ಕುಂದಾಪುರ: ಪಿಯುಸಿ ವಿದ್ಯಾರ್ಥಿನಿಯ ಮೇಲೆ  ಅತ್ಯಾಚಾರ: ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು – vishwanews24

Featured, ಉಡುಪಿ

ಕುಂದಾಪುರ: ಪಿಯುಸಿ ವಿದ್ಯಾರ್ಥಿನಿಯ ಮೇಲೆ  ಅತ್ಯಾಚಾರ: ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

ಕುಂದಾಪುರ: ಪಿಯುಸಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಲ್ಲದೆ, ಆಕೆಯನ್ನು ಹೆದರಿಸಲು ಅಶ್ಲೀಲ ಫೋಟೋವನ್ನು ತೆಗೆದ ಕುರಿತು ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಶಂಕರನಾರಾಯಣ ಗ್ರಾಮದ ನಿವಾಸಿ ಶ್ರೇಯಾ ನಾಯ್ಕ ಅತ್ಯಾಚಾರವೆಸಗಿದ ಆರೋಪಿ. ಆತ ಒಂದು ವರ್ಷದ ಹಿಂದೆ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಪ್ರೀತಿಯ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿದ್ದಾನೆ.

ಸಾಲ ಮರುಪಾವತಿ ವಿಳಂಬವಾಗಿದ್ದಕ್ಕೆ ಪತ್ನಿ-ಪುತ್ರನ ಗೃಹಬಂಧನ ; ಮನನೊಂದು ರೈತ ಆತ್ಮಹತ್ಯೆ – vishwanews24

ಒಂದು ವರ್ಷದ ಹಿಂದೆ ಆಕೆಯನ್ನು ಪುಸಲಾಯಿಸಿ ಕಾರಿನಲ್ಲಿ ಕಾಡಿನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಕಾರಿನಲ್ಲೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಹೀಗೆ ನಿರಂತರವಾಗಿ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಾ ದೈಹಿಕ ತೀಟೆಯನ್ನು ತೀರಿಸಿಕೊಂಡಿದ್ದಾನೆ. ಆತ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯ ಅಶ್ಲೀಲ ಫೋಟೋ ತೆಗೆದಿರಿಸಿಕೊಂಡು ಆಕೆಗೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅಪಾರ್ಟ್ ಮೆಂಟ್ ಮೇಲ್ಛಾವಣಿಗೆ ಬಿದ್ದ ಮಗು ರಕ್ಷಣೆ : ಸಾಮಾಜಿಕ ಜಾಲತಾಣದಲ್ಲಿ ನಿಲ್ಲದ ಟೀಕೆ ; ಮನನೊಂದು ತಾಯಿ ಆತ್ಮಹತ್ಯೆ – vishwanews24

Leave a Reply