Featured

ಮೋದಿಯನ್ನು ಭೇಟಿ ಮಾಡಿದ ಪೇಜಾವರ ಶ್ರೀ: ವಿಶ್ವೇಶತೀರ್ಥರ ಜನ್ಮ ಶತಾಬ್ದಿ ಲಾಂಛನ ಬಿಡುಗಡೆ -vishwanews24

ಮೋದಿಯನ್ನು ಭೇಟಿ ಮಾಡಿದ ಪೇಜಾವರ ಶ್ರೀ: ವಿಶ್ವೇಶತೀರ್ಥರ ಜನ್ಮ ಶತಾಬ್ದಿ ಲಾಂಛನ ಬಿಡುಗಡೆ

ನವದೆಹಲಿ/ಉಡುಪಿ: ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಚಾರಿತ್ರಿಕ ಇಂದ್ರಪ್ರಸ್ಥ ಚಾತುರ್ಮಾಸ್ಯ ವ್ರತ ಸಮಾಪ್ತಿಗೆ ಕೆಲವೇ ದಿನಗಳಿವೆ. ಈ ನಡುವೆ ಮಂಗಳವಾರ ಸಂಜೆ ಸ್ವಾಮೀಜಿಯವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.

ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವವು 2031 ರಲ್ಲಿ ನಡೆಯಲಿದೆ. ಈ ಬಗ್ಗೆ ಪಂಚವಾರ್ಷಿಕ ಯೋಜನೆಯನ್ನು ಶ್ರೀಗಳು ಹಮ್ಮಿಕೊಂಡಿದ್ದು ಅದರ ಲಾಂಛನವನ್ನು ನರೇಂದ್ರ ಮೋದೀಜಿಯವರು ಬಿಡುಗಡೆಗೊಳಿಸಿದರು.

ಪ್ರಧಾನಮಂತ್ರಿಯವರನ್ನು ಯಕ್ಷಗಾನದ ರಾಜಕಿರೀಟ ತೊಡಿಸಿ ಶಾಲು , ಸ್ವರ್ಣ ಲೇಪಿತ ಕಾಲೀಯ ಕೃಷ್ಣನ ಪ್ರತಿಮೆ ಸಹಿತ ಫಲ ಮಂತ್ರಾಕ್ಷತೆ ನೀಡಿ ಸ್ವಾಮೀಜಿಯವರು ಸಂಮಾನಿಸಿದರು. ಇದೇ ಸಂದರ್ಭ ಕಳೆದ ವಾರ ಮೋದೀಜೀಯವರ ಜನ್ಮದಿನದಂದು ಅವರ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ ಅವರ ಹೆಸರು ಗೋತ್ರ ನಕ್ಷತ್ರ ರಾಶಿಯಲ್ಲಿ ಸಂಕಲ್ಪ ನೆರವೇರಿಸಿ ವೇದವ್ಯಾಸ ಗುರುಕುಲದಲ್ಲಿ ಪೂರ್ಣ ನವಗ್ರಹ ಹೋಮ , ಹಾಗೂ ರಾಷ್ಟ್ರಸೂಕ್ತ ಹೋಮ ನಡೆಸಲಾಗಿತ್ತು .ಅದರ ಪ್ರಸಾದವನ್ನೂ ಸ್ವಾಮೀಜಿಯವರು ಶುಭ ಕೋರಿದರು.

