ಕುಂದಾಪುರ : ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಗಾಣಿಗ ವಂಡ್ಸೆ ನಿಧನ -Vishwanews24

Featured, ಉಡುಪಿ

ಕುಂದಾಪುರ : ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಗಾಣಿಗ ವಂಡ್ಸೆ ನಿಧನ -Vishwanews24

ಉಡುಪಿ: ಕುಂದಾಪುರ ತಾಲ್ಲೂಕಿನ ವಂಡ್ಸೆ ಗ್ರಾಮದ ಹಿರಿಯ ಯಕ್ಷಗಾನ ಕಲಾವಿದ ವಂಡ್ಸೆ ನಾರಾಯಣ ಗಾಣಿಗ (84) ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು, ಪುತ್ರಿ ಇದ್ದಾರೆ.

ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದ ನಾರಾಯಣ ಗಾಣಿಗರು ದ್ರೌಪದಿ, ಮಂಡೋದರಿ, ಮೋಹಿನಿ ಸ್ತ್ರೀ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು‌.

ಪೆರ್ಡೂರು, ಸಾಲಿಗ್ರಾಮ, ಮಂದಾರ್ತಿ, ಮಾರಣಕಟ್ಟೆ, ಇಡಗುಂಜಿ ಯಕ್ಷಗಾನ ಮೇಳಗಳಲ್ಲಿ ಮೂರು ದಶಕಗಳಿಗೂ ಹೆಚ್ಚುಕಾಲ ದುಡಿದಿದ್ದರು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಕೊಲ್ಲೂರಿನ ವಂಡ್ಸೆ ಗ್ರಾಮದವರಾದ ನಾರಾಯಣ ಗಾಣಿಗರು, ಸುಮಾರು 28 ವರ್ಷಗಳ ಕಾಲ ಹಲವು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಮಾರಣಕಟ್ಟೆ, ಮಂದಾರ್ತಿ, ಕೊಲ್ಲೂರು, ಧರ್ಮಸ್ಥಳ, ಪೆರ್ಡೂರು, ಸಾಲಿಗ್ರಾಮ ಮತ್ತು ಇಡಗುಂಜಿ ಮೇಳಗಳಲ್ಲಿ ಇವರು ಕಲಾಕೃಷಿ ನಡೆಸಿದ್ದರು.

ನಾರಾಯಣ ಗಾಣಿಗ ಅವರು ದ್ರೌಪದಿ, ಶಶಿಪ್ರಭೆ, ಚಿತ್ರಾಂಗದೆ, ಮಂಡೋದರಿ, ಮೀನಾಕ್ಷಿ, ತಾರೆ ಮುಂತಾದ ಪಾತ್ರಗಳಲ್ಲಿ ಮಿಂಚಿದ್ದರು. ಇವರು 2008ನೇ ಸಾಲಿನಲ್ಲಿ ಯಕ್ಷಗಾನ ಅಕಾಡೆಮಿ ಪುರಸ್ಕಾರ, 2013ರಲ್ಲಿ ಮಕ್ಕಳ ಮೇಳದ ಉಡುಪ ಪ್ರಶಸ್ತಿ 2014ರಲ್ಲಿ ಯಕ್ಷ ಮಿತ್ರಕೂಟದ ರಂಗಸ್ಥಳ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದರು.

ಬಜೆಟ್ 2021 : ಭಾರತದ ಆತ್ಮವಿಶ್ವಾಸವನ್ನು ಜಗತ್ತಿಗೆ ಎತ್ತಿ ತೋರಿಸುತ್ತಿದೆ : ಪ್ರಧಾನಿ ಮೋದಿ -Vishwanews24