ಕಿನ್ನಿಗೋಳಿ : ನಿರ್ಮಾಣ ಹಂತದ ಮನೆಯ ಕಾಮಗಾರಿಗೆ ತಂದಿಟ್ಟಿದ್ದ ಸೆಂಟ್ರಿಂಗ್ ತಗಡು ಶೀಟ್ ಕಳವು – Vishwanews24
ಕಿನ್ನಿಗೋಳಿ : ನಿರ್ಮಾಣ ಹಂತದ ಮನೆಯ ಕಾಮಗಾರಿಗೆ ತಂದಿಟ್ಟಿದ್ದ ಸೆಂಟ್ರಿಂಗ್ ತಗಡು ಶೀಟ್ ಕಳವು
ಕಿನ್ನಿಗೋಳಿ: ನಿರ್ಮಾಣ ಹಂತದ ಮನೆಯ ಕಾಮಗಾರಿಗೆ ತಂದಿಟ್ಟಿದ್ದ ಸೆಂಟ್ರಿಂಗ್ ತಗಡು ಶೀಟ್‌ಗಳನ್ನು ಕಳವಾದ ಘಟನೆ ಕಿನ್ನಿಗೋಳಿ ಸಮೀಪದ ಅಂಗರಗುಡ್ಡೆ ಮಸೀದಿ ಬಳಿ ನಡೆದಿದೆ.
ಅತಿಕಾರಿಬೆಟ್ಟು ಗ್ರಾ. ಪಂ ವ್ಯಾಪ್ತಿಯ ಅಂಗರಗುಡ್ಡೆ ಮಸೀದಿ ಬಳಿ ಸ್ಥಳೀಯರಾದ ಶಂಶುದ್ದೀನ್ ಎಂಬವರು ಮನೆ ಕಟ್ಟುತ್ತಿದ್ದು ಕಾಮಗಾರಿಗೆ ಸುಮಾರು 48 ಸೆಂಟ್ರಿಂಗ್ ತಗಡು ಶೀಟ್ ತಂದಿರಿಸಿದ್ದರು.
ನ. 19ರಂದು ಮಂಗಳೂರಿಗೆ ಮುಖ್ಯಮಂತ್ರಿ ಆಗಮನ – Vishwanews24
ಇನ್ನು ಕಳ್ಳರು ಬುಧವಾರ ರಾತ್ರಿ ಸುಮಾರು 26 ಶೀಟ್ ಗಳನ್ನು ಕಳವು ಮಾಡಿದ್ದು ಅದರ ಮೌಲ್ಯ 57,200 ಎಂದು ಅಂದಾಜಿಸಲಾಗಿದೆ.
ಮಸೀದಿ ಸಿಸಿ ಕ್ಯಾಮರಾದಲ್ಲಿ ಆರೋಪಿಗಳು ಆಟೋದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ದೃಶ್ಯ ದಾಖಲಾಗಿದ್ದು, ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
