ಉಡುಪಿ

ಕುಂದಿದ ರಾಹುಲ್‌ ಪ್ರಭಾವ ; ಅರಳಿದ ಕಮಲ!

ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಪಾರುಪತ್ಯ ಮುಂದುವರಿಸುವ ಕಾಂಗ್ರೆಸ್‌ ಪ್ರಯತ್ನಕ್ಕೆ ರಾಹುಲ್‌ ಗಾಂಧಿಯ ಮೂರು ಬಾರಿಯ ಭೇಟಿಯೂ ಸಹಾಯವಾಗಲಿಲ್ಲ.- ಇದು ಚುನಾವಣೆ ಫ‌ಲಿತಾಂಶದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿಶ್ಲೇಷಣೆ.

ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಮೋದಿಯವರು ಬಂದಾಗಲೆಲ್ಲಾ ಬಿಜೆಪಿ ಗೆದ್ದಿದೆಯಂತೆ. ಹಾಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ದಡಕ್ಕೆ ತಲುಪಿಸಿರುವುದು ಮೋದಿ ಅಲೆಯೇ ಎಂಬುದು ಕರಾವಳಿ ನಾಗರಿಕರ ಲೆಕ್ಕಾಚಾರ. 2008ರಲ್ಲಿ ಹೀಗೆಯೇ ಆಗಿತ್ತಂತೆ. ಈ ವಿಶ್ಲೇಷಣೆ ಇಲ್ಲಿಗೇ ನಿಲ್ಲುವುದಿಲ್ಲ. ಕರಾವಳಿಯಷ್ಟೇ ಅಲ್ಲ, ರಾಹುಲ್‌ ಗಾಂಧಿ ಎಲ್ಲೆಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದರೋ ಅಲ್ಲೆಲ್ಲಾ ಕಾಂಗ್ರೆಸ್‌ ಸೋತಿದೆಯಂತೆ !

ಹನ್ನೆರಡು ಸ್ಥಾನ ನಷ್ಟ
ಎ. 27ರಂದು ಚುನಾವಣೆ ಘೋಷಣೆಯಾದ ಬಳಿಕ ಜನಾಶೀರ್ವಾದ ಯಾತ್ರೆ ಹೆಸರಿನಲ್ಲಿ ರಾಹುಲ್‌ ಗಾಂಧಿ ನಿರಂತರ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭ ಸಮಾವೇಶಗಳು, ಸಂವಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿಯನ್ನೂ ನಡೆಸಿದ್ದರು. ರಾಹುಲ್‌ ಅವರೊಂದಿಗೆ ನಿರ್ಗಮಿತ ಮುಖ್ಯಮಂತ್ರಿ ಸಿದ್ದ ರಾಮಯ್ಯ ಮತ್ತಿತರ ಪಡೆಯೇ ಇತ್ತು. ಆದರೆ ಇದ್ಯಾವುದೂ ಈ ಬಾರಿ ಕಾಂಗ್ರೆಸ್‌ ಪರ ದೊಡ್ಡ ಪ್ರಮಾಣದಲ್ಲಿ ವಕೌìಟ್‌ ಆಗಿಲ್ಲ.

2013ರಲ್ಲಿ ಕಾಂಗ್ರೆಸ್‌ ಒಟ್ಟು 43 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದು, ಅದೇ ಕ್ಷೇತ್ರಗಳಲ್ಲಿ ಈ ಬಾರಿಯೂ ಇದೇ ಕ್ಷೇತ್ರಗಳಲ್ಲಿ ರಾಹುಲ್‌ ಸಂಚರಿಸಿದ್ದರು. ಈ ಬಾರಿ 31 ಸ್ಥಾನಗಳನ್ನು ಗೆದ್ದು 12 ಸ್ಥಾನಗಳನ್ನು ಬಿಜೆಪಿಗೆ ಬಿಟ್ಟು ಕೊಟ್ಟಿದೆ. ಅರ್ಥಾತ್‌ ರಾಹುಲ್‌ ಸಮಾವೇಶ ನಡೆಸಿದಲ್ಲಿ ಕಮಲ ಅರಳಿದೆ.

ಕರಾವಳಿಯ ಕಥೆ
ಕರಾವಳಿಯಲ್ಲೂ ರಾಹುಲ್‌ ಗಾಂಧಿ ಅವರು 3 ಬಾರಿ ಜನಾಶೀರ್ವಾದ ಯಾತ್ರೆ ಹೆಸರಲ್ಲಿ ಸಂಚರಿಸಿದ್ದರು. ಒಂದು ಬಾರಿ ಮಂಗಳೂರಿನಲ್ಲಿ ಸಮಾವೇಶದಲ್ಲಿ ಭಾಗಿಯಾದರೆ, ಮತ್ತೂಮ್ಮೆ ಕಾಪುವಿನಲ್ಲಿ, ಬಿ.ಸಿ. ರೋಡಿನಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದರು. ಆದರೆ ಇಲ್ಲಿ ಉಳ್ಳಾಲ ಬಿಟ್ಟರೆ, ಉಳಿ ದೆಲ್ಲೆಡೆ ಕಾಂಗ್ರೆಸ್‌ಗೆ ಭಾರೀ ನಷ್ಟವಾಗಿದೆ.

