3.64 ಲಕ್ಷ ಹೂಡಿಕೆ ಮಾಡಿದ್ದಾರೆ. ಖಾದರ್‌ ಸಂಸ್ಥೆಯೊಂದಕ್ಕೆ ₹25 ಲಕ್ಷ ಸಾಲ ನೀಡಿದ್ದಾರೆ.

ಖಾದರ್‌ ಬಳಿ ವಾಹನ ಹಾಗೂ ಚಿನ್ನ ಇಲ್ಲ. ಆದರೆ, ಅವರ ಪತ್ನಿ ಬಳಿ 75ಸಾವಿರ ಮೌಲ್ಯದ ಟುಸ್ಸಾನ್ ಕಾರ್‌, ₹22.80 ಲಕ್ಷ ಮೌಲ್ಯದ ಟಾಟಾ ಟ್ಯಾಂಕರ್‌ ಇದೆ. ಪತ್ನಿ ಬಳಿ ತಂದೆ ಉಡುಗೊರೆಯಾಗಿ ನೀಡಿದ ಅರ್ಧ ಕೆ.ಜಿ. ಚಿನ್ನಾಭರಣಗಳಿವೆ. ಅದರ ಮೌಲ್ಯ ₹28 ಲಕ್ಷ. ಮಗಳ ಬಳಿ ಉಡುಗೊರೆ ರೂಪದಲ್ಲಿ ಪಡೆದ 300 ಗ್ರಾಂ ಚಿನ್ನಾಭರಣಗಳಿದ್ದು, ಅದರ ಮೌಲ್ಯ ₹16.80 ಲಕ್ಷ. ಖಾದರ್‌ ಪತ್ನಿ ಹವ್ವಾ ಪೆಟ್ರೋಲ್‌ ಬಂಕ್‌ನಲ್ಲಿ ₹87 ಲಕ್ಷ ಹಾಗೂ ಮಗಳು ಬೆಂಗಳೂರಿನ ಹೈಪರ್‌ ಮಾರ್ಕೆಟ್‌ನಲ್ಲಿ ₹50 ಲಕ್ಷ ಹೂಡಿಕೆ ಮಾಡಿದ್ದಾರೆ.

ಖಾದರ್‌ ಅವರಿಗೆ ಪುಣಚ ಹಾಗೂ ಉಪ್ಪಳದಲ್ಲಿ ಒಟ್ಟು 3 ಎಕರೆ 27 ಸೆಂಟ್ಸ್‌ ಕೃಷಿ ಭೂಮಿಯಲ್ಲಿ ಪಾಲು ಇದೆ. ಅದರ ಮೌಲ್ಯ ₹6.21 ಲಕ್ಷ. ಅವರು ಪುಣಚ ಹಾಗೂ ಕೇರಳದ ಉಪ್ಪಳ ಮತ್ತು ಮಜಿಬೈಲ್‌ಗಳಲ್ಲಿ ಒಟ್ಟು 0.374 ಎಕರೆ ಕೃಷಿಯೇತರ ಜಮೀನು ಹೊಂದಿದ್ದು, ಅದರ ಮೌಲ್ಯ ₹1.73 ಕೋಟಿ. ಕದ್ರಿಯಲ್ಲಿ 0.28 ಸೆಂಟ್ಸ್‌ ಹಾಗೂ ಅತ್ತಾವರದಲ್ಲಿ 0.08 ಸೆಂಟ್ಸ್‌ ವಿಸ್ತೀರ್ಣದ ಜಮೀನು ಮತ್ತು ಕಟ್ಟಡ ಹೊಂದಿದ್ದು ಅದರ ಮೌಲ್ಯ ₹1.01 ಕೋಟಿ.

ಪತ್ನಿ ಲಮೀಸಾ ಕೇರಳದ ನೀಲೇಶ್ವರದಲ್ಲಿ 51 ಸೆಂಟ್ಸ್ ಕೃಷಿ ಭೂಮಿ (₹7.34 ಲಕ್ಷ), ಕೇರಳದ ಹೊಸದುರ್ಗ ಪೆರಿಯದಲ್ಲಿ 3 ಎಕರೆ 25 ಸೆಂಟ್ಸ್‌ ಕೃಷಿಯೇತರ ಜಮೀನು (₹27.5 ಲಕ್ಷ) ಹೊಂದಿದ್ದು, ಅವುಗಳ ಒಟ್ಟು ಮೌಲ್ಯ ₹46.74 ಲಕ್ಷ. ತೆಕ್ಕಿಲದಲ್ಲಿ 0.46 ಸೆಂಟ್ಸ್‌, ನಗರದ ಪದವು ಎಂಬಲ್ಲಿ 1,522 ಚ.ಅಡಿ ವಿಸ್ತೀರ್ಣದ ಫ್ಲ್ಯಾಟ್‌ ಹೊಂದಿದ್ದು ಅವುಗಳ ಒಟ್ಟು ಮೌಲ್ಯ ₹61.82 ಲಕ್ಷ.

ಖಾದರ್‌ ಅವರು 2018ರ ಚುನಾವಣೆ ಸಂದರ್ಭದಲ್ಲಿ ಕುಟುಂಬವು ₹2.47 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ ಎಂಬುದಾಗಿ ಘೋಷಿಸಿಕೊಂಡಿದ್ದರು.

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

1 day ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

1 day ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

4 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

4 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

4 days ago