ಕುಮಾರಸ್ವಾಮಿಯನ್ನು ಬಂಧಿಸುವ ಸನ್ನಿವೇಶ ಬಂದರೆ ಮುಲಾಜಿಲ್ಲದೆ ಅರೆಸ್ಟ್ ಮಾಡುತ್ತೇವೆ : ಮುಖ್ಯಮಂತ್ರಿ – vishwanews24
ಕುಮಾರಸ್ವಾಮಿಯನ್ನು ಬಂಧಿಸುವ ಸನ್ನಿವೇಶ ಬಂದರೆ ಮುಲಾಜಿಲ್ಲದೆ ಅರೆಸ್ಟ್ ಮಾಡುತ್ತೇವೆ : ಮುಖ್ಯಮಂತ್ರಿ
ಕೊಪ್ಪಳ: ಕುಮಾರಸ್ವಾಮಿಯನ್ನು ಬಂಧಿಸುವ ಸನ್ನಿವೇಶ ಬಂದಿಲ್ಲ. ಅಂಥ ಸನ್ನಿವೇಶ ಬಂದರೆ ಮುಲಾಜಿಲ್ಲದೆ ಅರೆಸ್ಟ್ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುತ್ತಾರೋ ಎಂದು ಕುಮಾರಸ್ವಾಮಿ ಅವರು ಭಯ ಪಟ್ಟಿದ್ದಾರೆ. ಈಗಾಗಲೇ ಅವರನ್ನು ಲೋಕಾಯುಕ್ತ ಹಾಗೂ ಎಸಿಬಿ ಸಂಸ್ಥೆಗಳು ತನಿಖೆ ಮಾಡಿವೆ. ಕುಮಾರಸ್ವಾಮಿ ವಿರುದ್ಧ ಸಾಕಷ್ಟು ದಾಖಲೆ ಸಿಕ್ಕಿವೆ. ಈ ಹಿನ್ನೆಲೆ ಲೋಕಾಯುಕ್ತ ಸಂಸ್ಥೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಕೇಳಿದ್ದಾರೆ. ಕುಮಾರಸ್ವಾಮಿಗೆ ಭಯ ಬಂದಿದೆ. ಅದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯಲ್ಲಿ ಆಂತರಿಕವಾಗಿ ಸಮಸ್ಯೆಯಿದೆ , ಅದನ್ನು ಸರಿ ಮಾಡಿಕೊಳ್ಳಲು ಪ್ರತಿಭಟನೆ : ಡಿಕೆಶಿ ವ್ಯಂಗ್ಯ – vishwanews24
ನನ್ನ ಕೇಸ್ ನಲ್ಲಿ ಯಾವುದೇ ತನಿಖೆ ಆಗಿಲ್ಲ. ಕೇವಲ ಟಿ.ಜೆ.ಅಬ್ರಹಾಂ ಬರೆದ ಪತ್ರದ ಆಧಾರದ ಮೇಲೆ ರಾಜ್ಯಪಾಲರು ನನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಒಪ್ಪಿಗೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್,ಸಚಿವ ಎಂ.ಬಿ ಪಾಟೀಲ್,ಮಾಜಿ ಸಂಸದ ಕರಡಿ ಸಂಗಣ್ಣ ಮುಂತಾದವರು ಉಪ್ಥಿತರಿದ್ದರು.
ಉಡುಪಿ: ಹೆಚ್ಚುವರಿ ಟೋಲ್ ದರ ವಿರೋಧಿಸಿ ಮುಷ್ಕರ ಹಿಂಪಡೆದ ಕೆನರಾ ಬಸ್ ಮಾಲಕರ ಸಂಘ – vishwanews24
