ಕಾಶ್ಮೀರ ಭಾರತದ ಭಾಗ, ಅದು ಯಾವಾಗ ನಿಮ್ಮದಾಗಿತ್ತು ?: ಪಾಕ್ ಗೆ ರಾಜನಾಥ್ ಸಿಂಗ್ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್, ದೇಶ

ಲಡಾಕ್: ಕಾಶ್ಮೀರ ಭಾರತದ ಭಾಗ, ಕಾಶ್ಮೀರದ ಬಗ್ಗೆ ಮಾತನಾಡುವ ಯಾವುದೇ ಅಧಿಕಾರ ಪಾಕಿಸ್ತಾನಕ್ಕಿಲ್ಲ ಎಂದು ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಕಿಡಿ ಕಾರಿದ್ದಾರೆ.

ಸಂವಿಧಾನ ವಿಧಿ 370ನ್ನು ರದ್ದುಪಡಿಸಿ ಜಮ್ಮು-ಕಾಶ್ಮೀರ ವಿಭಜನೆ ನಂತರ ರಕ್ಷಣಾ ಮೊದಲ ಬಾರಿಗೆ ಲಡಾಕ್ ಗೆ ಭೇಟಿ ನೀಡಿ, ಅಲ್ಲಿ 26ನೇ ಕಿಸಾನ್ -ಜವಾನ್ ವಿಜ್ಞಾನ ಮೇಳವನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್ ಕಾಶ್ಮೀರದ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವ, ಮಾತನಾಡುವ ಪಾಕಿಸ್ತಾನಕ್ಕೆ ನಾನು ಒಂದು ಪ್ರಶ್ನೆ ಕೇಳಲು ಇಚ್ಚಿಸುತ್ತೇನೆ, ಕಾಶ್ಮೀರ ಯಾವಾಗ ನಿಮ್ಮದಾಗಿತ್ತು ಎಂದು ಕೇಳುತ್ತೇನೆ ಎಂದಿದ್ದಾರೆ.

ಕಾಶ್ಮೀರ ಭಾರತದ ಭಾಗ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಮಾತನಾಡುವ ಯಾವುದೇ ಅಧಿಕಾರವಿಲ್ಲ. ಕಾಶ್ಮೀರ ಹೇಗೆ ಪಾಕಿಸ್ತಾನದ್ದಾಗಿತ್ತು, ಕಾಶ್ಮೀರ ವಿಚಾರದಲ್ಲಿ ಅವರೇಕೆ ಹಸ್ತಕ್ಷೇಪ ಮಾಡಬೇಕು ಎಂದು ಹೇಳಿದ್ದಾರೆ.