Featured

ಕಾರ್ಕಳ : ಫೇಸ್‌ಬುಕ್​ನಲ್ಲಿ ಪ್ರೀತಿಸಿ ಮದುವೆಯಾಗಿ ವರದಕ್ಷಿಣೆ ಗಾಗಿ ಹೆಂಡತಿಗೆ  ಟಾರ್ಚರ್ – Vishwanews24

ಕಾರ್ಕಳ : ಫೇಸ್‌ಬುಕ್​ನಲ್ಲಿ ಪ್ರೀತಿಸಿ ವಿವಾಹ – ದಾಂಪತ್ಯ ಜೀವನದಲ್ಲಿ ಬಿರುಕು ;ವರದಕ್ಷಿಣೆ ದಾಹಕ್ಕೆ ಬಿದ್ದು ಹೆಂಡತಿಗೆ ಕಿರುಕುಳ

ಕಾರ್ಕಳ : ಫೇಸುಬುಕ್ ಪರಿಚಯವು ಯುವಜೋಡಿಯ ನಡುವೆ ಪ್ರೇಮಾಂಕುರಕ್ಕೆ ಕಾರಣವಾಗಿ ವಿವಾಹ ಬಂಧನಕ್ಕೆ ಕಾಲಿಟ್ಟು ವರ್ಷ ಕಳೆಯುತ್ತಿದ್ದಂತೆ ದಾಂಪತ್ಯ ಜೀವನದಲ್ಲಿ ಕಾಣಿಸಿಕೊಂಡ ವೈಮನಸ್ಸಿನ ಹಿನ್ನಲೆಯಲ್ಲಿ ಮಹಿಳೆಯೊಬ್ಬರು ಪೊಲೀಸ್ ಠಾಣಾ ಮೆಟ್ಟಲೇರಿದ ಪ್ರಸಂಗ ಕಾರ್ಕಳದಲ್ಲಿ ನಡೆದಿದೆ.

ಕಾರ್ಕಳ ತಾಲೂಕಿನ ಬೈಲೂರು ಕೌಡೂರಿನ ಸೌಮ್ಯ(33) ಎಂಬವರು ಈ ಕುರಿತು ಕಾರ್ಕಳ ನಗರ ಠಾಣೆಗೆ ದೂರು ಸಲ್ಲಿಸಿದವರು.

ದೂರಿನಲ್ಲಿ ಉಲ್ಲೇಖಿಸಿದಂತೆ ಅವರು ತವರು ಮನೆಯಲ್ಲಿ ನೆಲೆಸಿಕೊಂಡಿದ್ದು, ನಾಲ್ಕೂವರೆ ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳ ಬೇಕೂರು ನಿವಾಸಿ ಸುನಿಲ್ ಟಿ ಎಂಬುವವರು ಪರಿಚಯವಾಗಿದ್ದರು.

ಪರಿಣಾಮವಾಗಿ ಇಬ್ಬರು ಪರಸ್ಪರ ಪ್ರೀತಿಸಲು ಶುರುಮಾಡಿದರು. 2019 ಮೇ 12ರಂದು ಕಾರ್ಕಳದ ಪೆರ್ವಾಜೆಯ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

2019 ಜೂನ್ 1ರಂದು ವಿವಾಹ ನೊಂದಾಣೆ ಮಾಡಿಸಿಕೊಂಡಿದ್ದರು. 1 ವರ್ಷದವರೆಗೆ ಅವರಿಬ್ಬ ದಾಂಪತ್ಯ ಜೀವನ ಸಾಂಗವಾಗಿ ಮುನ್ನಡೆಯುತ್ತಿತ್ತು. ಬಳಿಕ ಪತಿ ಸುನಿಲ್, ೫ ಲಕ್ಷ ರೂ ವರದಕ್ಷಿಣೆ ಹಣ ಕೊಡಬೇಕೆಂದು ಒತ್ತಾಯಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದನು.

ಸುನೀಲ್‌ನ ವರ್ತನೆಯಿಂದ ಬೇಸತ್ತ ಸೌಮ್ಯ ಬಂಗಾರವನ್ನು ಅಡವಿಟ್ಟು ರೂ. 80,000 ಹಣವನ್ನು ನೀಡಿದ್ದರು. 2019 ಜೂನ್ 30ರಂದು 3 ಲಕ್ಷ ರೂ ಖರ್ಚು ಭರಿಸಿ ಮದುವೆ ಆರತಕ್ಷತೆಯನ್ನು ಕಾರ್ಕಳ ಸ್ವಾಗತ್ ಹೊಟೇಲ್ ಸಭಾ ಭವನದಲ್ಲಿ ನೆರವೇರಿಸಲಾಗಿತ್ತೆಂದು ದೂರಿನಲ್ಲಿ ವಿವರಿಸಲಾಗಿದೆ.

ಮದುವೆಯಾದ ಬಳಿಕ ಸೌಮ್ಯ ಅವರು ತನ್ನ ತಾಯಿ ಮನೆಯಲ್ಲಿಯೇ ಇದ್ದು ಸುನೀಲ್ ತನ್ನ ಮನೆಗೆ ಕರೆದುಕೊಂಡು ಹೋಗಿರುವುದಿಲ್ಲ.2021 ನವಂಬರ್ 17ರಂದು ಸುನಿಲ್ ಊರಿಗೆ ಹೋಗಿದ್ದು, ನಂತರದ ದಿನಗಳಲ್ಲಿ ಫೋನ್ ಮಾಡಿರಲಿಲ್ಲ. ಅದೇ ಕಾರಣದಿಂದ ಸೌಮ್ಯ ಅವರು ಫೋನ್ ಮಾಡಿದಾಗ ಫೋನ್ ಮಾಡಬೇಡವೆಂದು ಸುನೀಲ್ ಬೈಯುತ್ತಿದ್ದನು. ಅದರಿಂದ ಮಾನಸಿಕವಾಗಿ ನೊಂದಿದ್ದ ಸೌಮ್ಯ 2022 ಮಾರ್ಚ್ 07ರಂದು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿ ಮಾತ್ರೆ ಸೇವಿಸಿ, ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು.

ಈ ಕುರಿತು ಆರೋಪಿ ಸುನೀಲ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

12 hours ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

13 hours ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

13 hours ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

13 hours ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

13 hours ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

1 day ago