ಸಂದೇಶ ನೀಡಿದ ಸ್ವಾಮೀಜಿಯವರು ಇಂದ್ರಪ್ರಸ್ಥದಲ್ಲಿ ನಡೆಸಿದ ಚಾತುರ್ಮಾಸ್ಯ ವ್ರತ ಅತ್ಯಂತ ಸಂತೋಷ ತಂದಿದೆ. ದೆಹಲಿಯಲ್ಲಿ ಕುಳಿತು ದೇಶ ಧರ್ಮದ ಒಳಿತಿಗಾಗಿ ಒಂದಷ್ಟು ಹೋಮ ಹವನಗಳು , ಸತ್ಸಂಗಗಳು , ಜಪಯಜ್ಞಗಳೇ ಮೊದಲಾಗಿ ಧಾರ್ಮಿಕ ವಿಧಿಗಳ ಜೊತೆಗೇ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಮಂತ್ರೋಪದೇಶ ನೀಡಿದ್ದು ತುಂಬ ಸಂತೋಷ ತಂದಿದೆ‌. ಈ ದಿನ ಪ್ರಧಾನಿಯವರಿಂದ ಗುರುಗಳ ಜನ್ಮಶತಾಬ್ದ ಪಂಚವಾರ್ಷಿಕ ಯೋಜನೆಗಳ ಲಾಂಛನ ಅನಾವರಣಗೊಂಡಿರುವುದು ಬಹಳ ಅರ್ಥಪೂರ್ಣವಾಗಿದೆ . ದೇಶ ಧರ್ಮದ ಒಳತಿಗೆ ನಿಶಿಹಗಲೆನ್ನದೇ ದುಡಿಯುತ್ತಿರುವ ಪ್ರಧಾನಿಗಳು ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಅತ್ಯಂತ ಉತ್ತಮ ರೀತಿಯಲ್ಲಿ ದೇಶವನ್ನು ಮುನ್ನಡೆಸುತ್ತಾ ದೇಶದ ಮತ್ತು ಭಾರತೀಯರ ಗೌರವವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ. ಇನ್ನೂ ಬಹುಕಾಲ ಅವರು ಯಶಸ್ವಿಯಾಗಿ ಭಾರತವನ್ನು ಮುನ್ನಡೆಸುವಂತಾಗಲಿ ಎಂದರು.ಮೋದಿಯವರು ಸಂದೇಶ ನೀಡಿ ಶ್ರೀ ವಿಶ್ವೇಶತೀರ್ಥರು ಮತ್ತು ಪೇಜಾವರ ಮಠ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳು ಸದಾ ಪ್ರೇರಣಾದಾಯಿಯಾದದ್ದು. ಬಿಜೆಪಿಗೂ ಉಡುಪಿ ನೀಡಿದ ಕೊಡುಗೆ ನಮಗೆಲ್ಲ ಯಾವತ್ತೂ ಸ್ಮರಣೀಯ .‌

ಗುರುಗಳ ಜನ್ಮ ಶತಾಬ್ದ ಯೋಜನೆಗಳು ಯಶಸ್ವಿಯಾಗಿ ಸಮಾಜಕ್ಕೆ ದೇಶಕ್ಕೆ ಮತ್ತಷ್ಟು ಬಲ‌ನೀಡುವಂತಾಗಲಿ.ಉಡುಪಿಗೂ ದ್ವಾರಕೆಗೂ ಬಹಳ ಗಾಢ ಸಂಬಂಧ ಇದೆ.‌ಆದ್ದರಿಂದ ಜನ್ಮಶತಾಬ್ದ ಯೋಜನೆಯಲ್ಲಿ ದ್ವಾರಕೆಯನ್ನೂ ಸೇರಿಸಿಕೊಂಡು ಒಂದು ಯೋಜನೆ ಮಾಡಿ ಎಂದು ಸಲಹೆ ನೀಡಿದರು.‌

ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷ ಗೌತಮ್ , ಚೆನ್ನೈ ಉಡುಪಿ ಹೋಮ್ಸ್ ಮಾಲಕ ಪಿ ರಾಮ್ ಪ್ರಸಾದ್ , ಎಂ ಆರ್ ಜಿ ಗ್ರೂಪ್ ಮುಖ್ಯಸ್ಥ ಉದ್ಯಮಿ ಕೆ ಪ್ರಕಾಶ್ ಶೆಟ್ಟಿ , ಕೊಯಮುತ್ತೂರಿನ ಉದ್ಯಮಿ ರವಿ ಶ್ಯಾಮ್ , ನವದೆಹಲಿ ಕೇಂದ್ರೀಯ ವಿವಿ ಕುಲಪತಿ ಪ್ರೊ ಶ್ರೀನಿವಾಸ ವರಖೇಡಿ , ಬೆಂಗಳೂರಿನ ಕೈಗಾರಿಕೋದ್ಯಮಿ ಹರೀಶ್ ರಾಯಸ್ , ಮೈಸೂರಿನ ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹೆಚ್ ವಾಸುದೇವ ಭಟ್ , ಬದರಿ ನಾರಾಯಣ ಲಡ್ಡಾ ,ಶ್ರೀನಿವಾಸ ಪ್ರಸಾದ್ ಮೈಸೂರು , ಟಿ ಪಿ ಅನಂತ್ ಬೆಂಗಳೂರು , ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ ವಿಠೋಬಾಚಾರ್ಯ , ಸ್ವಾಮೀಜಿಯವರ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು. ಮಠದ ಪಿ ಆರ್ ಒ ವಾಸುದೇವ ಭಟ್ ಪೆರಂಪಳ್ಳಿ ಎಲ್ಲರನ್ನೂ ಮೋದೀಜಿಯವರಿಗೆ ಪರಿಚಯಿಸಿ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.

