ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ ಕೇಸ್: ಡ್ರೋನ್ ಪ್ರತಾಪ್‌ನ ಇಬ್ಬರು ಸ್ನೇಹಿತರು ಅರೆಸ್ಟ್ – vishwanews24

Featured, ರಾಜ್ಯ ನ್ಯೂಸ್

ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ ಕೇಸ್: ಡ್ರೋನ್ ಪ್ರತಾಪ್‌ನ ಇಬ್ಬರು ಸ್ನೇಹಿತರು ಅರೆಸ್ಟ್ ..

ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‌ನ ಇಬ್ಬರು ಸ್ನೇಹಿತರನ್ನು ಮಿಡಿಗೇಶಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕ್ಯಾಮೆರಾ ಮ್ಯಾನ್ ವಿನಯ್ ಹಾಗೂ ಸೋಡಿಯಂ ಕೊಡಿಸಿದ್ದ ಪ್ರಜ್ವಲ್ ಎಂಬಾತ ಬಂಧಿತರು.

ಕೇರಳ : ಭೀಕರ ರಸ್ತೆ ಅಪಘಾತ-ನವದಂಪತಿ ಸೇರಿ ಒಂದೇ ಕುಟುಂಬದ ನಾಲ್ವರು ಮೃತ್ಯು – vishwanews24

ಡ್ರೋನ್ ಪ್ರತಾಪ್ ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಗಡಿಯೊಂದರಲ್ಲಿ ಸೋಡಿಯಂ ಖರೀದಿ ಮಾಡಿದ್ದ. ಈ ಹಿನ್ನೆಲೆ ಸ್ಥಳ ಮಹಜರು ನಡೆಸಿದ ಪೊಲೀಸರು ಶನಿವಾರ ಮಧ್ಯರಾತ್ರಿ ಬೆಂಗಳೂರಿನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಫಾರಂ ಹೌಸ್ ಮಾಲೀಕ ಜಿತೇಂದ್ರ ಜೈನ್ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಡ್ರೋನ್ ಪ್ರತಾಪ್‌ನನ್ನು ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣ ಸಂಬಂಧ ಡ್ರೋನ್ ಪ್ರತಾಪ್, ಜಮೀನಿನ ಮಾಲೀಕ ಸೇರಿದಂತೆ ಮೂವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಮಿಡಿಗೇಶಿ ಪೊಲೀಸರಿಂದ ಸುಮೋಟೋ ಕೇಸ್ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಉಡುಪಿ: ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ; ಸಹಸವಾರ ಮೃತ್ಯು, ಸವಾರ ಗಂಭೀರ ಗಾಯ – vishwanews24

Leave a Reply