ಉಡುಪಿ: ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ, ಕೈಯಾರ್ಲದ ಶ್ರೀ ಮಹಾಕಾಳಿ ದೇವಾಲಯದ ಸಮೀಪದಲ್ಲಿನ ನಾಗಬನದಲ್ಲಿ ಪುರಾತನ ನಾಗಭೈರವ ಶಿಲ್ಪ ಪತ್ತೆಯಾಗಿದೆಯೆಂದು, ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿಯವರು ತಿಳಿಸಿದ್ದಾರೆ.
ಆಯತಾಕಾರದ ಬಳಪದ ಶಿಲೆಯ ಕೆಳಭಾಗದಲ್ಲಿ ಕಾಲುಮಂಡಲದ ನಾಲ್ಕು ಪವಿತ್ರ ಗಂಟುಗಳನ್ನು ಒಳಗೊಂಡ ಒಂದು ನಾಗರಾಜನ ಶಿಲ್ಪವನ್ನು ರಚಿಸಲಾಗಿದ್ದು, ನಾಗನ ಹೆಡೆಯ ಮೇಲೆ ಚರ್ತುಭಾಹು ನಾಗಭೈರನ ಶಿಲ್ಪವನ್ನು ನಿಂತಂತೆ ರಚಿಸಲಾಗಿದೆ. ಹಿಂದಿನ ಎರಡು ಕೈಗಳಲ್ಲಿ ಎರಡು ಹೆಡೆಬಿಚ್ಚಿದ ನಾಗಗಳನ್ನು ಹಿಡಿದಂತೆ ಚಿತ್ರಿಸಲಾಗಿದೆ ಮುಂದಿನ ಬಲಗೈಯಲ್ಲಿ ನಾಗ ದಂಡವಿದೆ, ಎಡಗೈಯಲ್ಲಿ ರುಂಡವಿದೆ.
ಕಟಪಾಡಿ: ಲಾರಿ ಹಾಗೂ ಬೈಕ್ ಅಪಘಾತ ಸವಾರ ; ಬೈಕ್ ಸವಾರ ಹೂವಿನ ವ್ಯಾಪಾರಿ ದಾರುಣ ಅಂತ್ಯ… Vishwanews24
ನಾಗಭೈರವ ಶಿಲ್ಪದ ಎಡ-ಬಲಗಳಲ್ಲಿ ಹೆಡೆಬಿಚ್ಚಿದ ನಾಗಗಳನ್ನು ಕೈಯಲ್ಲಿ ಹಿಡಿದ ನಾಗ ಕನ್ನಿಕೆಯರ ಶಿಲ್ಪಗಳಿವೆ. ನಾಗಭೈರವನ ತಲೆಯ ಮೇಲೆ ಐದು ಹೆಡೆಗಳ ನಾಗಕೊಡೆಯಿದೆ. ಜನಿವಾರ ಮತ್ತು ಮತ್ತು ಸೊಂಟದ ಕೆಳಗೆ ಅರೆಪಂಚೆಯ ಅಲಂಕಾರವಿದೆ. ಶುದ್ಧ ಜನಪದ ಶೈಲಿಯಲ್ಲಿ ರಚಿತವಾಗಿರುವ ಈ ಶಿಲ್ಪ ಸುಮಾರು 14-15 ನೇ ಶತಮಾನದ ಜೈನ ನಾಗಶಿಲ್ಪವಾಗಿದೆ. ಈ ಶಿಲ್ಪದ ಅಧ್ಯಯನದಲ್ಲಿ ದೇವಾಲಯದ ಅರ್ಚಕರಾದ ಕಿರಣ್ ಚೌಟ, ಆಡಳತಾಧಿಕಾರಿ ಚಂದ್ರಹಾಸ ಚೌಟ, ವಿದ್ಯಾರ್ಥಿಗಳಾದ ಶ್ರೇಯಸ್, ಕಾರ್ತಿಕ್, ಗೌತಮ್, ದಿಶಾಂತ್ ಸಹಕರಿಸಿದ್ದಾರೆ.
ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…
ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…
ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ ಬೆಂಗಳೂರು: ಕರ್ನಾಟಕ ಸರ್ಕಾರದ…
ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ ಉಡುಪಿ: ಯುವಜನರು ನಿರಂತರ ಪ್ರಯತ್ನದ…
ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಸಾಗಾಟ.. ಮಂಗಳೂರು ಸಿಸಿಬಿ ಬಲೆಗೆ ಮೂವರು ಆರೋಪಿಗಳು; ₹1.58 ಕೋಟಿ ಮೌಲ್ಯದ ಸೊತ್ತು…
ಮಂಗಳೂರು: ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಂಗಳೂರು: ಅನುಮಾನಾಸ್ಪದ…