ಕುಟುಂಬ ರಾಜಕಾರಣಕ್ಜೆ ಜೋತು ಬಿದ್ದಿರುವ ಕುಮಾರಸ್ವಾಮಿ ಅವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತಿದೆ..: ನಳಿನ್ ಕುಮಾರ್ ಕಟೀಲ್ – Vishwanews24

Featured, ರಾಜ್ಯ ನ್ಯೂಸ್

ಕುಟುಂಬ ರಾಜಕಾರಣಕ್ಜೆ ಜೋತು ಬಿದ್ದಿರುವ ಕುಮಾರಸ್ವಾಮಿ ಅವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತಿದೆ..

ಆರ್‌ಎಸ್‌‌ಎಸ್‌‌ನಿಂದ ದೇಶಕ್ಕೆ ಸೇವೆ ಏನೆಂಬುದು ತಿಳಿಯಲು ಎಚ್‌ಡಿಕೆ ಸಂಘ ಶಾಖೆಗೆ ಬರಲಿ: ನಳಿನ್ ಕುಮಾರ್ ಕಟೀಲ್

ಹುಬ್ಬಳ್ಳಿ: ಆರ್‌ಎಸ್‌‌ಎಸ್‌‌ ಸಂಘ ಏನು ಮಾಡುತ್ತಿದೆ, ದೇಶಕ್ಕೆ ಅದರ ಸೇವೆ ಏನೆಂಬುದು ತಿಳಿಯಲು ಎಚ್.ಡಿ.ಕುಮಾರಸ್ವಾಮಿ ಅವರು ಸಂಘ ಶಾಖೆಗೆ ಬಂದು ನೋಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆರ್‌ಎಸ್‌‌ಎಸ್‌ ರಾಷ್ಟ್ರ ಕಟ್ಟುವ, ಸೇವೆ ಸಲ್ಲಿಸುವ ಕಾಯಕದಲ್ಲಿ ತೊಡಗಿದ್ದು, ದೇಶದಲ್ಲಿ ಅಷ್ಟೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ತನ್ನ ಕಾರ್ಯಕ್ಷೇತ್ರ ಹೊಂದಿದೆ ಎಂಬುದನ್ನು ಕುಮಾರಸ್ವಾಮಿ ತಿಳಿದುಕೊಳ್ಳಲಿ. ಕುಟುಂಬ ರಾಜಕಾರಣಕ್ಜೆ ಜೋತು ಬಿದ್ದಿರುವ ಕುಮಾರಸ್ವಾಮಿ ಅವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತಿದೆ” ಎಂದರು.

ಇನ್ನು “ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ಎಲ್ಲರೂ ಕೂಡ ಬೇಲ್ ಮೇಲೆ ಇದ್ದಾರೆ. ರಾಹುಲ್ ಗಾಂಧಿ ಮಾದಕದ್ರವ್ಯ ವ್ಯಸನಿ ಎಂಬುದನ್ನು ಮಾಧ್ಯಮಗಳು ಹೇಳಿದ್ದು, ಇನ್ನೊಂದು ಕಡೆ ಮೆಚ್ಚುವ ರೀತಿ ಆಡಳಿತ ನೀಡುತ್ತಿರುವ ಪ್ರಧಾನಿ ಮೋದಿಯವರ ಬಗ್ಗೆ ಜನಮನ್ನಣೆ ಹೆಚ್ಚುತ್ತಿದೆ. ಮೋದಿಯವರು ಸಬ್ ಕಾ ಸಥ್ ಸಬ್ ಕಾ ವಿಕಾಸ ಎಂದರೆ, ಮುಸ್ಲಿಮರ ಅಭಿವೃದ್ಧಿಯೊಂದೇ ಎಂಬಂತೆ ವರ್ತಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಮಂಗಳೂರು : ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನ – Vishwanews24