ಕಾರ್ಕಳ : ಜ.25 ರಿಂದ 29 ರ ವರೆಗೆ ಅತ್ತೂರು ಜಾತ್ರೆ – vishwanews24

Featured, ಉಡುಪಿ

ಕಾರ್ಕಳ: ಜ.25-29ರ ವರೆಗೆ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬಸಿಲಿಕದ ವಾರ್ಷಿಕ ಮಹೋತ್ಸವ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಜ. 25ರಿಂದ 29ರ ವರೆಗೆ ನಡೆಯಲಿರುವ ವಾರ್ಷಿಕ ಮಹೋತ್ಸವದ ಪ್ರಯುಕ್ತ ಭಕ್ತರ ಅನುಕೂಲಕ್ಕಾಗಿ ಬಲಿಪೂಜೆಗಳ ಸಮಯವನ್ನು ನಿಗದಿಪಡಿಸಲಾಗಿದ್ದು, ಎಲ್ಲ ತಯಾರಿಯೂ ನಡೆಯುತ್ತಿದೆ.

ಮಹೋತ್ಸವದ ಮೊದಲ ದಿನ ಜ. 25ರ ಬೆಳಗ್ಗೆ 7.30ಕ್ಕೆ ಪ್ರಥಮ ಪೂಜೆ ಆರಂಭಗೊಳ್ಳಲಿದ್ದು, ರಾತ್ರಿ 9.30ಕ್ಕೆ ಕೊನೆಯ ಪೂಜೆ ನೆರವೇರಲಿದೆ. ಅಂದು ಮಧ್ಯಾಹ್ನ 3 ಗಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ಇರಲಿದೆ.

ಜ. 26 ಮತ್ತು 27ರಂದು ಬೆಳಗ್ಗೆ 8ರಿಂದ ರಾತ್ರಿ 10ರ ವರೆಗೆ ಸತತವಾಗಿ ಬಲಿ ಪೂಜೆಗಳು ನಡೆಯಲಿವೆ. ಜ. 28ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 9.30 ಗಂಟೆ ಯವರೆಗೆ ವಿವಿಧ ಹಂತಗಳಲ್ಲಿ ಪೂಜಾ ವಿಧಿವಿಧಾನಗಳು ಜರಗಲಿವೆ.

ಮಹೋತ್ಸವದ ಕೊನೆಯ ದಿನ ಜ.29ರಂದು ಬೆಳಗ್ಗೆ 8ರಿಂದ ಮೊದಲ ಪೂಜೆ ಹಾಗೂ ಸಂಜೆ 6ಕ್ಕೆ ಕೊನೆಯ ಬಲಿಪೂಜೆ ನೆರವೇರಲಿದೆ. ಅಂದು ರಾತ್ರಿ ಕನ್ನಡ ಯಕ್ಷಗಾನವೊಂದು ಪ್ರದರ್ಶನಗೊಳ್ಳಲಿದೆ.

ಜ. 16ರಿಂದ ನೊವೆನಾ ಪ್ರಾರ್ಥನೆಗಳು ಆರಂಭವಾಗಲಿದ್ದು, ಜ.24ರಂದು ಅಸ್ವಸ್ಥರಿಗಾಗಿ ವಿಶೇಷ ಬಲಿಪೂಜೆ ನಡೆಯಲಿದೆ. ಹಬ್ಬದ ದಿನಗಳಲ್ಲಿ ಭಕ್ತರ ಸುಗಮ ಸಂಚಾರಕ್ಕಾಗಿ ಇಗರ್ಜಿ ವಠಾರಕ್ಕೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ರೆ| ಆಲ್ಬನ್ ಡಿ’ಸೋಜ ಪ್ರಕಟನೆ ತಿಳಿಸಿದೆ.

Leave a Reply