ಕಾರ್ಕಳ : ಬಸ್ಸಿನಿಂದ ಬಿದ್ದು ಕಾಲೇಜ್ ವಿದ್ಯಾರ್ಥಿ ದಾರುಣ ಸಾವು – vishwanews24

Featured, ಉಡುಪಿ

ಕಾರ್ಕಳ : ಬಸ್ಸಿನಿಂದ ಬಿದ್ದು ಕಾಲೇಜ್ ವಿದ್ಯಾರ್ಥಿ ದಾರುಣ ಸಾವು

ಕಾರ್ಕಳ : ಬಸ್ಸಿನಿಂದ ಬಿದ್ದು ಕಾಲೇಜ್ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಬುಧವಾರ ಬೆಳಗ್ಗೆ ಕಾರ್ಕಳದ ನಿಟ್ಟೆಯಲ್ಲಿ ಸಂಭವಿಸಿದೆ. ಮಾಳ ಗ್ರಾಮದ ಹುಕ್ರಟ್ಟೆಯ ಜನಿತ್‌ ಶೆಟ್ಟಿ (19) ಮೃತ ವಿದ್ಯಾರ್ಥಿಯಾಗಿದ್ದಾನೆ.

ಜನಿತ್ ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇಂದು ಬೆಳಿಗ್ಗೆ ಕಾರ್ಕಳದಿಂದ ಮಂಗಳೂರಿಗೆ ಹೋಗುವ ಖಾಸಗಿ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭ ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಎಸೆಯಲ್ಪಟ್ಟಿದ್ದು ಈ ಸಂದರ್ಭ ಆತನ ಮೈ ಮೇಲೆ ಬಸ್ಸಿನ ಹಿಂಬದಿಯ ಚಕ್ರ ಹರಿದ ಪರಿಣಾಮ ಗಂಭೀರ ಗಾಯಗೊಂಡಿದ್ದ.ಕೂಡಲೇ ಆತನನ್ನು ಗಾಜ್ರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಜನಿತ್‌ ಕೊನೆಯುಸಿರೆಳೆದಿದ್ದಾರೆ. ಮೃತ ಜನಿತ್ ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ.

ಮೋದಿ 75 ವರ್ಷಕ್ಕೆ ನಿವೃತ್ತಿ ಘೋಷಿಸದಿದ್ದರೆ , ಅವರು ತಮ್ಮ ಕುರ್ಚಿಯನ್ನು ಕಳೆದುಕೊಳ್ಳಲಿದ್ದಾರೆ : ಸುಬ್ರಮಣಿಯನ್ ಸ್ವಾಮಿ – vishwanews24

ಕಾರ್ಕಳ-ಪಡುಬಿದ್ರಿ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿರುತ್ತಾರೆ. ವಿದ್ಯಾರ್ಥಿಗಳು ಬಸ್‌ಗಳ ಮೆಟ್ಟಿಲ ಮೇಲೆ ನೇತಾಡಿಕೊಂಡು ಹೋಗಬೇಕಾದ ಅಗತ್ಯವಿದ್ದು ಇದು ದುರಂತಕ್ಕೆ ಕಾರಣವಾಗುತ್ತಿದೆ. ಆದ್ರೂ ಹೆಚ್ಚುವರಿ ಬಸ್‌ ಸೌಲಭ್ಯ ಕೊಡುತ್ತಿಲ್ಲ. ಈ ರೂಟಲ್ಲಿ ಸರ್ಕಾರಿ ಬಸ್‌ ಗಳನ್ನು ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply