ಕುಂದಾಪುರ: ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿ ಅಶೋಕ್ ಪೂಜಾರಿ ಅರ್ಜಿ ಸಲ್ಲಿಕೆ – Vishwanews24

Featured, ಉಡುಪಿ

ಕುಂದಾಪುರ: ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿ ಅಶೋಕ್ ಪೂಜಾರಿ ಅರ್ಜಿ ಸಲ್ಲಿಕೆ

ಕುಂದಾಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟೀಕೆಟ್ ಆಕಾಂಕ್ಷಿಯಾಗಿ ಬಿಲ್ಲವ ಸಮುದಾಯದ ನಾಯಕ, ಸಹಕಾರಿ ಧುರೀಣ ಅಶೋಕ್ ಪೂಜಾರಿ ಬೀಜಾಡಿ ಅವರು ಮಂಗಳವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರು.

ಪಕ್ಷದ ಟಿಕೇಟ್ ಅಪೇಕ್ಷಿಸುವ ಅಪೇಕ್ಷಿತರ ನಿಯಮ ಪ್ರಕಾರ ಅರ್ಜಿ ಸಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಕಟಣೆ ಹೊರಡಿಸಿದ್ದು ಈ ಹಿನ್ನಲೆಯಲ್ಲಿ ಅಶೋಕ್ ಪೂಜಾರಿಯವರನ್ನು ಅರ್ಜಿ ಸಲ್ಲಿಸಿದ್ದಾರೆ.

ಈ ವೇಳೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇಂದಿನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ – Vishwanews24

Leave a Reply