ಕುಂದಾಪುರ : ಸಚಿವ ಸುನೀಲ್ ಕುಮಾರ್ ಪ್ರಖರ ಹಿಂದುತ್ವವಾದಿ , ಪ್ರಮೋದ್ ಮುತಾಲಿಕ್ ಗೆ ಕಾರ್ಕಳ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ : ಕುಯಿಲಾಡಿ ಸುರೇಶ್ ನಾಯಕ್ – Vishwanews24
ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆ ಕುರಿತಂತೆ ಅನಗತ್ಯ ಗೊಂದಲ ಸೃಷ್ಠಿಸುತ್ತಿರುವವರ ವಿರುದ್ದ ಶಿಸ್ತು ಕ್ರಮ..
ಟಿಕೆಟ್ ಅಕಾಂಕ್ಷಿಗಳಿಂದ, ಅನಗತ್ಯ ಗೊಂದಲ ಸೃಷ್ಟಿ ಬೇಡ..
ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಎಚ್ಚರಿಕೆ
ಕುಂದಾಪುರ: ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆ ಕುರಿತಂತೆ ಅನಗತ್ಯ ಗೊಂದಲ ಸೃಷ್ಠಿಸುತ್ತಿರುವವರ ವಿರುದ್ದ ಪಕ್ಷ ಶಿಸ್ತು ಕ್ರಮಕೈಗೊಳ್ಳಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಕುಂದಾಪುರದಲ್ಲಿ ಮಾತನಾಡಿದ ಅವರು ಈಗಾಗಲೇ ಕೆಲವರ ಅನಧಿಕೃತ ಸಭೆಗಳನ್ನು ನಡೆಸಿ ಹೇಳಿಕೆಗಳನ್ನು ನೀಡುತ್ತಿದ್ದು, ಪ್ರತಿ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಅವಕಾಶ ಇದೆ. ಆದರೆ ಎಲ್ಲಿ, ಯಾರನ್ನ ಕೇಳಬೇಕು ಅಲ್ಲಿಯೇ ಕೇಳಬೇಕೇ ಹೊರತು ನನಗೆ ಟಿಕೆಟ್ ಆಗಿದೆ ಎಂದು ಗೊಂದಲ ನಿರ್ಮಾಣ ಮಾಡುವುದು ಸರಿಯಲ್ಲ. ಪಕ್ಷದ ಹಿತಕ್ಕೆ ತೊಡಕಾಗುವ ಅನಧಿಕೃತ ಸಭೆ, ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸೋದಿಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಎಚ್ಚರಿಕೆ ನೀಡಿದ್ದಾರೆ.
ಅತ್ತಿಗೆಗೆ ಕಿರುಕುಳ ಆರೋಪ : ಸ್ಯಾಂಡಲ್‌ವುಡ್ ನಟಿ ಅಭಿನಯಗೆ ಎರಡು ವರ್ಷದ ಜೈಲು ಶಿಕ್ಷೆ ಪ್ರಕಟ – VIshwanews24
ಇನ್ನು ಪ್ರಮೋದ್ ಮುತಾಲಿಕ್ ಕಾರ್ಕಳದಲ್ಲಿ ಚುನಾವಣೆ ಸ್ಪರ್ಧೆಗೆ ಪ್ರತಿಕ್ರಿಯಿಸದ ಅವರು ಕಾರ್ಕಳ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರು ಫಲಿತಾಂಶದಲ್ಲಿ ಮುತಾಲಿಕ್ ಗೆ ಉತ್ತರ ಕೊಡುತ್ತಾರೆ. ಸಚಿವ ಸುನೀಲ್ ಕುಮಾರ್ ಪ್ರಖರ ಹಿಂದುತ್ವವಾದಿಯಾಗಿದ್ದು, ಸಂಘಟನೆ ಹಾಗೂ ಅಭಿವೃದ್ಧಿಯಲ್ಲಿ ಕಾರ್ಕಳವನ್ನು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿ ಇರಿಸಿದ್ದಾರೆ. ಮುತಾಲಿಕ್ ಅವರ ಬಗ್ಗೆ ಗೌರವ ಇದೆ. ಇದು ಖಂಡಿತ ಅವರ ತೀರ್ಮಾನವಲ್ಲ; ಕೆಲ ವಿಘ್ನ ಸಂತೋಷಿಗಳು, ಗೊಂದಲ ಸೃಷ್ಟಿಸಲು ಅವರನ್ನು ಅಭ್ಯರ್ಥಿಯಾಗಿ ಬಿಂಬಿಸಲು ಹೊರಟಿದ್ದಾರೆ ಎಂದರು.
