Featured

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು – vishwanews24

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

ಕುಂದಾಪುರ: ಎರಡು ದ್ವಿಚಕ್ರ ವಾಹನಗಳ ನಡುವೆ ಸೋಮವಾರ ತ್ರಾಸಿ ಬೀಚ್ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ದ್ವಿಚಕ್ರ ವಾಹನ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮುಂಜಾನೆ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪಡುಕೋಣೆ ಹಡವು ನಿವಾಸಿ ಪೆಟ್ರಿಕ್ ವಾಸ್ (63) ಮೃತಪಟ್ಟವರು.

ಪೆಟ್ರಿಕ್ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು ಕಳೆದ ಎರಡು ವರ್ಷಗಳ ಹಿಂದೆ ನಿವೃತ್ತಿ ಬಳಿಕ ಊರಿಗೆ ಆಗಮಿಸಿ ವೆಲ್ಡಿಂಗ್ ಶಾಪ್ ನಡೆಸಿಕೊಂಡಿದ್ದರು. ಸೋಮವಾರ ಸಂಬಂಧಿಕರನ್ನು ಭೇಟಿಯಾಗಿ ಮನೆಗೆ ಮರಳುವಾಗ ಈ ಅಪಘಾತ ನಡೆದಿತ್ತು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸೋಮವಾರ ತ್ರಾಸಿ ಬೀಚ್ ಬಳಿಯ ಅರಮ ದೇವಸ್ಥಾನದ ಎದುರು ಅಪಘಾತ ಸಂಭವಿಸಿದ್ದು, ಭಟ್ಕಳ ಸಣಭಾವಿ ನಿವಾಸಿ ದೀಪಕ್ ನಾಗಪ್ಪ ನಾಯ್ಕ್ (23) ಮೃತಪಟ್ಟಿದ್ದರು. ಇನ್ನೊಂದು ದ್ವಿಚಕ್ರ ವಾಹನದಲ್ಲಿದ್ದ ಪೆಟ್ರಿಕ್ ಹಾಗೂ ಅವರ ಪುತ್ರಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ – vishwanews24

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…

6 hours ago

ಬದುಕಿದ್ದಾಗ ಭಿಕ್ಷುಕಿಯಾಗಿದ್ದ ವೃದ್ಧೆ ಸತ್ತ ಮೇಲೆ ಲಕ್ಷಾಧಿಪತಿ ..- vishwanews24

ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…

9 hours ago

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ – vishwanews24

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…

9 hours ago

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ – vishwanews24

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…

10 hours ago

ಉಡುಪಿ : 25 ಗಂಟೆಗಳ ಕಾಲ ಗಾಯನ ; ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ದಾಖಲೆ – vishwanews24

25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್‌ ಬುಕ್‌ಆಫ್‌ ವರ್ಲ್ಡ್ ರೆಕಾರ್ಡ್‌ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…

10 hours ago

ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ – vishwanews24

ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ [gallery columns="1" size="large" ids="117027,117028,117029,117030,117031"]

10 hours ago