ಕಾರ್ಕಳ : ಗೂಗಲ್ ಪೇ ಮೂಲಕ ಮನೆ ಮಾಲೀಕನ ಖಾತೆಯಿಂದ 9 ಲಕ್ಷ ರೂ. ವರ್ಗಾಯಿಸಿ ವಂಚಿಸಿದ ಹೋಮ್ ನರ್ಸ್‌ – vishwanews24

Featured, ಉಡುಪಿ

ಕಾರ್ಕಳ : ಗೂಗಲ್ ಪೇ ಮೂಲಕ ಮನೆ ಮಾಲೀಕನ ಖಾತೆಯಿಂದ 9 ಲಕ್ಷ ರೂ. ವರ್ಗಾಯಿಸಿ ವಂಚಿಸಿದ ಹೋಮ್ ನರ್ಸ್‌

ಕಾರ್ಕಳ: ಹೋಮ್ ನರ್ಸ್ ಗೂಗಲ್ ಪೇ ಮೂಲಕ ಮನೆ ಮಾಲೀಕನ ಖಾತೆಯಿಂದ ತನ್ನ ಖಾತೆಗೆ 9.80 ಲಕ್ಷ ವರ್ಗಾಯಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.

ಕಾರ್ತಿಕ್ ಶೆಟ್ಟಿ ಹಣ ವಂಚಿಸಿದ ಅರೋಪಿ.ಈ ಬಗ್ಗೆ, ಕಸಬಾ ಗ್ರಾಮದ ಶಶಿಧರ್ (75) ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುಷ್ಪ-2 ಕಾಲ್ತುಳಿತ ಪ್ರಕರಣ : FIR ರದ್ದತಿಗೆ ಹೈಕೋರ್ಟ್‌ ಮೆಟ್ಟಿಲೇರಿದ ಅಲ್ಲು ಅರ್ಜುನ್ – vishwanews24

 

ಕಸಬಾ ಗ್ರಾಮದ ಶಶಿಧರ್ ಅವರ ಕೋರಿಕೆ ಯಂತೆ ಅಲೈಟ್‌ಕೇ ಸಂಸ್ಥೆಯ ರತ್ನಾಕರ್ ಅವರು ಹೋಮ್ ನರ್ಸ್ ಆಗಿ ಕಾರ್ತಿಕ್‌ನನ್ನು ನೇಮಿಸಿದ್ದು, ಅವರನ್ನು ಈ ಪ್ರಕರಣದಲ್ಲಿ 2ನೇ ಆರೋಪಿಯನ್ನಾಗಿ ಮಾಡಲಾಗಿದೆ. 1ನೇ ಆರೋಪಿ ಕಾರ್ತಿಕ್ ಶೆಟ್ಟಿ, ಹೋಂ ನರ್ಸ್ ಆಗಿ ಶಶಿಧರ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಶಶಿಧರ್ ಮೊಬೈಲ್‌ನಲ್ಲಿ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅವರ ಗೂಗಲ್ ಪೇ ಪಿನ್ ನಂಬರ್ ಅನ್ನು ಗಮನಿಸಿದ್ದ.
ಈ ಪಿನ್ ಅನ್ನು ಬಳಸಿ ಕಾರ್ತಿಕ್, ಶಶಿಧರ್ ಅವರ ಖಾತೆಯಿಂದ 9.80 ಲಕ್ಷ ರೂ. ಹಣವನ್ನು ತನ್ನ ಖಾತೆಗೆ ಗೂಗಲ್ ಪೇ ಮುಖಾಂತರವೇ ವರ್ಗಾವಣೆ ಮಾಡಿದ್ದಾನೆ. ಈ ಬಗ್ಗೆ ಶಶಿಧರ್ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜ. 21ರಿಂದ ಮಂಗಳೂರು ಸಿಂಗಾಪುರ ಮಧ್ಯೆ ನೇರ ವಿಮಾನ ಸಂಚಾರ.. vishwanews24

Leave a Reply