Featured

ಬಂಟ್ವಾಳ : 4 ವರ್ಷದ ಫೇಸ್‌ಬುಕ್‌ ಪ್ರೀತಿ ; ಯವಕನೆಂದು ನಂಬಿಸಿ ಯವತಿಗೆ ವಂಚಿಸಿದ ಮಂಗಳಮುಖಿ – Vishwanews24

ಬಂಟ್ವಾಳ : 4 ವರ್ಷದ ಫೇಸ್‌ಬುಕ್‌ ಪ್ರೀತಿ ; ಯವಕನೆಂದು ನಂಬಿಸಿ ಯವತಿಗೆ ವಂಚಿಸಿದ ಮಂಗಳಮುಖಿ

ಬಂಟ್ವಾಳ: ಫೇಸ್​ಬುಕ್​ನಲ್ಲಿ ಪರಿಚಿತವಾದ ವ್ಯಕ್ತಿಯೊಬ್ಬರ ಜತೆ ಸ್ನೇಹ ಬೆಳೆಸಿಕೊಂಡ ಯುವತಿ, ಆ ವ್ಯಕ್ತಿ ಜತೆ ಪ್ರೀತಿಯ ಬಲೆಗೂ ಬಿದ್ದಿದ್ದಳು. ಸತತ ನಾಲ್ಕು ವರ್ಷದಿಂದ ಫೋನ್​ನಲ್ಲೇ ಮಾತನಾಡುತ್ತಾ, ಪರಸ್ಪರ ಭಾವನೆಗಳನ್ನು ಹಂಚಿಕೊಂಡಿದ್ದರು.

ಯುವತಿಗೆ ಮದುವೆ ಆಗುವುದಾಗಿ ಆ ವ್ಯಕ್ತಿ ನೂರಾರು ಆಸೆ-ಕನಸು ಹುಟ್ಟಿಸಿದ್ದ. ಆಕೆಯೂ ಪ್ರಿಯಕರನ ಜತೆ ಬಾಳಲು ಹಾತೊರೆಯುತ್ತಿದ್ದಳು. ತನ್ನ ಪ್ರೀತಿ ಬಗ್ಗೆ ಯುವತಿ ಮನೆಯಲ್ಲಿ ಹೇಳಿಕೊಂಡಿದ್ದಳು. ಫೇಸ್​ಬುಕ್​ ಲವ್​ ಎಲ್ಲ ನಮಗೆ ಸರಿ ಬರಲ್ಲ, ಬೇಡ ಎಂದಿದ್ದಕ್ಕೆ ಯುವತಿ ಮನೆಯವರ ವಿರುದ್ಧವೇ ತಿರುಗಿಬಿದ್ದಿದ್ದಳು. ಅಂತಿಮವಾಗಿ ಈ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದಾಗ ಯುವತಿಗೆ ಆಘಾತಕಾರಿ ವಿಷಯ ಗೊತ್ತಾಗಿದೆ. ಇನ್ನು ಯುವತಿಯ ಕುಟುಂಬಸ್ಥರೂ ಬೆಚ್ಚಿಬಿದ್ದಿದ್ದಾಳೆ.

ಏನಿದು ಪ್ರಕರಣ: ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಯುವತಿಗೆ ನಾಲ್ಕು ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಪ್ರದೀಪ್ ಎಂಬಾತನ ಪರಿಚಯವಾಗಿತ್ತು. ಸಿವಿಲ್ ಇಂಜಿನಿಯರ್ ಎಂದು ಆತ ಪರಿಚಯಿಸಿಕೊಂಡಿದ್ದ. ಆತನ ಮುಖ ನೋಡದೆ ಇದ್ದರೂ, ಆತನ ಪ್ರೀತಿಯ ಮಾತಿಗೆ ಮರುಳಾಗಿ ಪ್ರೇಮಪಾಶಕ್ಕೆ ಸಿಲುಕಿದ್ದಳು. ದಿನಾ ಕರೆ ಮಾಡಿ ಮದುವೆಯಾಗುವುದಾಗಿ ನಂಬಿಸುತ್ತಿದ್ದ. ಈ ವಿಚಾರವಾಗಿ ಯುವತಿ ಮನೆಮಂದಿಯೊಂದಿಗೆ ಜಗಳವಾಡುತ್ತಿದ್ದಳು. ಈ ಬಗ್ಗೆ ಯುವತಿಯ ತಾಯಿ, ವಕೀಲೆ ಶೈಲಜಾ ರಾಜೇಶ್ ಅವರಲ್ಲಿ ವಿಷಯ ತಿಳಿಸಿದ್ದರು. ಅವರು ಕೌನ್ಸೆಲಿಂಗ್ ಮಾಡಿದಾಗ ಯುವತಿ ಸಂಪೂರ್ಣವಾಗಿ ಪ್ರದೀಪ್‌ನ ಮೋಹಕ್ಕೆ ಒಳಗಾಗಿದ್ದಳು. ಮನವರಿಕೆ ಮಾಡಿದರೂ ಮಾತು ಕೇಳದಿದ್ದಾಗ ಶೈಲಜಾ ರಾಜೇಶ್ ಸೂಚನೆಯಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿತ್ತು.

ವಿಟ್ಲ ಹಾಗೂ ಉಡುಪಿ ಜಿಲ್ಲೆ ಶಂಕರನಾರಾಯಣ ಠಾಣೆ ಪೊಲೀಸರ ಸಹಕಾರದೊಂದಿಗೆ ಸ್ವತಃ ಶೈಲಜಾ ರಾಜೇಶ್ ಅವರು ಯುವತಿಗೆ ಕರೆ ಮಾಡುತ್ತಿದ್ದಾತನ ಸಿದ್ದಾಪುರದ ಸ್ಥಳವನ್ನು ಪತ್ತೆ ಮಾಡಿ ಮನೆಗೆ ಭೇಟಿ ನೀಡಿದಾಗ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಯುವತಿಯೊಂದಿಗೆ ಪ್ರದೀಪ್ ಎಂಬಾತನ ಹೆಸರಿನಲ್ಲಿ ಗಂಡಸಿನ ಧ್ವನಿಯಲ್ಲಿ ಮಾತನಾಡುತ್ತಿದ್ದದ್ದು ಜ್ಯೋತಿ ಎಂಬ ಹೆಸರಿನ ಮಂಗಳಮುಖಿ! ನಾಲ್ಕು ವರ್ಷದಿಂದ ಮನೆಮಂದಿಗೂ ತಲೆನೋವಾಗಿದ್ದ ಯುವತಿಯ ಪ್ರೇಮ ಪ್ರಕರಣ ಅಂತ್ಯ ಕಂಡಿದೆ.

ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರಿಂದ ಕಾಪುವಿನ ಖಾಸಗಿ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಗಡ್ಬಡ್ ಐಸ್ ಕ್ರೀಂ ತಯಾರಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್.

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

12 hours ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

12 hours ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

12 hours ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

12 hours ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

13 hours ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

1 day ago