ಕಾರ್ಕಳ : ಶಾರ್ಟ್ ಸರ್ಕ್ಯೂಟ್ ನಿಂದ ಹಟ್ಟಿಗೆ ಬೆಂಕಿ : ಕಂಬಳದ ಕೋಣಗಳೆರಡು ಸಾವು – vishwanews24

Featured, ಉಡುಪಿ

ಕಾರ್ಕಳ : ಶಾರ್ಟ್ ಸರ್ಕ್ಯೂಟ್ ನಿಂದ ಹಟ್ಟಿಗೆ ಬೆಂಕಿ : ಕಂಬಳದ ಕೋಣಗಳೆರಡು ಸಾವು

ಉಡುಪಿ: ಹಟ್ಟಿಗೆ ಬೆಂಕಿ ಬಿದ್ದು ಕಂಬಳದ ಕೋಣಗಳೆರಡು ಸುಟ್ಟು ಕರಕಲಾಗಿರುವ ಘಟನೆ ಕಾಂತಾವರ ಬೇಲಾಡಿವಾವ ಅಶೋಕ ಶೆಟ್ರ ಮನೆಯಲ್ಲಿ ಸಂಭವಿಸಿದೆ.

ರಾತ್ರಿ ಸಮಯ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಅವಘಡ ಸಂಭವಿಸಿದ್ದು ಎರಡು ಕೋಣಗಳು ಸುಟ್ಟು ಕರಕಲಾಗಿವೆ.

2022-23ನೇ ಕಂಬಳ ಸಾಲಿನಲ್ಲಿ ಕನಹಲಗೆಯಲ್ಲಿ ಚಾಂಪಿಯನ್ ಪಡೆದ ಬೇಲಾಡಿ ಬಾವ ಅಶೋಕ್ ಶೆಟ್ಟಿಯವರ ಅಪ್ಪು ಮತ್ತು ತೋನ್ಸೆ ಸಾವಿಗೀಡಾದ ಕೋಣಗಳು.

 

Leave a Reply