ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಭಕ್ತಿ, ಸಂಭ್ರಮದಿಂದ ಬೆಳ್ಳಿರಥ ಸಮರ್ಪಣೆ – vishwanews24
ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಭಕ್ತಿ, ಸಂಭ್ರಮದಿಂದ ಬೆಳ್ಳಿರಥ ಸಮರ್ಪಣೆ
ಸುಬ್ರಹ್ಮಣ್ಯ : ಸುಳ್ಯದ ಎಒಎಲ್ಇ ಕಮಿಟಿ ಅಧ್ಯಕ್ಷ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರು ಸೇವಾ ರೂಪದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಬೆಳ್ಳಿರಥ ಸಮರ್ಪಣೆ ಕಾರ್ಯಕ್ರಮ ವೈದಿಕ, ಪೂಜಾ ವಿಧಿವಿಧಾನಗಳೊಂದಿಗೆ ಭಕ್ತಿ, ಸಂಭ್ರಮದಿಂದ ಸೋಮವಾರ ಜರುಗಿತು.
ಭಾನುವಾರ ಸಂಜೆ ದೇವಸ್ಥಾನದಲ್ಲಿ ವಾಸ್ತು ರಕ್ಷೋಘ್ನ ಹೋಮ, ಶುದ್ಧಿ ಕಲಶ, ವಾಸ್ತು ಬಲಿ, ವಾಸ್ತು ಪೂಜೆ ನಡೆಯಿತು. ಸೋಮವಾರ ಬೆಳಿಗ್ಗೆ ಸುಬ್ರಹ್ಮಣ್ಯ ಹೋಮ, ಪವಮಾನ ಹೋಮ ನಡೆದುಬಳಿಕ ಪೂರ್ಣಾಹುತಿಗೊಂಡು ದೇವರಿಗೆ ಬೆಳ್ಳಿರಥ ಸಮರ್ಪಿಸಲಾಯಿತು. ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಬೆಳ್ಳಿರಥ ಸಮರ್ಪಿಸಿದ ಡಾ.ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರು, ಅಮರಶ್ರೀ ಕುರುಂಜಿ ಕಾಂತಮಂಗಲ ಅವರಿಗೆ ದೇವಸ್ಥಾನದ ವತಿಯಿಂದ ಕೃತಜ್ಞತಾ ಪತ್ರ ನೀಡಲಾಯಿತು.
ಸ್ವತಂತ್ರ ಭಾರತದ ಅತ್ಯಂತ ದುರ್ಬಲ, ಅಸಮರ್ಥ ಗೃಹ ಸಚಿವ ಅಮಿತ್ ಶಾ : ಪ್ರಿಯಾಂಕ್ ಖರ್ಗೆ ಆಕ್ರೋಶ – vishwanews24
