ಕುಮಾರಸ್ವಾಮಿಗಿಂತ ಯಡಿಯೂರಪ್ಪರೇಎಷ್ಟೋ ಮೇಲು..! ಅವರೇ ನಮ್ಮ ಸಿಎಂ..! ಇನ್ನೆಂದು ಜೆಡಿಯಸ್ ಅಧಿಕಾರಕ್ಕೆ ಬರಲ್ಲ, ವೋಟನ್ನು ಹಾಕಲ್ಲ ಸಿಎಂ ವಿರುದ್ಧ ರಾಜ್ಯದ ರೈತರು ಗರಮ್

Featured, ರಾಜ್ಯ ನ್ಯೂಸ್

ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಮಾಡಿಕೊಂಡ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಲಕ್ ತುಂಬಾ ಹದಗೆಟ್ಟಿದಂತಿದೆ. ಯಾಕೆಂದರೆ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ಜೊತೆ ಕೈಜೋಡಿಸಿಕೊಂಡರೆ, ಇತ್ತ ಕುಮಾರಸ್ವಾಮಿ ಅವರು ಅಧಿಕಾರದ ಆಸೆಗೆ ಬಲಿಯಾಗಿ ಮೈತ್ರಿಗೆ ಒಪ್ಪಿಕೊಂಡರು. ಆದರೆ ರಾಜ್ಯದ ಜನ ಒಪ್ಪಿಕೊಂಡಿರುವುದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾ ಪಕ್ಷವನ್ನೇ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಕಿತ್ತೊಗೆದಿದ್ದರೂ ಕೂಡ ತಮ್ಮ ಲಾಭಕ್ಕಾಗಿ ಸರಕಾರ ರಚಿಸುವಲ್ಲಿ ಯಶಸ್ವಿಯಾದರು. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ರಾಜ್ಯದ ಜನರು ಇನ್ನೂ ಒಪ್ಪಿಕೊಂಡಿಲ್ಲ ಎಂಬುದಕ್ಕೆ ಮಂಡ್ಯದಲ್ಲಿ ಕಂಡುಬಂದ ಅನ್ನದಾತನ ಆಕ್ರೋಶವೇ ಕಾರಣವಾಯಿತು. ‌

ರೈತರ ನಾಯಕ ಎನಿಸಿಕೊಂಡೇ ರಾಜಕೀಯಕ್ಕೆ ಬಂದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರು ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದಲ್ಲಿ ರೈತರಿಗೆಂದೇ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದ್ದರು. ರೈತರ ಕೃಷಿ ಸಾಲಮನ್ನಾ, ಉತ್ತಮ ಬೆಂಬಲ ಬೆಲೆ, ಹೀಗೆ ಅನೇಕ ಯೋಜನೆಗಳಿಂದ ರಾಜ್ಯದ ರೈತರ ಹಿತ ಕಾಯುತ್ತಿದ್ದ ಬಿಎಸ್‌ವೈ ಇದೇ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಕೂಡ ಸ್ವೀಕರಿಸಿದ್ದರು. ಬಿಎಸ್ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗುತ್ತಿದ್ದಂತೆ ರಾಜ್ಯದ ಜನರಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಿತ್ತು. ಯಾಕೆಂದರೆ ರೈತರ ಸಂಪೂರ್ಣ ಸಾಲಮನ್ನಾದ ಭರವಸೆ ನೀಡಿದ್ದ ಬಿಎಸ್‌ವೈ ಸಾಲ ಮನ್ನಾ ಮಾಡುವ ನಂಬಿಕೆ ರೈತರಲ್ಲಿತ್ತು. ಆದರೆ ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಅವಕಾಶ ಮಾಡಿಕೊಡಲಿಲ್ಲ. ತಾವೇ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಿಬಿಟ್ಟರು. ಆದರೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ರಾಜ್ಯದ ರೈತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂಬ ವಿಚಾರ ಅವರ ಮೊದಲ ಬಜೆಟ್‌ನಲ್ಲೇ ಗೊತ್ತಾಗಿದೆ.‌

ಅದಕ್ಕಾಗಿಯೇ ಆಕ್ರೋಶಗೊಂಡ ರೈತರು ರಾಜ್ಯದ ಅನೇಕ ಕಡೆಗಳಲ್ಲಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ ಮಂಡ್ಯದಲ್ಲಿ ನಡೆದ ಪ್ರತಿಭಟನೆಯ ವೇಳೆ ರೈತರು ತಮಗೆ ಕುಮಾರಸ್ವಾಮಿ ಅವರಿಗಿಂತ ಬಿಎಸ್ ಯಡಿಯೂರಪ್ಪ ನವರೇ ಎಷ್ಟೋ ಮೇಲು , ರಾಜ್ಯದ ಜನರ ಹಿತಕ್ಕಾಗಿ ಅವರು ಕೈಗೊಂಡ ನಿರ್ಧಾರಗಳ ಮುಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿರ್ಧಾರಗಳು ಶೂನ್ಯ ಎಂದು ಅಸಮಧಾನ ಹೊರಹಾಕಿದ್ದಾರೆ. ಅಧಿಕಾರ ಸಿಗುವುದಕ್ಕೂ ಮೊದಲು ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿದ್ದ ಕುಮಾರಸ್ವಾಮಿ ಅವರು ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರೈತರನ್ನು ಸಂಪೂರ್ಣ ಮರೆತಿದ್ದಾರೆ.‌ ಆದ್ದರಿಂದ ಇಂತಹ ಮುಖ್ಯಮಂತ್ರಿಗಳ ಅಗತ್ಯ ರಾಜ್ಯದ ಜನರಿಗಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಛೀಮಾರಿ ಹಾಕಿದ್ದಾರೆ.!