ಕಾರ್ಕಳ: ಸಾಲಬಾಧೆಯಿಂದ ಮನನೊಂದು ವಾದ್ಯಗಾರಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂದಳಿಕೆ ಗ್ರಾಮದಲ್ಲಿ ನ.19 ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ನಂದಳಿಕೆ ಗ್ರಾಮದ ಮಂಜುನಾಥ ದೇವಾಡಿಗ(43) ಎಂದು ಗುರುತಿಸಲಾಗಿದೆ.
ಮೃತರ ತಮ್ಮ ನೀಡಿದ ದೂರಿನಂತೆ, ಮಂಜುನಾಥ ಅವರು ವಾದ್ಯಗಾರಿಕೆ ಕೆಲಸ ಮಾಡುತ್ತಿದ್ದು ಒಂದು ವರ್ಷದಿಂದ ನಂದಳಿಕೆಯಲ್ಲಿ ಹೊಸ ಮನೆ ಮಾಡಿ ವಾಸವಾಗಿದ್ದರು. ಮನೆ ಮಾಡಿದ ಸಾಲ ಬಾಕಿ ಇರುವುದಾಗಿ ಚಿಂತೆಯಲ್ಲಿದ್ದರು.
ಇದರೊಂದಿಗೆ ಮಧ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು ನ.18 ರಂದು ಮಧ್ಯಾಹ್ನ 2 ಗಂಟೆಗೆ ಮಿಯಾರಿನ ಮನೆಗೆ ಬಂದು ಬಜಗೋಳಿಗೆ ಹೋಗುವುದಾಗಿ ತಾಯಿ ವಾರಿಜಾರವರಲ್ಲಿ ಹೇಳಿಹೋದವರು ವಾಪಾಸು ಮನೆಗೂ ಬಾರದೇ ನಂದಳಿಕೆಯ ಮನೆಗೂ ಹೋಗದ ಕಾರಣ ಹುಡುಕಾಡಿದಾಗ ಮನೆಯ ಒಂದು ಕಿ.ಮೀ ದೂರದಲ್ಲಿ ಮಿಯಾರು ಹೊಳೆಯ ಸಮೀಪ ಹಾಡಿಯಲ್ಲಿ ಮರದ ಕೊಂಬೆಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…
ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…
ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…
ಉಡುಪಿ : ವ್ಯಕ್ತಿ ನಾಪತ್ತೆ ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…
ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…
ಉಡುಪಿ : ಜು. 10 ರಂದು ನೇರ ಸಂದರ್ಶನ ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ‍್ಸ್ ಬಿಲ್ಡಿಂಗ್s…