ಕುಂದಾಪುರ: ಬೈಕುಗಳೆರಡರ ಡಿಕ್ಕಿ ಸಂಭವಿಸಿದ ಪರಿಣಾಮ, ದಂಪತಿಗಳು ಪ್ರಯಾಣಿಸುತ್ತಿದ್ದ ಬೈಕ್‌ನಲ್ಲಿದ್ದ ಪತಿ ಹಾಗೂ ಪತ್ನಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದಾಗಲೇ ಪತಿ ಸಾವನ್ನಪ್ಪಿ ಪತ್ನಿ ಗಂಭೀರ ಗಾಯಗೊಂಡ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯೆಡ್ತೆರೆ ಎಂಬಲ್ಲಿ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರನನ್ನು ಸ್ಥಳೀಯ ನಿವಾಸಿ ಜಗದೀಶ ಪಟ್ವಾಲ್ ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಆಶಾ ಗಂಭೀರವಾಗಿ ಗಾಯಗೊಂಡವರು.
ಜಗದೀಶ್ ಪಟ್ವಾಲ್ ಅವರು ಬೈಕಿನಲ್ಲಿ ತನ್ನ ಪತ್ನಿ ಆಶಾ ಅವರನ್ನು ಕುಳ್ಳಿರಿಸಿಕೊಂಡು, ಬಿಜೂರು ಕಡೆಯಿಂದ ಬಂದು ಕೊಲ್ಲೂರು ರಸ್ತೆ ಕಡೆಗೆ ಹೋಗುತ್ತಿದ್ದಾಗ ಯಡ್ತರೆ ಜಂಕ್ಷನ್ ಬಳಿ ಮೋಟಾರು ಸೈಕಲ್ ನ ಬಲಬದಿಯ ಇಂಡಿಕೇಟರ್ ಹಾಕಿ ಬಲ ಬದಿಗೆ ತಿರುಗಿಸುತ್ತಿದ್ದ ಸಂದರ್ಭ ಮಹಮ್ಮದ್ ಇಬ್ರಾಹಿಂ ಎಂಬಾತ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಅಪಘಾತ ನಡೆದಿದೆ.
ಇನ್ನು ಬೈಕ್ ಸವಾರ ಜಗದೀಶ್ ಪಟ್ವಾಲ್ ಹಾಗೂ ಸಹ ಸವಾರಳು ರಸ್ತೆಗೆ ಬಿದ್ದಿದ್ದು ಜಗದೀಶ್ ಪಟ್ವಾಲ್ ರವರಿಗೆ ಹೊಟ್ಟೆಯ ಭಾಗ, ಸೊಂಟಕ್ಕೆ ಒಳ ನೋವು ಹಾಗೂ ರಕ್ತಗಾಯವಾಗಿತ್ತು. ಆಶಾ ಅವರಿಗೆ ತಲೆ, ಬಲಕೈಗೆ ರಕ್ತ ಗಾಯವಾಗಿದ್ದು, ಗಾಯಾಳುಗಳನ್ನು ಗುರುಕಿರಣ ಹಾಗೂ ಶ್ರೀಧರ್ ರವರು ಚಿಕಿತ್ಸೆ ಬಗ್ಗೆ ಮಣಿಪಾಲಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಜಗದೀಶ್ ದಾರಿಮಧ್ಯೆ ಮೃತಪಟ್ಟಿದ್ದಾರೆ. ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದು ಅವರ ಸ್ಥಿತಿ ಗಂಭಿರವಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಪಿಎಫ್‌ಐ, ಎಸ್‌ಡಿಪಿಐ ಕಚೇರಿ ಮೇಲೆ ಎನ್‌ಐಎ ದಾಳಿ..ಕಾರ್ಯಕರ್ತರಿಂದ ಪ್ರತಿಭಟನೆ – Vishwanews24
ಅ.1 ರಿಂದ ಜನನ ಮತ್ತು ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ ಜಾರಿಗೆ ನವದೆಹಲಿ: ಜನನ ಮತ್ತು ಮರಣ ನೋಂದಣಿಯನ್ನು ವಿಳಂಬವಾಗಿ…
ರಾಜ್ಯ ಸರ್ಕಾರ ಪಡಿತರ ಕಾರ್ಡ್ದಾರರಿಗೆ ಬಿಗ್ ಗುಡ್ ನ್ಯೂಸ್ ಇ-ಕೆವೈಸಿಗೆ ಅಕ್ಟೋಬರ್ 20ರವರೆಗೆ ಗಡುವು ವಿಸ್ತರಣೆ ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ…
ಇನ್ಸ್‌ಪೆಕ್ಟರ್ ಧನಂಜಯ್ ಯಾವುದೇ ತಪ್ಪು ಮಾಡಿಲ್ಲ; ಅವರು ಬುದ್ಧಿವಾದ ಹೇಳಿದ್ದಾರೆ ತಪ್ಪೇ ಮಾಡದ ಇನ್ಸ್‌ಪೆಕ್ಟರ್ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಬೇಕು..…
ಕುಂದಾಪುರ : ಬೇಳೂರು ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ; ಕಡತಗಳ ಪರಿಶೀಲನೆ ಉಡುಪಿ: ಕಟ್ಟಡ ಪರವಾನಗಿ ನೀಡುವಲ್ಲಿ ವಿಳಂಬ ಸೇರಿದಂತೆ…
'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನೀಡಿದ ಅಪಾರ…
ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ ಕೊಣಾಜೆ : ಚಾಲಕನ ನಿಯಂತ್ರಣ…