ಕಾರ್ಕಳ: ಬೈಕ್ ಪಲ್ಟಿ – ನವವಿವಾಹಿತೆ ಸ್ಥಳದಲ್ಲಿಯೇ ಮೃತ್ಯು – vishwanews24
ಕಾರ್ಕಳ: ರಸ್ತೆಗೆ ಅಡ್ಡ ಬಂದ ಶ್ವಾನ ; ಬೈಕ್ ಪಲ್ಟಿ – ನವವಿವಾಹಿತೆ ಸ್ಥಳದಲ್ಲಿಯೇ ಮೃತ್ಯು
ಕಾರ್ಕಳ: ಯಮರೂಪದಲ್ಲಿ ರಸ್ತೆಗೆ ಅಡ್ಡ ಬಂದ ಶ್ವಾನದ ಅವಾಂತರಕ್ಕೆ ಬೈಕ್ ಪಲ್ಟಿ ಹೊಡೆದಿದ್ದು, ನವವಿವಾಹಿತೆಯೊಬ್ಬಳು ರಸ್ತೆಗೆ ಎಸೆಯಲಟ್ಟು ಜೀವತೆತ್ತ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ಸೇತುವೆ ಬಳಿ ಸಂಭವಿಸಿದೆ.
ಕಾರ್ಕಳ ತೆಳ್ಳಾರು ರಸ್ತೆಯ ನಿವಾಸಿ ನಿಕ್ಷಾ ಎಂಬಾತ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ನತದೃಷ್ಠೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ವಿಶಾಲ್ ಎಂಬವರೊಂದಿಗೆ ದಾಂಪತ್ಯ ಬದುಕಿಗೆ ಕಾಲಿಟ್ಟದ್ದರು.
ಶುಕ್ರವಾರ ಮಧ್ಯಾಹ್ನದ ವೇಳೆಗೆ ಇವರು ಮಂಗಳೂರಿಗೆ ಹೊರಟಿದ್ದು,ಹೊಸ್ಮಾರು ಸೇತುವೆ ಸಮೀಪ ಸ್ಮಶಾನ ಬಳಿ ರಸ್ತೆಗೆ ಅಡ್ಡವಾಗಿ ಶ್ವಾನ ಹಾದು ಹೋಗಿದ್ದು, ವೇಗವಾಗಿ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಒಂದು ಬದಿಗೆ ಮಗುಚಿ ಬಿತ್ತು. ಆ ವೇಳೆಗೆ ಬೈಕ್‌ನ ಸಹಸವಾರಿ ನಿಕ್ಷಾ ರಸ್ತೆಗೆ ಎಸೆಯಲ್ಪಟ್ಟು ತಲೆ ಭಾಗಕ್ಕೆ ತೀವ್ರ ತರದಲ್ಲಿ ಗಾಯಗೊಂಡಿದ್ದರು. ಡಾಂಬರೀನ ಏಟಿಗೆ ಸ್ಥಳದಲ್ಲಿಯೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
