ಕಾರ್ಕಳ : ಮಗುಚಿ ಬಿದ್ದ ಶಾಲಾ ಮಕ್ಕಳ  ಪ್ರವಾಸದ ಬಸ್; ಮೂವರು ಶಿಕ್ಷಕಿಯರು ಮತ್ತು ಇಬ್ಬರು ವಿದ್ಯಾರ್ಥಿಗಳಿಗೆ ಗಾಯ – Vishwanews24

Featured, ಉಡುಪಿ

ಕಾರ್ಕಳ : ಮಗುಚಿ ಬಿದ್ದ ಶಾಲಾ ಮಕ್ಕಳ  ಪ್ರವಾಸದ ಬಸ್; ಮೂವರು ಶಿಕ್ಷಕಿಯರು ಮತ್ತು ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

ಕಾರ್ಕಳ: ಧರ್ಮಸ್ಥಳ- ಕಾರ್ಕಳ ರಾಜ್ಯ ಹೆದ್ದಾರಿಯ ನಲ್ಲೂರು ಸಮೀಪ ಪಾಜೆಗುಡ್ಡೆ ತಿರುವಿನಲ್ಲಿ ಶಾಲಾ ಮಕ್ಕಳ ಪ್ರವಾಸದ ಬಸ್ ಮಗುಚಿ ಬಿದ್ದ ಘಟನೆ ಜ.2 ರಂದು ನಡೆದಿದೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಬಸವೇಶ್ವರ ಪ್ರೌಢ ಶಾಲೆಗೆ ಸೇರಿದ ಖಾಸಗಿ ಬಸ್ ನಲ್ಲಿ ಮಕ್ಕಳು ಪ್ರವಾಸಕ್ಕೆಂದು ಕರಾವಳಿಗೆ ತೆರಳುತಿದ್ದರು. ಘಟನೆಯಲ್ಲಿ ಮೂವರು ಶಿಕ್ಷಕಿಯರು ಮತ್ತು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಪ್ರಮಾಣದ ಗಾಯಗಳಾಗಿದೆ.

ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ ಕಾರ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ವಚ್ಛತೆ ಕೊರತೆ : ಪಣಂಬೂರು ಬೀಚ್ ನಲ್ಲಿದ್ದ ಆಹಾರ ಮಳಿಗೆಗಳನ್ನ ತಕ್ಷಣ ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ  – Vishwanews24

Leave a Reply