ಕುಮಾರಸ್ವಾಮಿ ಬಜೆಟ್ ಮಂಡನೆ ; ಬಜೆಟ್ ವಿರೋಧಿಸಿ ಬಿಜೆಪಿ ಶಾಸಕರ ಸಭಾತ್ಯಾಗ – Vishwanews24
ಬೆಂಗಳೂರು: ಬಜೆಟ್ ಅಧಿವೇಶನದ ಶುಕ್ರವಾರದ ಕಲಾಪ ಆರಂಭವಾಗುತ್ತಲೇ ಬಿಜೆಪಿ ಶಾಸಕರು ಸದನದಲ್ಲಿ ಗದ್ದಲ ಎಬ್ಬಿಸಿ, ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಂದ ಬಜೆಟ್ ಮಂಡನೆಗೆ ಅಡ್ಡಿಪಡಿಸಲು ಯತ್ನಿಸಿದರು. ಆದರೂ ಇದಕ್ಕೆ ಜಗ್ಗದ ಕುಮಾರಸ್ವಾಮಿ ಬಜೆಟ್ ಓದಲು ಆರಂಭಿಸಿದರು.
ತಮ್ಮ ವಿರೋಧದ ಬಗ್ಗೆ ಒಂದಿಷ್ಟೂ ಬೆಲೆ ಕೊಡದೆ ಸಿಎಂ ಬಜೆಟ್ ಮಂಡಿಸುವ ಪ್ರಕ್ರಿಯೆ ಮುಂದುವರಿಸಿದ್ದರಿಂದ, ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.
2ನೇ ಬಜೆಟ್: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಸಿಎಂ ಕುಮಾರಸ್ವಾಮಿ ಮಂಡಿಸುತ್ತಿರುವ 2ನೇ ಬಜೆಟ್ ಇದಾಗಿದೆ. ನೇಗಿಲ ಯೋಗಿಗೆ ನೆರವು, ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ಒತ್ತು. ನಮ್ಮಲ್ಲಿ ಉತ್ತರ, ದಕ್ಷಿಣ, ಕರಾವಳಿ ಎಂಬ ಬೇಧ-ಭಾವ ಇಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವುದಾಗಿ ಹೇಳಿದರು. ಕೊಡಗಿನಲ್ಲಿ ನಿರಾಶ್ರಿತರಿಗೆ 800ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

