ಕಾಲ್ತುಳಿತ ಪ್ರಕರಣ : ಹೆಬ್ರಿ ಮೂಲದ ಕುಟುಂಬಕ್ಕೆ 25 ಲಕ್ಷ ಪರಿಹಾರದ ಚೆಕ್  ಹಸ್ತಾಂತರ  – vishwanews24

Featured, ಉಡುಪಿ

ಕಾಲ್ತುಳಿತ ಪ್ರಕರಣ : ಹೆಬ್ರಿ ಮೂಲದ ಕುಟುಂಬಕ್ಕೆ 25 ಲಕ್ಷ ಪರಿಹಾರದ ಚೆಕ್  ಹಸ್ತಾಂತರ 

ಉಡುಪಿ: ಆರ್ ಸಿ ಬಿ ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮೃತಳಾದ ಹೆಬ್ರಿ ಮೂಲದ ಅವಘಡದಲ್ಲಿ ಮೃತಳಾದ ಚಿನ್ಮಯಿ ಶೆಟ್ಟಿ (19) ಕುಟುಂಬಕ್ಕೆ ಸರ್ಕಾರದ ವತಿಯಿಂದ ಮಂಜೂರಾದ ರೂ 25 ಲಕ್ಷ ಪರಿಹಾರದ ಚೆಕ್ ನ್ನು ಉಡುಪಿ ಜಿಲ್ಲಾಡಳಿತದ ವತಿಯಿಂದ ಹಸ್ತಾಂತರ ಮಾಡಲಾಯಿತು.

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕುಚ್ಚೂರು ರಸ್ತೆಯಲ್ಲಿರುವ ಮೃತ ಚಿನ್ಮಯಿ ಶೆಟ್ಟಿ ಅವರ ತಾಯಿಯ ಹಿರಿಯರ ಮನೆಗೆ ತೆರಳಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಎಸ್ ಪಿ ಹರಿರಾಮ್ ಶಂಕರ್, ಎ.ಸಿ ರಶ್ಮಿ ಮೂಲಕ ಚೆಕ್ ಹಸ್ತಾಂತರ ಮಾಡಲಾಯಿತು. ನೊಂದ ಕುಟುಂಬಕ್ಕೆ ಜಿಲ್ಲಾಧಿಕಾರಿ ಸಾಂತ್ವಾನ ಹೇಳಿದರು.

ಉಡುಪಿ:  ಮೀನು ಮಾರಾಟ ಫೆಡರೇಶನ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಸುವರ್ಣ – vishwanews24

ಅವರು ಕರುಣಾಕರ ಶೆಟ್ಟಿ ಮತ್ತು ಪೂಜಾ ಶೆಟ್ಟಿ ಅವರ ಪುತ್ರಿಯಾಗಿದ್ದು, ಪೂಜಾ ಶೆಟ್ಟಿ ಅವರ ತಾಯಿ ಮನೆ ಹೆಬ್ರಿಯ ಇಂದಿರಾನಗರದ ಮದಗದಲ್ಲಿದೆ.

ಕುರುಣಾಕರ ಶೆಟ್ಟಿ ಅವರ ಕುಟುಂಬವು ಬೆಂಗಳೂರಿನ ತಿಪ್ಪಸಂದ್ರದಲ್ಲಿ ನೆಲೆಸಿದ್ದು, ರಜಾದಿನಗಳಲ್ಲಿ ಚಿನ್ಮಯಿ ಅವರು ಅಜ್ಜಿ ಮನೆಗೆ ಬುರುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಜ್ಯೋತಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ ಚಿನ್ಮಯಿ ಅವರು ಬಾಲ್ಯದಿಂದಲೇ ಪ್ರತಿಭಾನ್ವಿತೆಯಾಗಿದ್ದರು.

ಮುಂದಿನ 4 ದಿನ ಮಳೆ ಸಾಧ್ಯತೆ : ಇಂದು ರಾಜ್ಯಾದ್ಯಂತ ಯೆಲ್ಲೋ ಅಲರ್ಟ್ – vishwanews24

Leave a Reply