ಕುಂದಾಪುರ : ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಗೃಹ ನಿರ್ಮಿಸಿಕೊಟ್ಟ ಗೋವಿಂದ ಬಾಬು ಪೂಜಾರಿ – Vishwanews24
ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಗೃಹ ನಿರ್ಮಿಸಿಕೊಟ್ಟ ಗೋವಿಂದ ಬಾಬು ಪೂಜಾರಿ
ಒಟ್ಟು ಇದುವರೆಗೆ ಬಡವರಿಗೆ ಹನ್ನೊಂದು ಮನೆ ನಿರ್ಮಿಸಿಕೊಟ್ಟ ಪುಣ್ಯಾತ್ಮ
ಕುಂದಾಪುರ: ಜ್ಞಾನಕ್ಕೆ ಜಾತಿ ಅಡ್ಡಿ ಬರುವುದಿಲ್ಲ, ನಮ್ಮಲ್ಲಿರುವ ಜಾತಿ ಭೇದ, ಮೇಲು ಕೀಳುವ ಎನ್ನುವ ಭಾವ ಮತಾಂತರಕ್ಕೆ ಕಾರಣವಾಗಿದೆ. ನಮ್ಮ ತೊಡಕನ್ನು ಸರಿ ಮಾಡಿಕೊಂಡರೆ ಮಾತ್ರ ಸಮಾಜ ಸುಧಾರಿಸಲಿದೆ. ಹಿಂದೂ ಎಂದರೆ ಎಲ್ಲರೂ ಒಂದಾಗುವುದು ಎನ್ನುವುದು ಅರ್ಥ. ದೇವರ ಪೂಜೆ ಮಾಡುವುದು ದೊಡ್ಡದಲ್ಲ. ದೇವರಂತೆ ಬದುಕಬೇಕು ಎಂದು ವಿನಯ್ ಗೂರುಜಿ ತಿಳಿಸಿದರು.
ಅಪಘಾತದಿಂದ ತನ್ನ ಕಾಲಿನ ಬಲ ಕಳೆದುಕೊಂಡಿರುವ ಮರವಂತೆ ಗ್ರಾಮದ ನಿವಾಸಿ, ಹಿಂದೂ ಸಂಘಟನೆ ಕಾರ್ಯಕರ್ತ ರಾಜುಮರವಂತೆ ಅವರಿಗೆ ಜ.5ರಂದು ಶ್ರೀ ವರಲಕ್ಷ್ಮೀ ಟ್ರಸ್ಟ್ ವತಿಯಿಂದ ನಿರ್ಮಿಸಿದ 11ನೇ ಮನೆಯ ಕೀ ಹಸ್ತಾಂತರಿಸಿ ಅವರು ಮಾತನಾಡಿದರು.

ವರಲಕ್ಷ್ಮೀಚಾರಿಟೆಬಲ್ ಮ್ಯಾನೇಜಿಂಗ್ ಟ್ರಸ್ಟಿ ಡಾ| ಗೋವಿಂದ ಬಾಬು ಪೂಜಾರಿ ಮಾತನಾಡಿ, ಧರ್ಮದ ಬಗ್ಗೆ ಸದಾ ಕಾಲ ದುಡಿಯುವ ಹಿಂದೂ ಸಂಘಟನೆಯ ಕಾರ್ಯಕರ್ತರ ಕುಟುಂಬದ ಸದಸ್ಯರಿಗೆ ಹಿಂದೂ ಸಮಾಜದವರುಬೆನ್ನೆಲುಬಾಗಿ ನಿಲ್ಲಬೇಕು ಎಂದರು.
ಉಳ್ಳಾಲ :ಬೈಕ್ ಅಪಘಾತ ಗಾಯಾಳುವಿನ ಮಿದುಳು ನಿಷ್ಕ್ರಿಯ; ಕುಟುಂಬಸ್ಥರಿಂದ ಅಂಗಾಂಗ ದಾನ – Vishwanews24

ವಿಹಿಂಪ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ಪುಣ್ಯದ ಕೆಲಸ ಎನ್ನುವುದು ಭಾರತೀಯರಿಗೆ ಹುಟ್ಟಿ ನಿಂದಲೇ ಬಂದಿದೆ. ಜಗತ್ತಿನಲ್ಲೇ ಭರತ ಖಂಡ ಪವಿತ್ರವಾದ ಕ್ಷೇತ್ರವಾಗಿದೆ ಎಂದರು.

ಸ್ವಾಮೀಜಿ ಶ್ರೀ ಅಭಿನವ ಹಾಲಾಶ್ರೀ ಮಾತನಾಡಿ ದಾನ ಮಾಡುವುದು ಮುಖ್ಯವಲ್ಲ ಮಾಡುವ ಉದ್ದೇಶ ದೊಡ್ಡದಿರಬೇಕು. ಧರ್ಮದ ಕಾರ್ಯ ನಿಷ್ಕಲ್ಮಶದಿಂದ ಮಾಡಿದರೆ ಮಾತ್ರ ಸಾರ್ಥಕತೆಯಿಂದ ಕೂಡಿರುತ್ತದೆ. ರಾಷ್ಟ್ರದ ಚಿಂತನೆ, ದೇಶದ ಭವಿಷ್ಯದ ಬಗ್ಗೆ ಕರಾವಳಿಗರ ಧ್ವನಿ ಗಟ್ಟಿಯಾಗಿದೆ ಎಂದರು.
ಬಿಗ್ಬಾಸ್ ಸೀಸನ್ ಗೆಲ್ಲಲು ಕೊರಗಜ್ಜನ ಆಶೀರ್ವಾದವೇ ಕಾರಣ : ಮಂಗಳೂರಿನಲ್ಲಿ ರೂಪೇಶ್ ಶೆಟ್ಟಿ – Vishwanews24
ಚೈತ್ರಾ ಕುಂದಾಪುರ, ಪ್ರಕಾಶ್ ಕುಕ್ಕೆಹಳ್ಳಿ ನಾರಾಯಣ ಶೆಟ್ಟಿ, ಬಾಬು ಪೂಜಾರಿ, ಮಂಜಮ್ಮ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ನ ಬಜರಂಗದಳದ ವತಿಯಿಂದ ಸಮಾಜ ಸೇವಕ ಡಾ| ಗೋವಿಂದ ಬಾಬು ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.
