ಕುಂದಾಪುರ:  ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರ ಮೃತ್ಯು – vishwanews24

Featured, ಉಡುಪಿ

ಕುಂದಾಪುರ:  ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರ ಮೃತ್ಯು

ಕುಂದಾಪುರ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಲುವಾಗಿ ಬಿಟ್ಟಿದ್ದ ಮಾರಣಬಲೆ ತರಲು ಸಮುದ್ರಕ್ಕಿಳಿದ ಮೀನುಗಾರ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಮಲ್ಪೆ ಕರಾವಳಿ ಕಾವಲು ಪೊಲೀಸ್ ವ್ಯಾಪ್ತಿಯ ಕೋಟ ಸಮೀಪದ ಪಾರಂಪಳ್ಳಿ ಎಂಬಲ್ಲಿ ನಡೆದಿದೆ.

ಮೃತರನ್ನು ಪಾರಂಪಳ್ಳಿ ನಿವಾಸಿ ಭಾಸ್ಕರ ಪೂಜಾರಿ (55) ಎಂದು ಗುರುತಿಸಲಾಗಿದೆ.

ಯಡಿಯೂರಪ್ಪ ಪೋಕ್ಸೋ ಪ್ರಕರಣ : ರದ್ದು ಕೋರಿ ಅರ್ಜಿ ವಿಚಾರಣೆ ಸೆ.19ಕ್ಕೆ ಮುಂದೂಡಿಕೆ – vishwanews24

ಭಾಸ್ಕರ ಪೂಜಾರಿ ಪಾರಂಪಳ್ಳಿಯ ಬಳಿ ಸಮುದ್ರದಲ್ಲಿ ಬಿಟ್ಟಿದ್ದ ಮಾರಣಬಲೆಯನ್ನು ಮೇಲೆತ್ತಲು ಸಮುದ್ರಕ್ಕೆ ಇಳಿದಾಗ ಅಲೆಗೆ ಹೊಡೆತಕ್ಕೆ ಸಿಲುಕಿ ಮುಳುಗಿದ್ದಾರೆ. ತಕ್ಷಣ ನಿಯೋಜಿತರಾಗಿದ್ದ ಮಲ್ಪೆ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯ ಕೆ.ಎನ್.ಡಿ. (ಕರಾವಳಿ ನಿಯಂತ್ರಣ ದಳ) ಸಿಬ್ಬಂದಿ ಸತೀಶ್ ಮತ್ತು ಸುದರ್ಶನ್ ಎಸ್. ಕುಂದರ್ ಸಮುದ್ರಕ್ಕೆ ಹಾರಿ ಅವರನ್ನು ದಡಕ್ಕೆ ತಂದು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಭಾಸ್ಕರ್ ಪೂಜಾರಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಉಡುಪಿ: ಯಶ್‌ಪಾಲ್ ಸುವರ್ಣ ಸೇರಿ 11 ಮಂದಿ ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್  – vishwanews24

Leave a Reply