ಕಾರ್ಕಳ: ಹೋಮ್ ನರ್ಸ್ ಗೂಗಲ್ ಪೇ ಮೂಲಕ ಮನೆ ಮಾಲೀಕನ ಖಾತೆಯಿಂದ ತನ್ನ ಖಾತೆಗೆ 9.80 ಲಕ್ಷ ವರ್ಗಾಯಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ತಿಕ್ ಶೆಟ್ಟಿ ಹಣ ವಂಚಿಸಿದ ಅರೋಪಿ.ಈ ಬಗ್ಗೆ, ಕಸಬಾ ಗ್ರಾಮದ ಶಶಿಧರ್ (75) ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಸಬಾ ಗ್ರಾಮದ ಶಶಿಧರ್ ಅವರ ಕೋರಿಕೆ ಯಂತೆ ಅಲೈಟ್‌ಕೇ ಸಂಸ್ಥೆಯ ರತ್ನಾಕರ್ ಅವರು ಹೋಮ್ ನರ್ಸ್ ಆಗಿ ಕಾರ್ತಿಕ್‌ನನ್ನು ನೇಮಿಸಿದ್ದು, ಅವರನ್ನು ಈ ಪ್ರಕರಣದಲ್ಲಿ 2ನೇ ಆರೋಪಿಯನ್ನಾಗಿ ಮಾಡಲಾಗಿದೆ. 1ನೇ ಆರೋಪಿ ಕಾರ್ತಿಕ್ ಶೆಟ್ಟಿ, ಹೋಂ ನರ್ಸ್ ಆಗಿ ಶಶಿಧರ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಶಶಿಧರ್ ಮೊಬೈಲ್‌ನಲ್ಲಿ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅವರ ಗೂಗಲ್ ಪೇ ಪಿನ್ ನಂಬರ್ ಅನ್ನು ಗಮನಿಸಿದ್ದ.
ಈ ಪಿನ್ ಅನ್ನು ಬಳಸಿ ಕಾರ್ತಿಕ್, ಶಶಿಧರ್ ಅವರ ಖಾತೆಯಿಂದ 9.80 ಲಕ್ಷ ರೂ. ಹಣವನ್ನು ತನ್ನ ಖಾತೆಗೆ ಗೂಗಲ್ ಪೇ ಮುಖಾಂತರವೇ ವರ್ಗಾವಣೆ ಮಾಡಿದ್ದಾನೆ. ಈ ಬಗ್ಗೆ ಶಶಿಧರ್ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…