ಕಾರ್ಕಳ : ಹಿಂದುತ್ವದ ಉಳಿವಿಗಾಗಿ ಚುನಾವಣೆಯಲ್ಲಿ ಸ್ಪರ್ಧೆ : ಪ್ರಮೋದ್‌ ಮುತಾಲಿಕ್‌ – Vishwanews24

Featured, ಉಡುಪಿ

ಕಾರ್ಕಳ : ಪಾಂಚಜನ್ಯ ಸಂಘಟನಾ ಕಾರ್ಯಾಲಯ ಉದ್ಘಾಟಿಸಿದ ಪ್ರಮೋದ್ ಮುತಾಲಿಕ್ 

ಹಿಂದುತ್ವದ ಉಳಿವು , ರಾಷ್ಟ್ರೀಯತೆ, ದೇಶಭಕ್ತಿ ಏನೆಂಬುದು ತೋರಿಸಿಕೊಡುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧೆ ..

ಕಾರ್ಕಳ : ಹಿಂದುತ್ವದ ಉಳಿವು, ಪ್ರಾಮಾಣಿಕ ಅಭಿವೃದ್ಧಿ, ರಾಜಕೀಯ ವೈಚಿತ್ರ ನಿವಾರಿಸುವ ಸಲುವಾಗಿ ರಾಷ್ಟ್ರೀಯತೆ, ದೇಶಭಕ್ತಿ ಏನೆಂಬುದು ತೋರಿಸಿಕೊಡುವ ಉದ್ದೇಶದಿಂದ ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ರಾಜ್ಯದ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಶ್ರೀರಾಮ ಸೇವೆ ವತಿಯಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಹೇಳಿದರು.

ಅವರು ಫೆ. 9ರಂದು ಪರಪುವಿನಲ್ಲಿ ಪಾಂಚಜನ್ಯ ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದರು. ಕರ್ನಾಟಕದಲ್ಲಿ ಬಹಳಷ್ಟು ಜನ ನನಗೆ ಬೆಂಬಲವಾಗಿ ನಿಂತಿದ್ದಾರೆ. ನೀವು ಸ್ಪರ್ಧೆಗೆ ಆಯ್ಕೆ ಮಾಡಿರುವ ಕ್ಷೇತ್ರ ಯೋಗ್ಯವಾಗಿದೆ. ಎಲ್ಲ ರೀತಿಯಿಂದಲೂ ನಾವು ಸಹಕರಿಸುವುದಾಗಿ ಭರವಸೆ ನೀಡಿರುತ್ತಾರೆ ಎಂದು ಮುತಾಲಿಕೆ ತಿಳಿಸಿದರು.

ಕಾಪು : ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪೊಲಿಪು ಯುವ ಛಾಯಾಗ್ರಹಕ ಪ್ರೀತೇಶ್ ಪೂಜಾರಿ ನಿಧನ – Vishwanews24

ಚುನಾವಣೆ ಫಂಡಿಂಗ್‌ ಕುರಿತು ಮಾತನಾಡಿದ ಪ್ರಮೋದ್‌ ಮುತಾಲಿಕ್‌ ನನ್ನಲ್ಲಿ ದುಡ್ಡಿಲ್ಲ. ಹಾಗಾಗಿ ಮತದಾರರು ವೋಟು ಜೊತೆಗೆ ನೋಟು ನೀಡಿ ನನ್ನನ್ನು ಬೆಂಬಲಿಸಬೇಕು. ರಾಜ್ಯದ ವಿವಿಧೆಡೆಯಿಂದ ನೂರಾರು ಕಾರ್ಯಕರ್ತರು ಕಾರ್ಕಳ ಬಂದಿದ್ದಾರೆ. ಅವರ ಊಟ, ವಾಹನ ಖರ್ಚು ಇವೆಲ್ಲದರ ಖರ್ಚು ತುಂಬಲು ಹಣದ ಅವಶ್ಯಕತೆಯಿದೆ ಎಂದು ಮುತಾಲಿಕ್‌ ಹೇಳಿದರು.

ಉಡುಪಿ:  ಗ್ರಾಮ ಪಂಚಾಯತ್ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ – Vishwanews24

ಎಸ್‌ಡಿಪಿಐ ದೇಶದ್ರೋಹಿಗಳ ಸಂಘಟನೆ, ಅದೊಂದು ದೇಶದ್ರೋಹಿಗಳ, ಕೊಲೆಗಡುಕರ ಪಕ್ಷ. ಎಸ್‌ಡಿಪಿಐ ಅನ್ನು ಬ್ಯಾನ್‌ ಮಾಡುವಂತೆ ಕಳೆದ ಹಲವಾರು ವರ್ಷಗಳಿಂದ ಒತ್ತಾಯ ಮಾಡಿಕೊಂಡು ಬಂದಿದ್ದೇವೆ. ಅವರ ಸ್ಪರ್ಧೆಯಿಂದ ಯಾರಿಗೆ ಲಾಭ ಅನ್ನವುದು ಎಲ್ಲರಿಗೂ ತಿಳಿದ ವಿಚಾರ. ಪರೋಕ್ಷವಾಗಿ ಯಾರು ಅವರಿಗೆ ಸಹಕಾರ ಕೊಡುತ್ತಾರೆ ಅನ್ನುವುದು ಗೊತ್ತಿದೆ ಎಂದು ಮುತಾಲಿಕ್‌ ಹೇಳಿದರು. ಗೋ ಕಳ್ಳತನ ನಿಲ್ಲುವವರೆಗೆ, ಮುಂದಿನ ದಿನಗಳಲ್ಲಿ ಗೋ ಕಳ್ಳರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮ್ಮ ಅಭಿವೃದ್ಧಿ ಕಾರ್ಯ, ಪ್ರಾಮಾಣಿಕತೆ ಬಗ್ಗೆ ಮಾತನಾಡಬೇಕೆ ಹೊರತು ಬೇರೆ ಪಕ್ಷ, ಅವರ ಅಭ್ಯರ್ಥಿ ಬಗ್ಗೆ ಮಾತನಾಡಬಾರದು. ಜನ ಇದನ್ನು ಒಪ್ಪುವುದಿಲ್ಲ ಎಂದರು.

ಕಾಪು : ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪೊಲಿಪು ಯುವ ಛಾಯಾಗ್ರಹಕ ಪ್ರೀತೇಶ್ ಪೂಜಾರಿ ನಿಧನ – Vishwanews24

ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್‌ ಕುಲಕರ್ಣಿ, ನ್ಯಾಯವಾದಿ ಹರೀಶ್‌ ಅಧಿಕಾರಿ, ಪುರಸಭಾ ಸದಸ್ಯ ಲಕ್ಷ್ಮೀ ನಾರಾಯಣ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.

ಕಾಪು : ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪೊಲಿಪು ಯುವ ಛಾಯಾಗ್ರಹಕ ಪ್ರೀತೇಶ್ ಪೂಜಾರಿ ನಿಧನ – Vishwanews24

Leave a Reply