ಕಿನ್ನಿಗೋಳಿ: ನಾಗರಹಾವಿಗೆ ಡೀಸೆಲ್‌ ಎರಚಿದಾತ ಅಸ್ವಸ್ಥ: ಮೈ ಉರಿಯಿಂದ ಆಸ್ಪತ್ರೆಗೆ ದಾಖಲು – Vishwanews24

Featured, ದಕ್ಷಿಣ ಕನ್ನಡ

ಕಿನ್ನಿಗೋಳಿ: ನಾಗರಹಾವಿಗೆ ಡೀಸೆಲ್‌ ಎರಚಿದಾತ ಅಸ್ವಸ್ಥ: ಮೈ ಉರಿಯಿಂದ ಆಸ್ಪತ್ರೆಗೆ ದಾಖಲು

ಕಿನ್ನಿಗೋಳಿ: ನಾಗರಹಾವಿಗೆ ಡೀಸೆಲ್‌ ಎರಚಿದಾತ ಅಸ್ವಸ್ಥಗೊಂಡು ತಾನೂ ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ನಡೆದಿದೆ.

ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ಕಳೆದ ವಾರ ನಾಗರ ಹಾವೊಂದು ಕಂಡುಬಂದಿದ್ದು, ಇದನ್ನು ಕಂಡ ಕಟ್ಟಡದ ಕಾವಲುಗಾರ ಉತ್ತರ ಕರ್ನಾಟಕ ಮೂಲದ ವ್ಯಕ್ತಿ ನಾಗರ ಹಾವಿಗೆ ಡೀಸೆಲ್‌ ಎರಚಿದ್ದ. ಉರಿಯಿಂದ ನಾಗರ ಹಾವು ಒದ್ದಾಡಿತ್ತು.

ಮುಲ್ಕಿ: ಕಾರು-ಬೈಕ್ ಢಿಕ್ಕಿ: ಸಹಸವಾರೆ ಮೃತ್ಯು – Vishwanews24

ಸ್ಥಳೀಯರು ಇದನ್ನು ಕಂಡು ಉರಗ ರಕ್ಷಕ ಯತೀಶ್‌ ಕಟೀಲು ಅವರಿಗೆ ತಿಳಿಸಿದ್ದು, ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಣೆ ಮಾಡಿ ಶ್ಯಾಂಪ್‌ ಮೂಲಕ ಮೈ ತೊಳೆದು ಸಹಜ ಸ್ಥಿತಿಗೆ ತಂದು ಅನಂತರ ಕಾಡಿಗೆ ಬಿಟ್ಟಿದ್ದರು.

ಒಂದು ವಾರ ಕಳೆಯುವಷ್ಟರಲ್ಲಿ ಡೀಸೆಲ್‌ ಎರಚಿದ ಕಾರ್ಮಿಕ ಕೂಡ ನಾಗರ ಹಾವಿನಂತೆ ಮೈಉರಿಯಿಂದ ಬಳಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.

ಕೊಪ್ಪಳದಲ್ಲೂ `ಚೈತ್ರಾ’ ಮಾದರಿ ವಂಚನೆ ಪ್ರಕರಣ ; ಅಮಿತ್ ಶಾ ಹೆಸರು ಹೇಳಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ – Vishwanews24

Leave a Reply