ಕೃಷಿಪತ್ತಿನ ಸಹಕಾರಿ ಸಂಘಗಳು ಕೃಷಿಕರಿಗೆ ಸವಲತ್ತು ನೀಡುವಲ್ಲಿ ವಿಫಲ-ಉಳ್ಳವರಿಗೆ ಡಿವಿಡೆಂಟ್ ನೀಡುವಲ್ಲಿ ಸಫಲ: ಕುತ್ಯಾರ್ ಪ್ರಸಾದ್ ಶೆಟ್ಟಿ ಆರೋಪ
ಕೃಷಿಪತ್ತಿನ ಸಹಕಾರಿ ಸಂಘಗಳು ಕೃಷಿಕರಿಗೆ ಸವಲತ್ತು ನೀಡುವಲ್ಲಿ ವಿಫಲ-ಉಳ್ಳವರಿಗೆ ಡಿವಿಡೆಂಟ್ ನೀಡುವಲ್ಲಿ ಸಫಲ: ಕುತ್ಯಾರ್ ಪ್ರಸಾದ್ ಶೆಟ್ಟಿ ಆರೋಪ : vishwanews24
ಕಾಪು: ಕೃಷಿ ಪತ್ತಿನ ಸಹಕಾರಿ ಸಂಘಗಳು ಹಸಿರು ನಾಮಫಲಕವನ್ನು ಅಳವಡಿಸಿಕೊಂಡು ಕೃಷಿಕರಿಗೆ ಯಾವುದೇ ರೀತಿಯ ಸವಲತ್ತು ನೀಡುವಲ್ಲಿ ವಿಫಲವಾಗಿದೆ ಮಾತ್ರವಲ್ಲದೆ ಮೂಲಬಂಡವಾಳ ದಲ್ಲಿ ಬರುವ ಲಾಭವನ್ನು ಕೃಷಿಕರಿಗೆ ಹಂಚದೆ ಕೇವಲ ಉಳ್ಳವರಿಗೆ ಡಿವಿಡೆಂಟ್ ನೀಡುವ ಮುಖಾಂತರ ಇಬ್ಭಾಗದ ನೀತಿಯನ್ನು ಅನುಸರಿಸುತ್ತಿದೆ ಎಂದು ಶಿರ್ವ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಅವರು ಸಹಕಾರ ಭಾರತಿ ಕಾಪು ತಾಲೂಕಿನ ವತಿಯಿಂದ ಹಮ್ಮಿಕೊಂಡ ಸಹಕಾರ ಭಾರತಿ ಸ್ಥಾಪನಾ ದಿನಾಚರಣೆಯಲ್ಲಿ ಹೇಳಿದರು.
