ಕುಂದಾಪುರ: ಕೋಡಿ ಸೇತುವೆ ಮೇಲೆ ಸ್ಕೂಟಿ ಇರಿಸಿ ಮಹಿಳೆ ನಾಪತ್ತೆ vishwanews24

Featured, ಉಡುಪಿ

ಕುಂದಾಪುರ: ಕೋಡಿ ಸೇತುವೆ ಮೇಲೆ ಸ್ಕೂಟಿ ಇರಿಸಿ ಮಹಿಳೆ ನಾಪತ್ತೆ

ಕುಂದಾಪುರ: ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು, ಕೋಡಿಯ ಸೇತುವೆಯ ಮೇಲೆ ತನ್ನ ಸ್ಕೂಟಿಯನ್ನು ಇರಿಸಿ ನದಿಗೆ ಹಾರಿ ನಾಪತ್ತೆಯಾದ ಘಟನೆ ಸೋಮವಾರ ನಡೆದಿದೆ.

ನಾಪತ್ತೆಯಾದ ಮಹಿಳೆಯನ್ನು ವಡೇರಹೋಬಳಿ ಗ್ರಾಮದ ವಿಠಲವಾಡಿ, ಜೆಎಲ್‌ಬಿ ರಸ್ತೆಯ ನಿವಾಸಿ ಹೀನಾ ಕೌಸರ್ (32) ಎಂದು ಗುರುತಿಸಲಾಗಿದೆ. ಅವರ ಪತಿ ಇಕ್ಬಾಲ್ (36) ವಿದೇಶದಲ್ಲಿ ಉದ್ಯೋಗದಲ್ಲಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹೀನಾ ತಾಯಿಯೊಂದಿಗೆ ವಿಠಲವಾಡಿಯ ಮನೆಯಲ್ಲಿ ವಾಸಿಸುತ್ತಿದ್ದರು.

ಮುಂದಿನ 4 ದಿನ ಮಳೆ ಸಾಧ್ಯತೆ : ಇಂದು ರಾಜ್ಯಾದ್ಯಂತ ಯೆಲ್ಲೋ ಅಲರ್ಟ್ – vishwanews24

ವರದಿಗಳ ಪ್ರಕಾರ, ಸೋಮವಾರ ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಟಿದ್ದರು. ಬಳಿಕ ಅವರ ಸ್ಕೂಟಿ ಹಾಗೂ ಚಪ್ಪಲಿ ಕೋಡಿ ಸೇತುವೆಯ ಮೇಲೆ ಪತ್ತೆಯಾಗಿದೆ. ಹೀನಾ ಅವರು ನದಿಗೆ ಹಾರಿರಬಹುದು ಎಂದು ಶಂಕಿಸಲಾಗಿದೆ. ಜೊತೆಗೆ ಸ್ಕೂಟಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಘಟನೆ ಬಳಿಕ ಕುಂದಾಪುರ ಪೊಲೀಸರ ನೇತೃತ್ವದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಯಿಂದ ಹಗಲಿಡೀ ನದಿಯಲ್ಲಿ ದೋಣಿಯ ಮೂಲಕ ಹುಡುಕಾಟ ನಡೆಸಲಾಯಿತು. ಆದರೆ ಇದುವರೆಗೂ ಮಹಿಳೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಹೀನಾ ಅವರ ತಾಯಿ ಸಾದಿಕಾ ಬಾನು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಮುಂದಿನ 4 ದಿನ ಮಳೆ ಸಾಧ್ಯತೆ : ಇಂದು ರಾಜ್ಯಾದ್ಯಂತ ಯೆಲ್ಲೋ ಅಲರ್ಟ್ – vishwanews24

Leave a Reply