ಲಾಂಛನವನ್ನು ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವಾಸುದೇವ ಭಟ್ ವಿನ್ಯಾಸಗೊಳಿಸಿ ಉಡುಪಿಯ ನಿಧಿ ಗ್ರಾಫಿಟೆಕ್ ನ ಮುರಲಿಕೃಷ್ಣ ರಾವ್ ಕೃತಿಗಿಳಿಸಿದ್ದಾರೆ.

Vishwa News 24

Recent Posts

ಕುಂದಾಪುರ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ -vishwanews24

ಕುಂದಾಪುರ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ ಕುಂದಾಪುರ: ತಾಲೂಕಿನ ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ…

6 minutes ago

ನಂದಿನಿ ಹಾಲಿನ ದರ ರೂ.8 ಹೆಚ್ಚಳ ಮಾಡಿ : ಮುಖ್ಯಮಂತ್ರಿಗೆ ಹಾಲು ಉತ್ಪಾದಕರ ಒಕ್ಕೂಟಗಳ ಮನವಿ -vishwanews24

ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.8 ಹೆಚ್ಚಳ ಮಾಡಿ : ಮುಖ್ಯಮಂತ್ರಿಗೆ ಹಾಲು ಉತ್ಪಾದಕರ ಒಕ್ಕೂಟಗಳ ಮನವಿ…

35 minutes ago

ಉಳ್ಳಾಲ: ವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಉಳ್ಳಾಲ: ವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಉಳ್ಳಾಲ: ವಿವಾಹಿತನೋರ್ವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಪೊಲೀಸ್‌ ಠಾಣಾ…

1 hour ago

ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆ ಇಲ್ಲ :  ಕೇಂದ್ರಕ್ಕೆ ಸುಪ್ರೀಂ ಮಹತ್ವದ ಸೂಚನೆ -vishwanews24

ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆ ಇಲ್ಲ :  ಕೇಂದ್ರಕ್ಕೆ ಸುಪ್ರೀಂ ಮಹತ್ವದ ಸೂಚನೆ ನವದೆಹಲಿ : ವಂದೇ…

1 hour ago

ಮಂಗಳೂರು : ಅಕ್ರಮವಾಗಿ ಜಾನುವಾರುಗಳ ಹಿಂಸಾತ್ಮಕ ಸಾಗಾಟ: 17 ಜಾನುವಾರುಗಳ ರಕ್ಷಣೆ ; ಓರ್ವ ಬಂಧನ  -vishwanews24

ಮಂಗಳೂರು : ಅಕ್ರಮವಾಗಿ ಜಾನುವಾರುಗಳ ಹಿಂಸಾತ್ಮಕ ಸಾಗಾಟ: 17 ಜಾನುವಾರುಗಳ ರಕ್ಷಣೆ ; ಓರ್ವ ಬಂಧನ  ಮಂಗಳೂರು: ಅಕ್ರಮವಾಗಿ ಜಾನುವಾರುಗಳನ್ನು…

3 hours ago

ನಕಲಿ ಔಷಧಿಗಳ ಜಾಲ ನಿಯಂತ್ರಣಕ್ಕೆ ಕೇಂದ್ರ ಔಷಧ ನಿಯಂತ್ರಣ ಇಲಾಖೆ ಯಿಂದ ಮಹತ್ವದ ಮಾರ್ಗಸೂಚಿ ಪ್ರಕಟ -vishwanews24

ನಕಲಿ ಔಷಧಿಗಳ ಜಾಲ ನಿಯಂತ್ರಣಕ್ಕೆ ಕೇಂದ್ರ ಔಷಧ ನಿಯಂತ್ರಣ ಇಲಾಖೆ ಯಿಂದ ಮಹತ್ವದ ಮಾರ್ಗಸೂಚಿ ಪ್ರಕಟ ಬೆಂಗಳೂರು : ನಕಲಿ…

3 hours ago