ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಲಾರಿ , ತಪ್ಪಿದ ಅನಾಹುತ – vishwanews24

Featured, ಉಡುಪಿ

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಲಾರಿ

ಕುಂದಾಪುರ: ಚಾಲಕನ ನಿದ್ದೆಗಣ್ಣಿನಿಂದ ನಿಯಂತ್ರಣ ತಪ್ಪಿದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಂಗಳೂರು ಸಮೀಪ ಇರುವ ಸಹನಾ ಕನ್ವೆನ್ಶನ್ ಸೆಂಟರ್ ಸಮೀಪ ರಸ್ತೆ ಬಿಟ್ಟು ಡಿವೈಡರ್ ಏರಿ ಸರ್ವಿಸ್ ರಸ್ತೆಗೆ ಮಗುಚಿ ಕೊಂಡ ಘಟನೆ ಮಂಗಳವಾರ ಬೆಳಿಗ್ಗಿನ ಜಾವ ಸುಮಾರು ಎರಡು ಗಂಟೆಗೆ ನಡೆದಿದೆ.

ಘಟನೆಯಲ್ಲಿ ಲಾರಿ ಮಗುಚಿ ಬಿದ್ದಿದ್ದು, ರಸ್ತೆ ಸಂಚಾರ ವಿರಳವಾಗಿದ್ದುದರಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.ಲಾರಿಯು ಮಂಗಳೂರಿನ ಕಾಟಿಪಳ್ಳ ಸಮೀಪದ ಕುತ್ತೆತ್ತೂರು ಎಂಬಲ್ಲಿಂದ ಎಂಆರ್‌ಪಿಎಲ್ ಕಂಪನಿಯಿಂದ ಲಕ್ಷಾಂತರ ಮೌಲ್ಯದ ಮ್ಯಾಂಗ್ಪೋಲ್ ಪಾಲಿಪ್ರೊಫೈಲೀನ್ ಎನ್ನುವ ಪ್ಲಾಸ್ಟಿಕ್ ಕಚ್ಚಾ ವಸ್ತುವನ್ನು ತುಂಬಿಕೊಂಡು ಮಹಾರಾಷ್ಟ್ರದ ಕಡೆಗೆ ಪ್ರಯಾಣಿಸುತ್ತಿತ್ತು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನದ ಹಿನ್ನಲೆ ಬುಧವಾರ (ನಾಳೆ) ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಣೆ – vishwanews24

ಘಟನಾ ಸ್ಥಳಕ್ಕೆ ಸ್ಥಳೀಯರು ಹಾಗೂ ಕುಂದಾಪುರ ಸಂಚಾರಿ ಪೊಲೀಸರು ಆಗಮಿಸಿ ಮಗುಚಿ ಬಿದ್ದ ಲಾರಿಯನ್ನು ಮೇಲೆತ್ತಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply