ಕಾರ್ಕಳ: ಅದಾನಿ ವಿದ್ಯುತ್ ಟವರ್ ನಿರ್ಮಾಣ ಕಾಮಗಾರಿ ವಿರುದ್ದ ಟವರ್ ನಿರ್ಮಾಣ ವಿರೋದಿ ಸಮಿತಿಯ ನೇತೃತ್ವದಲ್ಲಿ ಇನ್ನಾ ಗ್ರಾಮದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆಯ ಸ್ಥಳದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಸುದ್ದಿಗೋಷ್ಠಿ ಆಯೋಜಿಸಿದ್ದರು.
ಮುನಿಯಾಲು ಮುನಿಯಾಲು ಶೆಟ್ಟಿ ಮಾತನಾಡಿ ಯಾವುದೇ ಕಾರಣಕ್ಕೂ ಟವರ್ ನಿರ್ಮಾಣ ಯೋಜನೆಗೆ ಅವಕಾಶ ನೀಡುವುದಿಲ್ಲ. ಜನರಿಗೆ ತೊಂದರೆ ಉಂಟು ಮಾಡುತ್ತಿರುವ, ಕೃಷಿ ಭೂಮಿಗೆ ತೊಂದರೆಯುಂಟು ಮಾಡುತ್ತಿರುವ ಅವೈಜ್ಞಾನಿಕ ಯೋಜನೆಯ ಬದಲಾಗಿ ವೈಜ್ಞಾನಿಕ ರೀತಿಯಲ್ಲಿ ಭೂಗತ ಕೇಬಲ್,ಗಳ ಅಳವಡಿಕೆಯನ್ನು ಮಾಡಿದರೆ ಗ್ರಾಮದ ಕೃಷಿ ಭೂಮಿ ಉಳಿಯಲು ಸಾಧ್ಯವಿದೆ. ಹಾಗಾಗಿ ಕಂಪನಿಯು ವೈಜ್ಞಾನಿಕ ರೀತಿಯ ತಂತ್ರಜ್ಞಾನವನ್ನು ಕಾಮಗಾರಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಟವರ್ ನಿರ್ಮಾಣ ವಿರೋಧಿ ಸಮಿತಿಯ ಅಧ್ಯಕ್ಷ ಅಮರನಾಥ ಶೆಟ್ಟಿ ಮಾತನಾಡಿ ಟವರ್ ಅಳವಡಿಕೆ ಯೋಜನೆಯು ಗ್ರಾಮದಿಂದ ಒದ್ದೋಡಿಸುವ ತನಕ ವಿರಮಿಸುವುದಿಲ್ಲ. ಅವೈಜ್ಞಾನಿಕ ಕಾಮಾಗಾರಿಯ ಬದಲು ವೈಜ್ಞಾನಿಕ ಕ್ರಮಗಳನ್ನು ಅಳವಡಿಸುವಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದರು.
ಹೋರಾಟಗಾರರಾದ ಕುಶ.ಆರ್.ಮೂಲ್ಯ, ಜಯ ಕೋಟ್ಯಾನ್ ಇನ್ನಾ, ದೀಪಕ್ ಕೋಟ್ಯಾನ್, ಅನಿತಾ ಡಿಸೋಜ, ಪ್ರವೀಣ್ .ಜೆ. ಶೆಟ್ಟಿ, ಸುಲೋಚನ ಕೋಟ್ಯಾನ್, ದಿವಾಕರ ಶೆಟ್ಟಿ, ರವಿ ಶೆಟ್ಟಿ ಇನ್ನಾ, ಸುರೇಶ್ ಶೆಟ್ಟಿ ಅಬ್ಬಗ ದಾರಗ, ಕಸ್ತೂರಿ ಆಚಾರ್ಯ, ಸುರೇಶ್ ಮೂಲ್ಯ, ಅಜಿತ್ ಶೆಟ್ಟಿ ಸೂಡಾ, ಶೇಖ್ ಅಬ್ದುಲ್, ಶೋಭಾ, ಯೋಗೀಶ್ ಇನ್ನಾ, ಸಂತೋಷ್ ದೇವಾಡಿಗ, ಕಿಶೋರ್ ದೀಕ್ಷಿತ್ ದೇವಾಡಿಗ, ಪ್ರದೀಪ್ ಬೇಲಾಡಿ, ಸುದರ್ಶನ್ ಬಂಗೇರ, ಮನೀಶ್ ಪೂಜಾರಿ, ಅನೀಶ್ ಪೂಜಾರಿ, ಪ್ರಶಾಂತ್ ಕುಂದರ್, ಕೇಶವ ಸಾಲಿಯಾನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…