ಕುಂದಾಪುರ, : ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಸಾವನಪ್ಪಿದ ಘಟನೆ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಪ್ಪುಂದ ಸಮೀಪದ ನಾಯ್ಕನಕಟ್ಟೆ ಎಂಬಲ್ಲಿ ಜು 31 ರ ಮಂಗಳವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಪಾದಾಚಾರಿ ವ್ಯಕ್ತಿಯನ್ನು ಹೇರಂಜಾಲು ನಿವಾಸಿ ಬಾಬು ಗಾಣಿಗ ಎಂದು ಗುರುತಿಸಲಾಗಿದೆ.
ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಬಾಬು ಗಾಣಿಗ ಕೆಲಸ ಮುಗಿಸಿ ನಾಯ್ಕನಕಟ್ಟೆಗೆ ಬಂದಿದ್ದರು. ನಾಯಕ್ನಕಟ್ಟೆ ಪೇಟೆಯಲ್ಲಿ ಸಾಮಾನು ಖರೀದಿಸಿ ರಾತ್ರಿ ಮನೆಗೆ ಹೋಗಲೆಂದು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಇದೇ ಸಂದರ್ಭ ಹೆದ್ದಾರಿಯಲ್ಲಿ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡ ಬಾಬು ಗಾಣಿಗ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತ ನಡೆದು ಸಾಕಷ್ಟು ಸಮಯವಾದರೂ ಸಾವಿಗೀಡಾದ ವ್ಯಕ್ತಿಯ ಪರಿಚಯ ಸಿಕ್ಕಿರಲಿಲ್ಲ ಎನ್ನಲಾಗಿದೆ. ಅದೂ ಅಲ್ಲದೇ ರಾತ್ರಿ ವೇಳೆಯಾಗಿದ್ದರಿಂದ ಮುಖದ ಗುರುತು ಸಿಕ್ಕಿರಲಿಲ್ಲ ಎನ್ನಲಾಗಿದೆ. ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…