ಕಾರ್ಕಳ: ಡಿ.27 ರಿಂದ ಡಿ.29 ರವರೆಗೆ ಕಾರ್ಲೋತ್ಸವ- 2024 – vishwanews24
ಕಾರ್ಕಳ: ಡಿ.27 ರಿಂದ ಡಿ.29 ರವರೆಗೆ ಕಾರ್ಲೋತ್ಸವ- 2024
ಕಾರ್ಕಳ : ಕಾರ್ಕಳ ಟೈಗರ್ಸ್-ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಮತ್ತು ಬಾಯ್‌ಝೋನ್ ಅಕಾಡೆಮಿ ವತಿಯಿಂದ ಡಿ. 27, 28 ಮತ್ತು 29ರಂದು ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಕಾರ್ಲೋತ್ಸವ ನಡೆಯಲಿದೆ. ಕಾರ್ಯಕ್ರಮದಂಗವಾಗಿ ಆಹಾರ ಮೇಳ, ಬೋಟಿಂಗ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಡಿ. 27ರ ಶುಕ್ರವಾರ
ಸಂಜೆ 5 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಉದ್ಘಾಟಿಸಲಿರುವರು. ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ವಿ. ಸುನಿಲ್ ಕುಮಾರ್ ಹಾಗೂ ಉದ್ಯಮಿ ಬೋಳ ಶ್ರೀನಿವಾಸ್ ಕಾಮತ್ ಗೌರವ ಉಪಸ್ಥಿತರಿರಲಿದ್ದು, ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಈಶ್ವರ್ ಮಲ್ಪೆ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ – ಪೃಥ್ವಿ ಅಂಬರ್ ಭಾಗಿ
ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದ್ದು, ಸಂಸ್ಕೃತಿಯನ್ನು ಬಿಂಬಿಸುವ ಹುಲಿವೇಷ, ವಾಯೋಲಿನ್ ಚೆಂಡೆ, ಭರತ ನಾಟ್ಯ ಹಾಗೂ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬರ್ ಭಾಗಿಯಾಗಲಿದ್ದಾರೆ.
ಡಿ. 28ರ ಶನಿವಾರ
ಸಂಜೆ 5ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಗೌರವ ಉಪಸ್ಥಿತರಿರಲಿದ್ದು, ಬೋಳ ಪ್ರಶಾಂತ್ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಎನ್.ಎಂ.ಎ.ಎಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆ ಇದರ ಟೀಮ್ ತಾಲೀಮ್ ನಿಟ್ಟೆ ಇವರಿಂದ ಕಪಟಾಕ್ಷ ಪೌರಾಣಿಕ ನಾಟಕ ಅಕ್ಷಾಯಾಂಬರ ಪ್ರದರ್ಶನಗೊಳ್ಳಲಿದೆ.
ಬೆಂಗಳೂರು : ಬಾಣಂತಿ ಸಾವು ; ವೈದ್ಯರ ನಿರ್ಲಕ್ಷ್ಯ ಆರೋಪ – vishwanews24
ಆಲ್ ಓಕೆ ಲೈವ್ ಇನ್ ಕಾನ್ಸರ್ಟ್
ಬಾಲಿವುಡ್ ಹೆಸರಾಂತ ಡ್ಯಾನ್ಸ್ ಕೊರೊಯೋಗ್ರಾಫರ್ ಹಾಗೂ ನಟ ಧರ್ಮೆಶ್ ಅವರಿಂದ ನೃತ್ಯ ಪ್ರದರ್ಶನ ಹಾಗೂ ಬಾಯ್ ಝೋನ್ ತಂಡದಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ಡಿ. 29ರ ಆದಿತ್ಯವಾರ
ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ರಿ. ನ ಉದಯ ಶೆಟ್ಟಿ ಮುನಿಯಾಲು ಹಾಗೂ ಜಸ್ಟ್ ಡ್ಯಾನ್ಸರ್ ದುಬೈ ಹಾಗೂ ಬಾಯ್‌ಝೋನ್ ಡಾನ್ಸ್ ಅಕಾಡೆಮಿ ಮಂಗಳೂರ ಇದರ ಫೌಂಡರ್ ಪ್ರಸನ್ನ ಕುಮಾರ್ ಗೌರವ ಉಪಸ್ಥಿತರಿರಲಿದ್ದು, ಬೋಳ ಪ್ರಶಾಂತ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ರವಿ ಕಟಪಾಡಿ ಹಾಗೂ ರಾಮಣ್ಣ ಪೂಜಾರಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸ್ಟಾರ್ ನೈಟ್
ಕನ್ನಡ ಚಲನ ಚಿತ್ರರಂಗದ ಹೆಸರಾಂತ ಗಾಯಕರು ಹಾಗೂ ನಟರ ಒಗ್ಗೂಡುವಿಕೆಯಲ್ಲಿ ಸ್ಟಾರ್ ನೈಟ್ ನಡೆಯಲಿದ್ದು, ರಿಷಬ್ ಶೆಟ್ಟಿ, ಪ್ರಜ್ವಲ್ ದೇವರಾಜ್, ಮಿತ್ರ, ಸಂಪದ, ರಮೇಶ್ ಇಂದಿರಾ ಹಾಗೂ ದೀಪಿಕಾದಾಸ್ ಭಾಗವಹಿಸಲಿದ್ದಾರೆ.
ಬೆಂಗಳೂರು : ಬಾಣಂತಿ ಸಾವು ; ವೈದ್ಯರ ನಿರ್ಲಕ್ಷ್ಯ ಆರೋಪ – vishwanews24
