ಕೆಫೆ ಕಾಫಿ ಡೇ ಸಂಸ್ಥೆಯ ನೂತನ ಹಂಗಾಮಿ ಅಧ್ಯಕ್ಷರಾಗಿ ಎಸ್‌ ವಿ ರಂಗನಾಥ್ ನೇಮಕ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ್ ಅಕಾಲ ಮೃತ್ಯುವಶರಾಗಿರುವ ಹಿನ್ನೆಲೆಯಲ್ಲಿ ಕಾಫಿ ಡೇ ಎಂಟರ್‌ಪ್ರೈಸಸ್ ಎಸ್‌.ವಿ.ರಂಗನಾಥ್ ಅವರನ್ನು ನೂತನ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಕಂಪನಿಯು ನಿತಿನ್ ಬಾಗ್ಮನೆ  ಅವರನ್ನು ಸಹ ಮಧ್ಯಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿದೆ.

ಎಸ್‌ವಿ ರಂಗನಾಥ್ (ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕ), ನಿತಿನ್ ಬಾಗ್ಮನೆ (ಸಿಒಒ) ಮತ್ತು ಆರ್ ರಾಮ್ ಮೋಹನ್ ಅವರನ್ನೊಳಗೊಂಡ ಕಾರ್ಯಕಾರಿ ಸಮಿತಿಯು ಈ ಮುನ್ನ ಸಿಇಓ ಅವರಿಗಿದ್ದ ಜವಾಬ್ದಾರಿಯನ್ನು ನಿಭಾಯಿಸಲಿದೆ ಎಂದು ಕಂಪನಿ ಹೇಳಿದೆ.