ಮೋದಿ ನಡೆದಲ್ಲೆಲ್ಲ ಕಮಲ
ಪ್ರಧಾನಿ ಮೋದಿಯವರ ಭೇಟಿಯಿಂದ ಹೆಚ್ಚು ಲಾಭ ಪಡೆದದ್ದು ಉಡುಪಿ ಜಿಲ್ಲೆ. ಯಾಕೆಂದರೆ ಒಬ್ಬ ಹಾಲಿ ಶಾಸಕರನ್ನು ಬಿಟ್ಟರೆ (ಐದು ವರ್ಷದ ಕಾರ್ಯ ಸಾಧನೆ ಅವರ ಬೆನ್ನಿಗಿತ್ತು) ಉಳಿದವರೆಲ್ಲರೂ ಮೋದಿ ಜನಪ್ರಿಯತೆಯ ಅಲೆಯಲ್ಲೇ ದಡ ತಲುಪಿದವರು. ಈ ಬಾರಿ ಮೋದಿ ಒಟ್ಟು 210 ಕ್ಷೇತ್ರಗಳನ್ನು ತಲುಪುವ ರೀತಿ 23 ಪ್ರದೇಶಗಳಲ್ಲಿ ಪ್ರಚಾರ ಸಭೆ ನಡೆಸಿದ್ದರು. ಎಲ್ಲೆಡೆ ಸ್ಥಳೀಯ ವಿಚಾರಗಳನ್ನು ಹೆಚ್ಚಾಗಿ ಪ್ರಸ್ತಾವಿಸಿದ್ದು, ಬಿಜೆಪಿಗೆ ಚೆನ್ನಾಗಿ ಲಾಭ ಉಂಟುಮಾಡಿತು. ಪರಿಣಾಮ 90 ಕಡೆ ತಾವರೆ ಅರಳಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಭಾರೀ ಅಂತರದಲ್ಲಿ ಗೆದ್ದ ಪ್ರದೇಶ, ಜೆಡಿಎಸ್‌ ಪ್ರಾಬಲ್ಯದ ಸುಮಾರು 23 ಕ್ಷೇತ್ರಗಳ ಪೈಕಿ ಮೋದಿ ಅಲೆಗೆ 16 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಸೋತಿರುವುದು ಬರೀ ಆರರಲ್ಲಿ. ಬೃಹತ್‌ ಬೆಂಗಳೂರಿನಲ್ಲೇ 30 ಸ್ಥಾನಗಳಲ್ಲಿ 11ರಲ್ಲಿ ಮೋದಿ ಮ್ಯಾಜಿಕ್‌ ಫ‌ಲ ನೀಡಿದೆ.

 

Vishwa News 24

Recent Posts

ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡುತ್ತಾರೋ ಗೊತ್ತಿಲ್ಲ : ಶೋಭಾ ಕರಂದ್ಲಾಜೆ – vishwanews24

ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಗ್ಯಾರಂಟಿಯಿಲ್ಲ : ಶೋಭಾ ಕರಂದ್ಲಾಜೆ ಬೆಂಗಳೂರು: ಸಿದ್ದರಾಮಯ್ಯ  ಹಳೆಯ ಹುಲಿ, ಯಾವಾಗ ಯಾವ ಆಟ ಆಡುತ್ತಾರೋ…

18 hours ago

ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ರಿಪೋರ್ಟ್ ನೆಗೆಟಿವ್ : ದಿನೇಶ್ ಗುಂಡೂರಾವ್ ಸ್ಪಷ್ಟನೆ – vishwanews24

ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ರಿಪೋರ್ಟ್ ನೆಗೆಟಿವ್ : ದಿನೇಶ್ ಗುಂಡೂರಾವ್ ಸ್ಪಷ್ಟನೆ ಬೆಂಗಳೂರು: ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ…

19 hours ago

ಕಾಪು ಶ್ರೀ ಹಳೇ ಮಾರಿಯಮ್ಮ ದೇವಿಗೆ ವಿಶೇಷ ಲಕ್ಷಪುಷ್ಪಾರ್ಚನೆ – vishwanews24

ಕಾಪು ಹಳೇ ಮಾರಿಯಮ್ಮ ದೇವಿಗೆ ಲಕ್ಷಪುಷ್ಪಾರ್ಚನೆ 135 ಕೆಜಿ ಕೆಂಪು ಕೇಪುಳ ಹೂ, 1,200ಕ್ಕೂ ಅಧಿಕ ಚೆಂಡು ಮಲ್ಲಿಗೆ ಸಮರ್ಪಣೆ…

19 hours ago

ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ – vishwanews24

ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ ಮಂಗಳೂರು: ನಗರದ ಕುಲಶೇಖರದ ಕೊಂಗೂರು ನಿವಾಸಿಗಳಾದ…

20 hours ago

ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು – vishwanews24

ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು ಶಿರ್ವ: ಪತ್ನಿ, ಆಕೆಯ ಸಹೋದರಿ ಮತ್ತು ಪತ್ನಿಗೆ ಇನ್‌ಸ್ಟಾಗ್ರಾಮ್…

21 hours ago

ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ – vishwanews24

ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ ಹಳೆಯಂಗಡಿ: ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸಿಗೆ…

21 hours ago