ಕಾಶ್ಮೀರಿಗಳಿಗೆ ಅವರ ಸರಿಯಾದ ಹಕ್ಕುಗಳನ್ನು ನೀಡಬೇಕು : ಶಾಹಿದ್ ಆಫ್ರಿದಿ -Vishwanews24
ನವದೆಹಲಿ: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ಶಾಹಿದ್ ಆಫ್ರಿದಿ ಇದೀಗ ವಿಶ್ವಸಂಸ್ಥೆಯ ಅಸ್ಥಿತ್ವವನ್ನು ಪ್ರಶ್ನಿಸಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಶಾಹಿದ್ ಆಫ್ರಿದಿ, ವಿಶ್ವಸಂಸ್ಥೆ ನಿರ್ಣಯದ ಪ್ರಕಾರ, ಕಾಶ್ಮೀರಿಗಳಿಗೆ ಅವರ ಸರಿಯಾದ ಹಕ್ಕುಗಳನ್ನು ನೀಡಬೇಕು. ನಮ್ಮೆಲ್ಲರಂತೆ ಸ್ವಾತಂತ್ರ್ಯದ ಹಕ್ಕುಗಳು.
ವಿಶ್ವಸಂಸ್ಥೆಯನ್ನು ಯಾಕಾಗಿ ರಚಿಸಲಾಗಿದೆ ಮತ್ತು ಅದು ಏಕೆ ನಿದ್ರಿಸುತ್ತಿದೆ? ಮಾನವೀಯತೆಯ ವಿರುದ್ಧ ಕಾಶ್ಮೀರದಲ್ಲಿ ನಡೆಯುತ್ತಿರುವ ಅಪ್ರಚೋದಿತ ಆಕ್ರಮಣ ಮತ್ತು ಅಪರಾಧಗಳನ್ನು ಗಮನಿಸಬೇಕು. ಅಮೆರಿಕ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ತಮ್ಮ ಪಾತ್ರವನ್ನು ನಿಭಾಯಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
ವಿಪಕ್ಷಗಳ ಗದ್ದಲದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಡಿಸಿದರು. ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಒಳಗೊಂಡಿರುವ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಕ್ ವಿಧಾನಸಭೆ ಒಳಗೊಂಡಿರದ ಕೇಂದ್ರಾಡಳಿತ ಪ್ರದೇಶವಾಗಿದೆ.
Kashmiris must be given their due rights as per #UN resolution. The rights of Freedom like all of us. Why was @UN created & why is it sleeping? The unprovoked aggression & crimes being committed in Kashmir against #Humanity must be noted. The @POTUS must play his role to mediate
— Shahid Afridi (@SAfridiOfficial) August 5, 2019
