Featured

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆ : ಆದಿ ಸುಬ್ರಹ್ಮಣ್ಯ ಕ್ಷೇತ್ರದ ಮೆಟ್ಟಿಲಿನವರೆಗೂ ನೀರು – vishwanews24

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆ : ಆದಿ ಸುಬ್ರಹ್ಮಣ್ಯ ಕ್ಷೇತ್ರದ ಬಾಗಿಲಿನವರೆಗೂ ನುಗ್ಗಿದ ನೀರು

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಭಾರೀ ಮಳೆಯಾಗಿದ್ದು, ದರ್ಪಣ ತೀರ್ಥ ಹೊಳೆ ಉಕ್ಕಿ ಹರಿದಿದೆ.

ಸತತ ಮಳೆಯ ಪರಿಣಾಮ ದರ್ಪಣ ತೀರ್ಥ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಪ್ರವಾಹದ ನೀರು ಆದಿ ಸುಬ್ರಹ್ಮಣ್ಯ ಕ್ಷೇತ್ರದ ಬಾಗಿಲಿನವರೆಗೂ ನುಗ್ಗಿದೆ.

ಹೊಳೆ ನೀರು ಕ್ಷೇತ್ರದ ವ್ಯಾಪ್ತಿಗೆ ನುಗ್ಗಿದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಭಕ್ತರು ಸಂಚರಿಸಲು ಹಾಗೂ ದರ್ಶನ ಪಡೆಯಲು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಭಾರೀ ಮಳೆಯಿಂದಾಗಿ ಸ್ಥಳೀಯವಾಗಿ ಕೆಲವೆಡೆ ಅವಾಂತರದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೆ ಬುಧವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಸದ್ಯ ಬಿಸಿಲಿನ ವಾತಾವರಣ ಕಂಡುಬರುತ್ತಿದೆ. ಸತತ ಮಳೆಯ ಹಿನ್ನೆಲೆಯಲ್ಲಿ ಏರಿಕೆಯಾಗಿದ್ದ ದರ್ಪಣ ತೀರ್ಥ ನದಿಯ ನೀರಿನ ಮಟ್ಟವೂ ಗಣನೀಯವಾಗಿ ಇಳಿಕೆಯಾಗಿದೆ.

ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಸದ್ಯ ಪರಿಸ್ಥಿತಿ ಸುಧಾರಿಸುತ್ತಿದ್ದು, ಭಕ್ತರು ಹಾಗೂ ಸ್ಥಳೀಯರಲ್ಲಿ ನೆಮ್ಮದಿ ಮೂಡಿದೆ.

Vishwa News 24

Recent Posts

ರಾಜೀನಾಮೆ ವದಂತಿ: ಸಚಿವ ನಾಗೇಂದ್ರ ಸ್ಪಷ್ಟನೆ – vishwanews24

ರಾಜೀನಾಮೆ ವದಂತಿ: ಸಚಿವ ನಾಗೇಂದ್ರ ಸ್ಪಷ್ಟನೆ ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಹರಡಿರುವ ವದಂತಿಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಬಿ.ನಾಗೇಂದ್ರ,…

6 minutes ago

ನಮ್ಮ ಧರ್ಮದ ಬಗ್ಗೆ ನಾವೇ ತೀರ್ಮಾನಿಸುತ್ತೇವೆ : ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿಗೆ ಓವೈಸಿ ಆಕ್ರೋಶ – vishwanews24

ಅಲಹಾಬಾದ್ ಹೈಕೋರ್ಟ್ ತೀರ್ಪು ಇಸ್ಲಾಂ ಧರ್ಮದ ಮೇಲಿನ ದಾಳಿ ನಮ್ಮ ಧರ್ಮ, ನಾವೇ ನಿರ್ಧರಿಸುತ್ತೇವೆ : ಓವೈಸಿ ಆಕ್ರೋಶ ಹೈದರಾಬಾದ್:…

18 minutes ago

ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ : ಬೆಂಬಲ ಕೋರಿ ಸಿಎಂಗೆ ಪತ್ರ ಬರೆದ ಕ್ಯಾ.ಚೌಟ – vishwanews24

ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ : ಬೆಂಬಲ ಕೋರಿ ಸಿಎಂಗೆ ಪತ್ರ ಬರೆದ ಕ್ಯಾ.ಚೌಟ ಮಂಗಳೂರು: ಮಂಗಳೂರು…

52 minutes ago

ಮಂಗಳೂರು: ಸಾಂಬಾರ್‌ನಲ್ಲಿ ಜಿರಳೆ ; ತೊಕ್ಕೊಟ್ಟುವಿನ ಹೋಟೆಲ್ ಮೇಲೆ ಆರೋಗ್ಯ ಅಧಿಕಾರಿಗಳ ದಾಳಿ – vishwanews24

ಮಂಗಳೂರು: ಸಾಂಬಾರ್‌ನಲ್ಲಿ ಜಿರಳೆ ; ತೊಕ್ಕೊಟ್ಟುವಿನ ಹೋಟೆಲ್ ಮೇಲೆ ಆರೋಗ್ಯ ಅಧಿಕಾರಿಗಳ ದಾಳಿ ಮಂಗಳೂರು: ಸಾಂಬಾರ್‌ನಲ್ಲಿ ಜಿರಳೆ ಪತ್ತೆಯಾಗಿದೆ ಎಂಬ…

54 minutes ago

ಹೆಚ್‌ಡಿಕೆ, ನಿಖಿಲ್‌ ನೇತೃತ್ವದಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷದ ನೂರಾರು ಕಾರ್ಯಕರ್ತರು ಇಂದು ಜೆಡಿಎಸ್‌ ಸೇರ್ಪಡೆ – vishwanews24

ಹೆಚ್‌ಡಿಕೆ, ನಿಖಿಲ್‌ ನೇತೃತ್ವದಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷದ ನೂರಾರು ಕಾರ್ಯಕರ್ತರು ಇಂದು ಜೆಡಿಎಸ್‌ ಸೇರ್ಪಡೆ ಚಿಕ್ಕಮಗಳೂರು: ಮೂಡಿಗೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ…

1 hour ago

ವಿಟ್ಲ:  ಕಾರು ಮತ್ತು ದ್ವಿಚಕ್ರ ವಾಹನ ಭೀಕರ ಅಪಘಾತ; ಸವಾರ ಮೃತ್ಯು – vishwanews24

ವಿಟ್ಲ:  ಕಾರು ಮತ್ತು ದ್ವಿಚಕ್ರ ವಾಹನ ಭೀಕರ ಅಪಘಾತ; ಸವಾರ ಮೃತ್ಯು ವಿಟ್ಲ: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಸಂಭವಿಸಿದ…

20 hours ago