ಕಾರ್ಕಳ: ಸೌಜನ್ಯಾ ಎನ್ನುವ ಮುಗ್ಧ ಮಗುವಿಗೆ ನ್ಯಾಯ ಸಿಗಬೇಕು, ಧರ್ಮ ರಕ್ಷಣೆಯಾಗಬೇಕು : ವಜ್ರದೇಹಿ ಶ್ರೀ – Vishwanews24
ಕಾರ್ಕಳ: ಸೌಜನ್ಯಾ ಎನ್ನುವ ಮುಗ್ಧ ಮಗುವಿಗೆ ನ್ಯಾಯ ಸಿಗಬೇಕು, ಧರ್ಮ ರಕ್ಷಣೆಯಾಗಬೇಕು : ವಜ್ರದೇಹಿ ಶ್ರೀ
ಕಾರ್ಕಳ: ಶ್ರೀ ಕ್ಷೇತ್ರ ಧರ್ಮ ಸ್ಥಳದ ಹೆಗ್ಗಡೆಯವರು ಒಂದು ಕ್ಷೇತ್ರವನ್ನು ಕೇಂದ್ರವಾಗಿ ಇಟ್ಟು ಕೊಂಡು ನೂರಾರು ಸಾಮಾಜಿಕ ಕೆಲಸ ಕಾರ್ಯ ಮಾಡುತ್ತ ಬಂದಿದ್ದಾರೆ. ಉಪಕಾರ ಸ್ಮರಣೆಯನ್ನು ಸಮಾಜ ಮರೆತರೆ ಆ ಸಮಾಜದ ಅಂತಃಸತ್ವ ಕಡಿಮೆಯಾಗುತ್ತದೆ. ಧರ್ಮಕ್ಕೆ ಎಂದೂ ಅಪಚ್ಯುತಿ ಬರಬಾರದು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಹಿತರಕ್ಷಣ ಸಮಿತಿ ವತಿಯಿಂದ ಕಾರ್ಕಳದ ಕುಕ್ಕುಂದೂರು ಪಂ.ಮೈದಾನದಲ್ಲಿ ರವಿವಾರ ನಡೆದ ಧರ್ಮ ಸಂರಕ್ಷಣ ಸಮಾವೇಶದಲ್ಲಿ ಅವರು ಮಾತನಾಡಿದರು.
ಸತ್ಯದ ಅನ್ವೇಷಣೆ ಆಗಬೇಕು. ಸೌಜನ್ಯಾ ಎನ್ನುವ ಮುಗ್ಧ ಮಗುವಿಗೆ ನ್ಯಾಯ ಸಿಗಬೇಕು. ಧರ್ಮ ರಕ್ಷಣೆಯಾಗಬೇಕು, ಕಾನೂನಿಗೂ ಬೆಲೆ ಬರುವಂತಾಗಲಿ ಎಂದರು.
ಉಡುಪಿ ಜಿಲ್ಲಾಡಳಿತ ವತಿಯಿಂದ ಜನತಾ ದರ್ಶನ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ-ಅಹವಾಲು ಸ್ವೀಕಾರ:vishwanews24
ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀರಾಮ್ ಭಟ್, ಜಂಗಮ ಸಂಸ್ಥಾನ ಮಠದ ರುದ್ರಮಣಿ ಮಹಾಸ್ವಾಮಿ, ಉಜಿರೆ ಅಶೋಕ್ ಭಟ…, ಸಹನಾ ಕುಂದರ್ ಸೂಡ, ನ್ಯಾಯವಾದಿಗಳಾದ ಅರುಣ್ ಬಂಗೇರ, ಎಂ.ಕೆ. ವಿಜಯ ಕುಮಾರ್, ಜ್ಞಾನಸುಧಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ| ಸುಧಾಕರ ಶೆಟ್ಟಿ, ಶ್ರೀಪತಿ ಭಟ್ ಪುತ್ತಿಗೆ, ವಸಂತ ಗಿಳಿಯಾರ್, ರಾಕೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನೀರೆ ಕೃಷ್ಣ ಶೆಟ್ಟಿ ಸ್ವಾಗತಿಸಿದರು.
ಉಡುಪಿ: ಮೇಲ್ಚಾವಣಿ ಕಾಂಕ್ರೀಟ್ ಮಾಡುವುದಾಗಿ ಹಣ ಪಡೆದು ವ್ಯಕ್ತಿಗೆ ಮೋಸ ; ಪ್ರಕರಣ ದಾಖಲು – Vishwanews24
