Featured

ಕುಂದಾಪುರ : ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಗೃಹ ನಿರ್ಮಿಸಿಕೊಟ್ಟ ಗೋವಿಂದ ಬಾಬು ಪೂಜಾರಿ – Vishwanews24

ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಗೃಹ ನಿರ್ಮಿಸಿಕೊಟ್ಟ ಗೋವಿಂದ ಬಾಬು ಪೂಜಾರಿ

ಒಟ್ಟು ಇದುವರೆಗೆ ಬಡವರಿಗೆ ಹನ್ನೊಂದು ಮನೆ ನಿರ್ಮಿಸಿಕೊಟ್ಟ ಪುಣ್ಯಾತ್ಮ

ಕುಂದಾಪುರ: ಜ್ಞಾನಕ್ಕೆ ಜಾತಿ ಅಡ್ಡಿ ಬರುವುದಿಲ್ಲ, ನಮ್ಮಲ್ಲಿರುವ ಜಾತಿ ಭೇದ, ಮೇಲು ಕೀಳುವ ಎನ್ನುವ ಭಾವ ಮತಾಂತರಕ್ಕೆ ಕಾರಣವಾಗಿದೆ. ನಮ್ಮ ತೊಡಕನ್ನು ಸರಿ ಮಾಡಿಕೊಂಡರೆ ಮಾತ್ರ ಸಮಾಜ ಸುಧಾರಿಸಲಿದೆ. ಹಿಂದೂ ಎಂದರೆ ಎಲ್ಲರೂ ಒಂದಾಗುವುದು ಎನ್ನುವುದು ಅರ್ಥ. ದೇವರ ಪೂಜೆ ಮಾಡುವುದು ದೊಡ್ಡದಲ್ಲ. ದೇವರಂತೆ ಬದುಕಬೇಕು ಎಂದು ವಿನಯ್‌ ಗೂರುಜಿ ತಿಳಿಸಿದರು.

ಅಪಘಾತದಿಂದ ತನ್ನ ಕಾಲಿನ ಬಲ ಕಳೆದುಕೊಂಡಿರುವ ಮರವಂತೆ ಗ್ರಾಮದ ನಿವಾಸಿ, ಹಿಂದೂ ಸಂಘಟನೆ ಕಾರ್ಯಕರ್ತ ರಾಜುಮರವಂತೆ ಅವರಿಗೆ ಜ.5ರಂದು ಶ್ರೀ ವರಲಕ್ಷ್ಮೀ ಟ್ರಸ್ಟ್ ವತಿಯಿಂದ ನಿರ್ಮಿಸಿದ 11ನೇ ಮನೆಯ ಕೀ ಹಸ್ತಾಂತರಿಸಿ ಅವರು ಮಾತನಾಡಿದರು.

ವರಲಕ್ಷ್ಮೀಚಾರಿಟೆಬಲ್ ಮ್ಯಾನೇಜಿಂಗ್ ಟ್ರಸ್ಟಿ ಡಾ| ಗೋವಿಂದ ಬಾಬು ಪೂಜಾರಿ ಮಾತನಾಡಿ, ಧರ್ಮದ ಬಗ್ಗೆ ಸದಾ ಕಾಲ ದುಡಿಯುವ ಹಿಂದೂ ಸಂಘಟನೆಯ ಕಾರ್ಯಕರ್ತರ ಕುಟುಂಬದ ಸದಸ್ಯರಿಗೆ ಹಿಂದೂ ಸಮಾಜದವರುಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ವಿಹಿಂಪ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್‌ ವೆಲ್ ಮಾತನಾಡಿ ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ಪುಣ್ಯದ ಕೆಲಸ ಎನ್ನುವುದು ಭಾರತೀಯರಿಗೆ ಹುಟ್ಟಿ ನಿಂದಲೇ ಬಂದಿದೆ. ಜಗತ್ತಿನಲ್ಲೇ ಭರತ ಖಂಡ ಪವಿತ್ರವಾದ ಕ್ಷೇತ್ರವಾಗಿದೆ ಎಂದರು.

