ಕಾರ್ಕಳ: ದುರ್ಗಾ ದೌಡ್ನಲ್ಲಿ 7500 ಹಿಂದೂ ಕಾರ್ಯಕರ್ತರು ಭಾಗಿ ; 65ಕ್ಕೂ ಅಧಿಕ ಬಸ್ ವ್ಯವಸ್ಥೆ – Vishwanews24
ಕಾರ್ಕಳ: ದುರ್ಗಾ ದೌಡ್ನಲ್ಲಿ 7500 ಹಿಂದೂ ಕಾರ್ಯಕರ್ತರು ಭಾಗಿ ; 65ಕ್ಕೂ ಅಧಿಕ ಬಸ್ ವ್ಯವಸ್ಥೆ
ದುರ್ಗಾ ದೌಡ್ – ಕರಾವಳಿ ಜಿಲ್ಲೆಯಲ್ಲಿ ಹೊಸ ಮುನ್ನುಡಿ ಬರೆಯಲಿದೆ
ಕಾರ್ಕಳ: ಹಿಂದೂ ಜಾಗರಣ ವೇದಿಕೆಯ ಆಯೋಜಕತ್ವದಲ್ಲಿ ಉಡುಪಿಯಲ್ಲಿ ನಡೆಯುವ ದುರ್ಗಾ ದೌಡ್ನಲ್ಲಿ ಕಾರ್ಕಳ ತಾಲ್ಲೂಕಿನಿಂದ ಸುಮಾರು 7500 ಹಿಂದೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಮೂಲಕ ಈ ದುರ್ಗಾ ದೌಡ್ ಹಿಂದೂ ಶಕ್ತಿ ಸಂಚಲನ ಕಾರ್ಯಕ್ರಮ ಕರಾವಳಿ ಜಿಲ್ಲೆಯಲ್ಲಿ ಹೊಸ ಮುನ್ನುಡಿ ಬರೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ದಿಕ್ಸೂಚಿ ಭಾಷಣಗಾರ್ತಿಯಾಗಿ ಭೋಪಾಲ್ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಹಿಂದೂ ಬಂಧು ಭಗಿನಿಯರು ಭಾಗವಹಿಸುವ ನಿರೀಕ್ಷೆ ಇದೆ.
ಉಚ್ಚಿಲ : ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ :-ಸಹಕಾರ ರತ್ನ ಡಾ ಎಂಎನ್ ರಾಜೇಂದ್ರ ಕುಮಾರ್ ಅವರಿಗೆ ಗೌರವದ ಅಭಿನಂದನೆ
ಹಿಂದೂ ಸಂಘಟನೆಯ ಸಹಯೋಗದೊಂದಿಗೆ ಹೊಸ್ಮಾರು, ಮಾಳ, ಬಜಗೋಳಿ, ಮಿಯ್ಯಾರು , ತೆಳ್ಳಾರು ಮುಂತಾದ ಕಡೆಗಳಲ್ಲಿ 34 ಘಟಕಗಳಲ್ಲಿ ಬೈಠಕ್ಗಳನ್ನು ನಡೆಸಲಾಗಿದೆ.
65ಕ್ಕೂ ಅಧಿಕ ಬಸ್, 250ಕ್ಕೂ ಅಧಿಕ ಖಾಸಗಿ ವಾಹನಗಳು ಮತ್ತು ಅಸಂಖ್ಯಾತ ದ್ವಿಚಕ್ರ ವಾಹನಗಳಲ್ಲಿ ಕಾರ್ಕಳ ಜಿಲ್ಲೆಯ ವಿವಿಧ ಕಡೆಗಳಿಂದ ಜನ ಆಗಮಿಸುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಸಂಯೋಜಕ ಗುರುಪ್ರಸಾದ್ ನಾರಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

