ಕಾಲೇಜು ವಿದ್ಯಾರ್ಥಿನಿ ಹತ್ಯೆ ಪ್ರಕರಣ : ಯಾವ ಲವ್‌ ಜಿಹಾದ್‌ ಕಾಣ್ತಿಲ್ಲ, ಅದೊಂದು ಲವ್‌ ಕೇಸ್‌ : ಪರಮೇಶ್ವರ್‌ ತಿರುಗೇಟು – Vishwanews24 

Featured, ರಾಜ್ಯ ನ್ಯೂಸ್

ಕಾಲೇಜು ವಿದ್ಯಾರ್ಥಿನಿ ಹತ್ಯೆ ಪ್ರಕರಣ : ಯಾವ ಲವ್‌ ಜಿಹಾದ್‌ ಕಾಣ್ತಿಲ್ಲ. ಅದೊಂದು ಲವ್‌ ಕೇಸ್‌ : ಪರಮೇಶ್ವರ್‌ ತಿರುಗೇಟು 

ತುಮಕೂರು : ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ಹತ್ಯೆ ಪ್ರಕರಣದಲ್ಲಿ ಯಾವ ಲವ್‌ ಜಿಹಾದ್‌ ಕಾಣ್ತಿಲ್ಲ. ಅದೊಂದು ಲವ್‌ ಕೇಸ್‌, ಇಬ್ಬರ ನಡುವೆ ಲವ್‌ ಆಗಿ, ಬಳಿಕ ಯುವತಿ ದೂರ ಹೋಗಲು ಶುರು ಮಾಡಿದ್ದಕ್ಕೆ ಹತ್ಯೆಯಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್‌ ಹೇಳಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಲವ್‌ ಜಿಹಾದ್‌ ಆರೋಪಕ್ಕೆ ಪರಮೇಶ್ವರ್‌ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿ ಯುವತಿಯ ಹತ್ಯೆ ಘಟನೆ ಲವ್ ಜಿಹಾದ್ ಎಂದು ಪ್ರಹ್ಲಾದ್‌ ಜೋಶಿ ಹೇಳಿಕೆಗೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿನಿಯ ಹತ್ಯೆಯು ಪ್ರೀತಿಯ ನಿರಾಕರಣೆಯಿಂದಾಗಿ ನಡೆದಿದೆ. ಇಬ್ಬರ ನಡುವೆ ಪರಸ್ಪರ ಪ್ರೀತಿ ಉಂಟಾಗಿ, ನಂತರ ಆ ಹೆಣ್ಣು‌ಮಗಳು ದೂರ ಹೋಗಲು ಶುರು ಮಾಡಿದ್ದಾಳೆ. ಬಳಿಕ ಆ ಹುಡುಗ ಯುವತಿಗೆ ಚುಚ್ಚಿದ್ದಾನೆ. ಅದರಲ್ಲಿ ಲವ್ ಜಿಹಾದ್‌ ಕಾಣುತ್ತಿಲ್ಲ. ಇದೊಂದು ಪ್ರೇಮ ಪ್ರಕರಣವಾಗಿ ಕಾಣುತ್ತಿದೆ ಎಂದು ತಿಳಿಸಿದರು.

ಉಡುಪಿ: ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ; ಸವಾರ ಸ್ಥಳದಲ್ಲೇ ಸಾವು – Vishwanews24

ಇನ್ನು, ನನಗೆ ಆ ಘಟನೆಯ ಪೂರ್ತಿ ಮಾಹಿತಿ ಗೊತ್ತಿಲ್ಲ. ಪರಸ್ಪರ ಪ್ರೀತಿ ಮೇಲೆ ಆಗಿರುವ ಘಟನೆ ಇದು. ಬಿಜೆಪಿಯವರು ಸ್ವಾಭಾವಿಕವಾಗಿ ಇಂಥಹ ವಿಚಾರದಲ್ಲಿ ಕಾಂಗ್ರೆಸನ್ನು ದೂಷಣೆ ಮಾಡೋದು ಅವರ ಕೆಲಸ ಎಂದ ಅವರು, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರನ್ನು ನಾವು ಯಾರೂ ರಕ್ಷಣೆ ಮಾಡುವುದಿಲ್ಲ. ರಾಜ್ಯದ ಜನತೆಗೆ ಗೃಹ ಸಚಿವನಾಗಿ ಭರವಸೆ ಕೊಡುತ್ತಿದ್ದೇನೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ರಕ್ಷಣೆ ಮಾಡುವಂತಹ ಪ್ರಮೇಯವೇ ಇಲ್ಲ ಎಂದು ಹೇಳಿದರು.

ಎ. 21ರಂದು ಕಾಪುವಿಗೆ ಮೈಸೂರು ಸಂಸದ ಪ್ರತಾಪ್‌ ಸಿಂಹ – Vishwanews24

Leave a Reply