Featured

ರೇಷನ್ ಕಾರ್ಡ್​ ಇ-ಕೆವೈಸಿ ದಿನಾಂಕ ವಿಸ್ತರಣೆ: ಸರ್ಕಾರದಿಂದ ಮಹತ್ವದ ಆದೇಶ – vishwanews24

ರಾಜ್ಯ ಸರ್ಕಾರ ಪಡಿತರ ಕಾರ್ಡ್​ದಾರರಿಗೆ ಬಿಗ್ ಗುಡ್​ ನ್ಯೂಸ್

ಇ-ಕೆವೈಸಿಗೆ ಅಕ್ಟೋಬರ್ 20ರವರೆಗೆ ಗಡುವು ವಿಸ್ತರಣೆ

ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ ಪರಿಷ್ಕರಣೆ

ಬೆಂಗಳೂರು: ರಾಜ್ಯ ಸರ್ಕಾರ ಪಡಿತರ ಕಾರ್ಡ್​ದಾರರಿಗೆ ಬಿಗ್ ಗುಡ್​ ನ್ಯೂಸ್​ ನೀಡಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಎದುರಾಗುತ್ತಿರುವ ತೀವ್ರ ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿಗೆ ಅಡಚಣೆ ಉಂಟಾದ ಹಿನ್ನೆಲೆ ಪಡಿತರ ಇ-ಕೆವೈಸಿ ಅವಧಿ ವಿಸ್ತರಣೆ ಮಾಡಿ ಸರ್ಕಾರ ಅದೇಶ ಹೊರಡಿಸಿದೆ. ಅಕ್ಟೋಬರ್ 20ರವರೆಗೆ ಅವಧಿ ವಿಸ್ತರಿಸಿದ ಸರ್ಕಾರ, ನ್ಯಾಯಬೆಲೆ ಅಂಗಡಿಗಳ ಸಮಯದಲ್ಲೂ ಬದಲಾವಣೆ ಮಾಡಿದೆ.

ಅಕ್ಟೋಬರ್ 20ರವರೆಗೆ ಗಡುವು ವಿಸ್ತರಣೆ

ರಾಜ್ಯದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಅಕ್ಟೋಬರ್ 20ರವರೆಗೆ ಕಾಲಾವಕಾಶ ನೀಡಿ ಡೆಡ್​​ಲೈನ್​ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಸೆಪ್ಟೆಂಬರ್ 30ರೊಳಗೆ ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಇದೀಗ ಸದ್ಯ ಗಡುವು ವಿಸ್ತರಣೆ ಮಾಡಿ ಅಕ್ಟೋಬರ್ 20ರವರೆಗೆ ಕಾಲಾವಕಾಶ ನೀಡಲಾಗಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾಗಿರೋ ಸರ್ವರ್ ಸಮಸ್ಯೆಗೆ ಜನಸಾಮಾನ್ಯರು ಕಂಗಾಲಾಗಬೇಕಿಲ್ಲ, ಇ-ಕೆವೈಸಿ ಗಡುವನ್ನ ಅಕ್ಟೋಬರ್ 20 ರವರೆಗೆ ವಿಸ್ತರಣೆ ಮಾಡಿರೋದಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ ಪರಿಷ್ಕರಣೆ

ಇನ್ನು ಬಡವರು, ದಿನಗೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎರಡು ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್ 1ರಿಂದ ಜಾರಿಯಾಗುವಂತೆ ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಬೆಳಿಗ್ಗೆ 07:00 ರಿಂದ ಮಧ್ಯಾಹ್ನ 12:00 ರವರೆಗೆ ಹಾಗೂ ಸಂಜೆ 04:00 ರಿಂದ ರಾತ್ರಿ 08:00 ರವರೆಗೆ ನ್ಯಾಯಬೆಲೆ ಅಂಗಡಿಗಳು ಓಪನ್ ಇರಬೇಕೆಂದು ಆದೇಶದಲ್ಲಿ ತಿಳಿಸಿದೆ. ದಿನಗೂಲಿ ಕಾರ್ಮಿಕರ ಆದಾಯಕ್ಕೆ ಧಕ್ಕೆಯಾಗದಂತೆ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

Vishwa News 24

Recent Posts

ಅ.1 ರಿಂದ ಜನನ ಮತ್ತು ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ ಜಾರಿಗೆ – vishwanews24

ಅ.1 ರಿಂದ ಜನನ ಮತ್ತು ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ ಜಾರಿಗೆ ನವದೆಹಲಿ: ಜನನ ಮತ್ತು ಮರಣ ನೋಂದಣಿಯನ್ನು ವಿಳಂಬವಾಗಿ…

55 minutes ago

ಗಣಪತಿ ಮೆರವಣಿಗೆ ವಿಚಾರಕ್ಕೆ ಧಮ್ಕಿ : ಇನ್ಸ್‌ಪೆಕ್ಟರ್‌ ಯಾವುದೇ ತಪ್ಪು ಮಾಡಿಲ್ಲ : ಯತೀಂದ್ರ ಸಿದ್ದರಾಮಯ್ಯ – vishwanews24

ಇನ್ಸ್‌ಪೆಕ್ಟರ್‌ ಧನಂಜಯ್ ಯಾವುದೇ ತಪ್ಪು ಮಾಡಿಲ್ಲ; ಅವರು ಬುದ್ಧಿವಾದ ಹೇಳಿದ್ದಾರೆ  ತಪ್ಪೇ ಮಾಡದ ಇನ್ಸ್‌ಪೆಕ್ಟರ್‌ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಬೇಕು..…

2 hours ago

ಕುಂದಾಪುರ : ಬೇಳೂರು ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ; ಕಡತಗಳ ಪರಿಶೀಲನೆ – vishwanews24

ಕುಂದಾಪುರ : ಬೇಳೂರು ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ; ಕಡತಗಳ ಪರಿಶೀಲನೆ ಉಡುಪಿ: ಕಟ್ಟಡ ಪರವಾನಗಿ ನೀಡುವಲ್ಲಿ ವಿಳಂಬ ಸೇರಿದಂತೆ…

2 hours ago

‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ – vishwanews24

'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನೀಡಿದ ಅಪಾರ…

4 hours ago

ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ – vishwanews24

ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ ಕೊಣಾಜೆ  : ಚಾಲಕನ ನಿಯಂತ್ರಣ…

4 hours ago

ಮಂಗಳೂರು : ಜೈಲಿನಲ್ಲಿ ಗಲಾಟೆ ;ಅಡುಗೆಮನೆ ಸ್ಫೋಟಿಸುವುದಾಗಿ ಕೈದಿ ಬೆದರಿಕೆ – vishwanews24

ಮಂಗಳೂರು : ಜೈಲಿನಲ್ಲಿ ಗಲಾಟೆ ;ಅಡುಗೆಮನೆ ಸ್ಫೋಟಿಸುವುದಾಗಿ ಕೈದಿ ಬೆದರಿಕೆ ಮಂಗಳೂರು,: ಜೈಲು ಅಡುಗೆಮನೆಯ ಗೇಟಿಗೆ ಬೀಗ ಹಾಕಿದ ಬಳಿಕ…

4 hours ago