Featured

ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ ಕೊಲೆಯಂಥ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ:ಯೋಗಿ ಆದಿತ್ಯನಾಥ್‌ – vishwanews24

ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ ಕೊಲೆ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ:ಯೋಗಿ ಆದಿತ್ಯನಾಥ್‌

ಲಕ್ನೋ,: ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ ಅಥವಾ ಕೊಲೆಯ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಅರವತ್ತಾರು ಕೋಟಿ ಜನರು ಆಗಮಿಸಿ ಭಾಗವಹಿಸಿದರು. ಕುಂಭಮೇಳದಲ್ಲಿ ಪಾಲ್ಗೊಂಡು ಸಂತೋಷದಿಂದ ಹೋಗಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಅಂಗೀಕರಿಸಲಾದ 2025-26ನೇ ಸಾಲಿನ ರಾಜ್ಯ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿಪಕ್ಷಗಳಿಗೆ ಸಿಎಂ ಯೋಗಿ ತಿರುಗೇಟು ನೀಡಿದ್ದಾರೆ.

ಪ್ರಯಾಗ್‌ರಾಜ್‌ನ ದೋಣಿ ಚಾಲಕರನ್ನು ಶೋಷಿಸಲಾಗಿದೆ ಎಂಬ ಸಮಾಜವಾದಿ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದಯೋಗಿ, ನಾನು ದೋಣಿ ಚಾಲಕನ ಕುಟುಂಬದ ಯಶಸ್ಸಿನ ಕಥೆಯನ್ನು ಹೇಳುತ್ತಿದ್ದೇನೆ. ಅವರ ಬಳಿ 130 ದೋಣಿಗಳಿವೆ. 45 ದಿನಗಳಲ್ಲಿ (ಮಹಾ ಕುಂಭ) ಅವರು 30 ಕೋಟಿ ರೂ. ಲಾಭ ಗಳಿಸಿದ್ದಾರೆ. ಇದರರ್ಥ ಪ್ರತಿ ದೋಣಿಯಿಂದ 23 ಲಕ್ಷ ರೂ. ಗಳಿಸಿದ್ದಾರೆ. ಪ್ರತಿದಿನ ಅವರು ಒಂದು ದೋಣಿಯಿಂದ 50,000-52,000 ರೂ. ಗಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮಹಾ ಕುಂಭಮೇಳಕ್ಕೆ 7,500 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿತ್ತು. ಇದರಿಂದ ದಾಖಲೆಯ 3 ಲಕ್ಷ ಕೋಟಿ ರೂಪಾಯಿ ವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಸಮರ್ಥಿಸಿಕೊಂಡಿದ್ದಾರೆ.

Vishwa News 24

Recent Posts

ಕಾರ್ಕಳ: ಅಪಘಾತದಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ರಮಾನಾಥ್ ರೈ ಡಿಸ್ಚಾರ್ಜ್ ; 15 ದಿನ ವಿಶ್ರಾಂತಿಗೆ ವೈದ್ಯರ ಸಲಹೆ -vishwanews24

ಕಾರ್ಕಳ: ಅಪಘಾತದಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ರಮಾನಾಥ್ ರೈ ಡಿಸ್ಚಾರ್ಜ್ ; 15 ದಿನ ವಿಶ್ರಾಂತಿಗೆ ವೈದ್ಯರ ಸಲಹೆ ಮಂಗಳೂರು…

4 hours ago

ಕುಂದಾಪುರ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ -vishwanews24

ಕುಂದಾಪುರ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ ಕುಂದಾಪುರ: ತಾಲೂಕಿನ ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ…

4 hours ago

ನಂದಿನಿ ಹಾಲಿನ ದರ ರೂ.8 ಹೆಚ್ಚಳ ಮಾಡಿ : ಮುಖ್ಯಮಂತ್ರಿಗೆ ಹಾಲು ಉತ್ಪಾದಕರ ಒಕ್ಕೂಟಗಳ ಮನವಿ -vishwanews24

ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.8 ಹೆಚ್ಚಳ ಮಾಡಿ : ಮುಖ್ಯಮಂತ್ರಿಗೆ ಹಾಲು ಉತ್ಪಾದಕರ ಒಕ್ಕೂಟಗಳ ಮನವಿ…

5 hours ago

ಮೋದಿಯನ್ನು ಭೇಟಿ ಮಾಡಿದ ಪೇಜಾವರ ಶ್ರೀ: ವಿಶ್ವೇಶತೀರ್ಥರ ಜನ್ಮ ಶತಾಬ್ದಿ ಲಾಂಛನ ಬಿಡುಗಡೆ -vishwanews24

ಮೋದಿಯನ್ನು ಭೇಟಿ ಮಾಡಿದ ಪೇಜಾವರ ಶ್ರೀ: ವಿಶ್ವೇಶತೀರ್ಥರ ಜನ್ಮ ಶತಾಬ್ದಿ ಲಾಂಛನ ಬಿಡುಗಡೆ ನವದೆಹಲಿ/ಉಡುಪಿ: ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ…

5 hours ago

ಉಳ್ಳಾಲ: ವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಉಳ್ಳಾಲ: ವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಉಳ್ಳಾಲ: ವಿವಾಹಿತನೋರ್ವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಪೊಲೀಸ್‌ ಠಾಣಾ…

5 hours ago

ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆ ಇಲ್ಲ :  ಕೇಂದ್ರಕ್ಕೆ ಸುಪ್ರೀಂ ಮಹತ್ವದ ಸೂಚನೆ -vishwanews24

ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆ ಇಲ್ಲ :  ಕೇಂದ್ರಕ್ಕೆ ಸುಪ್ರೀಂ ಮಹತ್ವದ ಸೂಚನೆ ನವದೆಹಲಿ : ವಂದೇ…

5 hours ago