ಸ್ವಾಮೀಜಿ ಶ್ರೀ ಅಭಿನವ ಹಾಲಾಶ್ರೀ ಮಾತನಾಡಿ ದಾನ ಮಾಡುವುದು ಮುಖ್ಯವಲ್ಲ ಮಾಡುವ ಉದ್ದೇಶ ದೊಡ್ಡದಿರಬೇಕು. ಧರ್ಮದ ಕಾರ್ಯ ನಿಷ್ಕಲ್ಮಶದಿಂದ ಮಾಡಿದರೆ ಮಾತ್ರ ಸಾರ್ಥಕತೆಯಿಂದ ಕೂಡಿರುತ್ತದೆ. ರಾಷ್ಟ್ರದ ಚಿಂತನೆ, ದೇಶದ ಭವಿಷ್ಯದ ಬಗ್ಗೆ ಕರಾವಳಿಗರ ಧ್ವನಿ ಗಟ್ಟಿಯಾಗಿದೆ ಎಂದರು.

ಚೈತ್ರಾ ಕುಂದಾಪುರ, ಪ್ರಕಾಶ್ ಕುಕ್ಕೆಹಳ್ಳಿ ನಾರಾಯಣ ಶೆಟ್ಟಿ, ಬಾಬು ಪೂಜಾರಿ, ಮಂಜಮ್ಮ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್‌ನ ಬಜರಂಗದಳದ ವತಿಯಿಂದ ಸಮಾಜ ಸೇವಕ ಡಾ| ಗೋವಿಂದ ಬಾಬು ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.

Vishwa News 24

Recent Posts

ಮಂಗಳೂರು: ಕರಾವಳಿಯ ಮೀನುಗಾರ ಮುಖಂಡ , ಬಿಜೆಪಿ ಹಿರಿಯ ನಾಯಕ ರಾಮಚಂದ್ರ ಬೈಕಂಪಾಡಿ ನಿಧನ – vishwanews24

ಮಂಗಳೂರು: ಕರಾವಳಿಯ ಮೀನುಗಾರ ಮುಖಂಡ , ಬಿಜೆಪಿ ಹಿರಿಯ ನಾಯಕ ರಾಮಚಂದ್ರ ಬೈಕಂಪಾಡಿ ನಿಧನ ಮಂಗಳೂರು : ಕರಾವಳಿಯ ಪ್ರಭಾವಿ…

16 hours ago

ಮಂಗಳೂರು: ಯುವತಿ ನಾಪತ್ತೆ ; ಪ್ರಕರಣ ದಾಖಲು – vishwanews24

ಮಂಗಳೂರು: ಯುವತಿ ನಾಪತ್ತೆ ; ಪ್ರಕರಣ ದಾಖಲು ಮಂಗಳೂರು: ಮುಲ್ಕಿ ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಬಿಜಾಪುರ ಕಾಲನಿ ನಿವಾಸಿ…

16 hours ago

ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು – vishwanews24

ಮನೆಯಲ್ಲಿ ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು ಚಿಕ್ಕಮಗಳೂರು: ಮನೆಯಲ್ಲಿ ಜೋಕಾಲಿ ಹಾಕಿದ್ದ ಸೀರೆ…

16 hours ago

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಜೀರ್ ಅಹ್ಮದ್ – vishwanews24

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಜೀರ್ ಅಹ್ಮದ್ ಬೆಂಗಳೂರು : ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ…

16 hours ago

ಉಡುಪಿ: ಹೃದಯಾಘಾತದಿಂದ ಲೆಕ್ಕಪರಿಶೋಧಕ ನಿಧನ – vishwanews24

ಉಡುಪಿ: ಹೃದಯಾಘಾತದಿಂದ ಲೆಕ್ಕಪರಿಶೋಧಕ ನಿಧನ ಉಡುಪಿ: ಕುಕ್ಕಿಕಟ್ಟೆಯ ದಿನಸಿ ವ್ಯಾಪಾರಿ ದಿ. ಮರ್ತಪ್ಪ ಶೆಣೈ ಅವರ ಪುತ್ರ, ಲೆಕ್ಕಪರಿಶೋಧಕ ದೀಪಕ್…

16 hours ago

ಶಿರ್ವ : ಮಾನಸಿಕ ಖಿನ್ನತೆ ಹಿನ್ನೆಲೆ : ವ್ಯಕ್ತಿ ಆತ್ಮಹತ್ಯೆ – vishwanews24

ಶಿರ್ವ : ಮಾನಸಿಕ ಖಿನ್ನತೆ ಹಿನ್ನೆಲೆ : ವ್ಯಕ್ತಿ ಆತ್ಮಹತ್ಯೆ… ಶಿರ್ವ: ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವ ಗ್ರಾಮದ…

17 hours ago