ಕುಂದಾಪುರ: ಕಲ್ಲಂಗಡಿ ಲೋಡ್ ಮಾಡುವವರ ಬಳಿ ಮಾತನಾಡಿ ಬರುತ್ತೇನೆಂದು ತೆರಳಿದ್ದ ಯುವಕ ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಕಿರಿಮಂಜೇಶ್ವರದ ನಾಗೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ. ಬಿಜೂರು ಗ್ರಾಮದ ದೀಟಿಮನೆ ನಿವಾಸಿ ಮುತ್ತಯ್ಯ ದೇವಾಡಿಗ ಎಂಬುವರ ಹಿರಿಯ ಪುತ್ರ ವಾಸುದೇವ ದೇವಾಡಿಗ ಯಾನೇ ಮಣಿಕಂಠ (25) ಸಾವನ್ನಪ್ಪಿದ ದುರ್ದೈವಿ.
ವೃತ್ತಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ವಾಸುದೇವ ದೇವಾಡಿಗ ಸುಮಾರು 5 ಎಕ್ರೆ ಜಾಗದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಇನ್ನು ಎರಡು ಮೂರು ದಿನದಲ್ಲಿ ಕಲ್ಲಂಗಡಿ ಕಟಾವಿಗೆ ಸಿದ್ಧತೆ ಮಾಡಿದ್ದರು. ನಾಗೂರಿನಲ್ಲಿ ಫೆಬ್ರುವರಿ, 4 ರಂದು ಮಂಗಳವಾರ ಸಂಜೆ ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭದಲ್ಲಿ ತನ್ನ ವಾಹನವನ್ನು ಕಲ್ಲಂಗಡಿ ಹಣ್ಣಿನ ಲೋಡ್ ಮಾಡಲು ಮತ್ತೊಬ್ಬರಿಗೆ ನೀಡಿದ್ದು, ಅವರು ವಾಹನವನ್ನು ಅವರು ರೈಲ್ವೆ ಹಳಿ ಪಶ್ಚಿಮ ದಿಕ್ಕಿನಲ್ಲಿ ನಿಲ್ಲಿಸಿ ಕಲ್ಲಂಗಡಿ ಹಣ್ಣಿನ ಲೋಡ್ ಮಾಡುತ್ತಿದ್ದವರ ಬಳಿ ಮಾತನಾಡಿ ಹಣ ಕೊಟ್ಟು ಬರುತ್ತೇನೆಂದು ರೈಲ್ವೇ ಹಳಿ ದಾಟಿ ಹೋಗಿ ವಾಪಾಸು ಬರುತ್ತಿದ್ದರು.
ಈ ವೇಳೆ ಮಂಗಳೂರು ಕಡೆಯಿಂದ ಮಡಗಾಂವ್ ಕಡೆಗೆ ರೈಲು ಬರುತ್ತಿರುವುದನ್ನು ಕೊನೆಯ ಕ್ಷಣದಲ್ಲಿ ಗಮನಿಸಿದ ವಾಸುದೇವ ತಪ್ಪಿಸಿಕೊಳ್ಳಲು ಯತ್ನಿಸಿ ಹಳಿಯ ಪಕ್ಕಕ್ಕೆ ಸರಿದು ತಿರುಗಿದಾಗ ಮುಖಕ್ಕೆ ರೈಲು ಡಿಕ್ಕಿಯಾಗಿ ತಲೆ ಛಿದ್ರವಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಾಸುದೇವ ಮುತ್ತಯ್ಯ ದೇವಾಡಿಗರ ಐದು ಜನ ಮಕ್ಕಳ ಪೈಕಿ ಹಿರಿಯವನಾಗಿದ್ದಾನೆ.
ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ ಮಂಗಳೂರು: ನಗರದ ಕುಲಶೇಖರದ ಕೊಂಗೂರು ನಿವಾಸಿಗಳಾದ…
ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು ಶಿರ್ವ: ಪತ್ನಿ, ಆಕೆಯ ಸಹೋದರಿ ಮತ್ತು ಪತ್ನಿಗೆ ಇನ್‌ಸ್ಟಾಗ್ರಾಮ್…
ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ ಹಳೆಯಂಗಡಿ: ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸಿಗೆ…
ಉಡುಪಿ: ಸ್ಪೀಡ್ ರಾಡಾರ್ ಕೆಮರಾ ಕಣ್ಣು ; ಒಂದು ವಾರದಲ್ಲಿ 47,709 ವಾಹನಗಳು ಸಂಚಾರ ನಿಯಮ ಉಲ್ಲಂಘನೆ ಉಡುಪಿ :…
CMRL ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ಈಡಿ ದಾಳಿ ತಿರುವನಂತಪುರಂ: ಕೊಚ್ಚಿನ್…
ಮೇ 30-31 ರಂದು ದ.ಕ. ಜಿಲ್ಲೆಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಭೇಟಿ ಮಂಗಳೂರು: ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು…