ಕುಂದಾಪುರ : ಸರ್ಕಾರದ ಆದೇಶವಿದ್ರೂ ಕಾಲೇಜಿಗೆ ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿನಿಯರು ; ಗೇಟ್ ಬಳಿ ತಡೆದ ಪ್ರಾಂಶುಪಾಲರು – Vishwanews24

Featured, ಉಡುಪಿ

ಕುಂದಾಪುರ: ಸರ್ಕಾರದ ಆದೇಶವಿದ್ರೂ ಕಾಲೇಜಿಗೆ ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿನಿಯರು ; ಗೇಟ್ ಬಳಿ ತಡೆದ ಪ್ರಾಂಶುಪಾಲರು – Vishwanews24

ಸರ್ಕಾರದ ಆದೇಶದಲ್ಲಿ ಕುಂದಾಪುರ ಕಾಲೇಜು ಉಲ್ಲೇಖವಿಲ್ಲ ಎಂದು ವಿದ್ಯಾರ್ಥಿನಿಯರ ವಾದ  ..

ಕುಂದಾಪುರ: ಸರ್ಕಾರದ ಆದೇಶವಿದ್ದರೂ ಕಾಲೇಜಿಗೆ ಹಿಜಾಬ್​ ಧರಿಸಿ ಬಂದಿದ್ದರಿಂದ ವಿದ್ಯಾರ್ಥಿನಿಯರು ಮತ್ತು ಪ್ರಾಂಶುಪಾಲರ ನಡುವೆ ವಾಗ್ವಾದ ಉಂಟಾದ ಘಟನೆ ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ.

ಹಿಜಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ತರಗತಿಗೆ ತೆರಳದಂತೆ ಪ್ರಾಂಶುಪಾಲರು ಕಾಲೇಜಿನ ಗೇಟ್ ಬಳಿ ತಡೆದರು. ಬಳಿಕ ಹಿಜಾಬ್ ಕಳಚಿ ಕ್ಲಾಸ್​ಗೆ ಬರುವಂತೆ ಸೂಚಿಸಿದರು.

ಇದನ್ನೂ ಓದಿ :

ಕುಂದಾಪುರ ಸರಕಾರಿ ಜೂನಿಯರ್ ಕಾಲೇಜಿನಲ್ಲೂ ಹಿಜಾಬ್ ವಿವಾದ  – Vishwanews24

ಈ ವೇಳೆ ಗೇಟ್ ಬಳಿ ಪ್ರಾಂಶುಪಾಲರ ಜೊತೆ ವಾಗ್ವಾದಕ್ಕಿಳಿದ ವಿದ್ಯಾರ್ಥಿನಿಯರು ಸರ್ಕಾರದ ಆದೇಶದಲ್ಲಿ ಕುಂದಾಪುರ ಕಾಲೇಜು ಉಲ್ಲೇಖವಿಲ್ಲ ಎಂದು ವಾದಿಸಿದರು. ಆದರೆ, ಸರಕಾರ ಇಡೀ ರಾಜ್ಯಕ್ಕೆ ಸುತ್ತೋಲೆ ಹೊರಡಿಸಿದೆ ಎಂದು ಪ್ರಾಂಶುಪಾಲರು ಉತ್ತರಿಸಿದರು.

ಸದ್ಯ ಈ ವಿವಾದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಿಕ್ಕಾಟಕ್ಕೆ ಕಾರಣವಾಗಿದೆ.

ಇದನ್ನೂ ಓದಿ :

ಮಂಗಳೂರು : ವಾಹನ ಚಲಾಯಿಸುತ್ತಿದ್ದ ಸಂದರ್ಭ ಹೃದಯಾಘಾತ : ಟ್ಯಾಕ್ಸಿ ಚಾಲಕ ಸಾವು – Vishwanews24

 

Leave a Reply